ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಟರ ಅಂಗಳದಲ್ಲಿದೆ-ವಿಜಯೇಂದ್ರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಬಿಜೆಪಿ ಪಕ್ಷದ ಮುಂದಿನ ರಾಜ್ಯಾಧ್ಯಕ್ಷರ ಆಯ್ಕೆಯು ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು ನಾನು ಕೇವಲ ಪಕ್ಷ ಸಂಘಟನೆ ಯಲಿ ಬಿಜಿಯಾಗಿರುವೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು
ಅವರು ಪಟ್ಟಣದ ಶಾಸಕ ಮಾನಪ್ಪ ವಜ್ಜಲರ ನಿವಾಸದಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯಾಧ್ಯಕ್ಷರ ಆಯ್ಕೆ ನಮ್ಮ ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು ನಾನು ಪಕ್ಷ ಸಂಘಟನೆಯಲಿ ಬಿಜಿಯಾಗಿರುವೆ ಎಂದರು
ಕೂಡಲಸಂಗಮ ದ ಗುರುಪೀಠದ ಬಗೆಗೆ ಎದ್ದಿರುವ ಗಲಾಟೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಅದರ ಬಗ್ಗೆ ಮುರುಗೇಶ ನಿರಾಣಿಯವರು ನಿಗಾವಹಿಸಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಸುಖಾಂತ್ಯ ಕಾಣಲಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ್ ಪಿ ರಾಜು,ಹಿರಿಯ ಮುಖಂಡರಾದ ಗಿರಿಮಲ್ಲನಗೌಡ,ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ, ತಾಲೂಕಾಧ್ಯಕ್ಷರಾದ ನಾಗಭೂಷಣ,ಮಾಜಿ ಅಧ್ಯಕ್ಷರಾದ ಅಯ್ಯಪ್ಪ ಮಾಳೂರು,ಸೇರಿದಂತೆ ಇದ್ದರು