ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹೃದ್ರೋಗ,ಲಿಂಗಸಗೂರು ನಿರಾಳ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದ್ರೋಗ ಹೆಚ್ಚು ಸದ್ದು ಮಾಡುತ್ತಿದ್ದು ಅಲ್ಲಲ್ಲಿ ಜೀವಹಾನಿ ವರದಿ ಕೇಳಿ ಬರುತ್ತಿವೆ ಅದರ ಬೆನ್ನುಹತ್ತಿ ಪತ್ರಿಕೆ ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರೆ ಇಲ್ಲಿ ಅಂತಹ ಯಾವುದೆ ಪ್ರಕರಣಗಳು ಕಂಡು ಬಂದಿಲ್ಲ ಎನ್ನುವುದೇ ಸಮಾಧಾನಕರವಾದ ವಿಷಯವಾಗಿದೆ
ರಾಜ್ಯದಲ್ಲಿ ಹೃದ್ರೋಗ ಹೆಚ್ಚು ಸದ್ದುಮಾಡುತ್ತಿದ್ದು ತಾಲೂಕಿನಲ್ಲಿ ಹೇಗಿರಬಹುದೆಂದು ಪತ್ರಿಕೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದಾಗ ಇಲ್ಲಿ ಅಂತಹ ಯಾವುದೆ ಹೃದಯವನ್ನು ಪರೀಕ್ಷೆ ಮಾಡಿಸಿಕೊಳ್ಳುವ ಹೆಚ್ಚುಪ್ರಕರಣಗಳು ಕಂಡು ಬರಲಿಲ್ಲ. ಸಾಮಾನ್ಯವಾಗಿ ಪ್ರತಿತಿಂಗಳು ಬರುವಂತೆ ಕೆಲವೇ ಕೆಲಜನರು ಮಾತ್ರ ಹೃದಯ ಪರೀಕ್ಷೆ ಮಾಡಿಸಿಕೊಂಡಿರುವುದಾಗಿ ತಿಳಿದುಬಂದಿತು
ಜೂನ್ ತಿಂಗಳ ವರದಿಯಂತೆ ಹೃದಯ ಪರೀಕ್ಷೆ ಅಂದರೆ ಇಸಿಜಿ ಮಾಡಿಸಿಕೊಂಡವರು ೨೦ ವರ್ಷದ ಒಳಗಿನವರು೦೮ ಜನರು, ೨೦ರಿಂದ೪೦ ವರ್ಷ ವಯಸಿನವರು ೭೯ ಜನರು,೪೦ರಿಂದ೫೦ ವರ್ಷದವರು ೧೭ ಜನರು ಹಾಗೂ ೬೦ಕ್ಕೂ ಹೆಚ್ಚು ವಯಸಿನವರು ೩೫ ಜನರು ಪರೀಕ್ಷೆ ಮಾಡಿಸಿಕೊಂಡಿದ್ದು ಇಬ್ಬರು ಮಾತ್ರ ಎದೆನೋವು ಎಂದು ಆಸ್ಪತ್ರೆಗೆ ಬಂದಿದ್ದು ಅವರನ್ನು ಪರೀಕ್ಷೆ ಮಾಡಿ ಒಬ್ಬರನ್ನು ರಾಯಚೂರು ಆಸ್ಪತ್ರೆಗೆ ಕಳಿಸಲಾಗಿದೆ ಮತ್ತೊಬ್ಬರಿಗೆ ಇಲ್ಲಿಯೆ ಚಿಕಿತ್ಸೆ ನೀಡಲಾಗಿದ್ದು ಗುಣಮುಖರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ
ಹೇಳಿಕೆ:ಹೃದಯ ರೋಗವು ಇತ್ತೀಚಿನ ಆಹಾರ ಕ್ರಮ ಹಾಗೂ ದೈಹಿಕಶ್ರಮ ಇಲ್ಲದೆ ಇರುವುದರಿಂದ ಹೃದಯರೋಗ ಹೆಚ್ಚು ಕಾನಿಸಿಕೊಳ್ಳಲು ಕಾರಣವಾಗಿದೆ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಟ್ಟಿಯಾದ ಆಹಾರವಿದೆ ಅಲ್ಲದೆ ಇಲ್ಲಿ ಶ್ರಮಜೀವಿಗಳಿದ್ದಾರೆ ಹೀಗಾಗಿ ನಮ್ಮ ಭಾಗದಲ್ಲಿ ಹೃದಯ ಖಾಯಿಲೆ ಅಷ್ಟೊಂದು ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ ಹೃದಯ ಪರೀಕ್ಷೆ ಬರುವವರ ಸಂಖ್ಯೆಯು ಇಲ್ಲಿ ಸಾಮಾನ್ಯವಾಗಿದೆ ಗಟ್ಟಿಯಾದ ಆಹಾರ ಅದಕ್ಕೆ ತಕ್ಕಂತೆ ದೈಹಿಕ ಶ್ರಮ ನಮ್ಮ ಹೃದಯವನ್ನು ಕಾಪಾಡುತ್ತದೆ-ಡಾ ರುದ್ರಗೌಡ ಪಾಟೀಲ್-ಮುಖ್ಯವೈದ್ಯಾಧಿಕಾರಿಗಳು ಸರಕಾರಿ ಸಾರ್ವಜನಿಕ ಆಸ್ಪತ್ರೆ ಲಿಂಗಸಗೂರು