ಅಮರೇಶ್ವರ ದೈವಿವನದಲ್ಲಿ ಪ್ರಣಯ ಪ್ರಸಂಗದವಿಡಿಯೋ ವೈರಲ್!!. ತಡೆಯುವವರಾರು,? ಅರಣ್ಯ ರೋಧನ!!

Laxman Bariker
ಅಮರೇಶ್ವರ ದೈವಿವನದಲ್ಲಿ ಪ್ರಣಯ ಪ್ರಸಂಗದವಿಡಿಯೋ ವೈರಲ್!!. ತಡೆಯುವವರಾರು,? ಅರಣ್ಯ ರೋಧನ!!
WhatsApp Group Join Now
Telegram Group Join Now

ಅಮರೇಶ್ವರ ದೈವಿವನದಲ್ಲಿ ಪ್ರಣಯ ಪ್ರಸಂಗದವಿಡಿಯೋ ವೈರಲ್!!. ತಡೆಯುವವರಾರು,? ಅರಣ್ಯ ರೋಧನ!!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಸುಕ್ಷೇತ್ರ ಅಮರೇಶ್ವರದ ದೈವಿವನ ಆಗಾಗ ಸುದ್ದಿಯಲ್ಲಿರುತ್ತದೆ ಅಂತಹ ದೈವಿವನದಲ್ಲಿ ಪ್ರೇಮಿಗಳು ಯಾರಭಯವಿಲ್ಲದೆ ಪ್ರಣಯಪ್ರಸಂಗದಲಿ ತೊಡಗಿದ್ದು ದೈವಿವನ ನೋಡಲು ಬಂದವರಿಗೆ ಪ್ರಣಯದ ದರ್ಶನವೆಂಬAತೆ ಇಲ್ಲಿ ಘಟನೆಗಳು ನಡೆಯುತಿದ್ದು ಹಲವರಿಗೆ ಮುಜುಗರ ತರಿಸುತ್ತವೆ ದೇವಸ್ಥಾನದಲ್ಲಿ ಇಂತಹ ಅಪವಿತ್ರ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ
ತಾಲೂಕಿನ ಸುಕ್ಷೇತ್ರ ಅಮರೇಶ್ವರದಲಿ ಅರಣ್ಯ ಇಲಾಖೆಯಿಂದ ನಿರ್ಮಿತವಾದ ದೈವಿವನ ದೇವಸ್ಥಾನದಕ್ಕೆ ಬರುವ ಭಕ್ತರು ಇಲ್ಲಿಯ ವನದಲ್ಲಿ ತಿರುಗಾಡಿ ವಿಶ್ರಮಿಸಲಿ ಮತ್ತು ವಿವಿಧ ಬಗೆಯ ಗಿಡಮರ ಸಸ್ಯಗಳ ಬಗೆಗೆ ಮಾಹಿತಿ ಪಡೆಯಲಿ ಹಾಗೆಯೆ ಪ್ರಕೃತಿ ಆನಂದ ಸವಿಯಲಿ ಎನ್ನುವ ದೂರದೃಷ್ಟಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿತವಾದ ದೈವಿವನ ಸರಿಯಾದ ಉಸ್ತುವಾರಿ ಇಲ್ಲದೆ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಈ ಹಿಂದೆ ಇಲ್ಲಿ ಪ್ರವೇಶ ಪಡೆಯಲು ಹಣಪಡೆಯುತಿದ್ದು ಅದನ್ನು ಕೆಲವರು ತಮ್ಮ ಸ್ವಂತಕ್ಕೆ ಬಳಸಿಕೊಂಡರು ಎನ್ನುವ ಸುದ್ದಿ ಬರುತ್ತಲೆ ಅಲ್ಲಿರುವ ಸಿಬ್ಬಂದಿಯನ್ನು ಬದಲಾವಣೆ ಮಾಡಿ ಕಟ್ಟುನಿಟ್ಟಾಗಿ ತರಲಾಯಿತು ಅದರ ಹಣವು ಇಲಾಖೆಗೆ ಜಮಾವಣೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದವು ಆದರೆ ಪುನಃ ಇತ್ತೀಚೆಗೆ ಪ್ರವೇಶ ಧನದ ಟಿಕೇಟ್ ನಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪಗಳನ್ನು ಸಂಘಟನೆಗಳು ಮಾಡುತ್ತಿವೆ ಅದನ್ನು ಇಲಾಕೆ ಸರಿಪಡಿಸಬಹುದು ಆದರೆ ಇನ್ನು ವಿಚಿತ್ರವೆಂಬAತೆ ಮತ್ತೊಂದು ಕೆಲಸ ನಡೆಯುತ್ತಿದೆ ಅದುವೇ ಪ್ರಣಯಪ್ರಸಂಗಗಳು
ಹೌದು ಸದರಿ ದೈವಿವನದಲ್ಲಿ ಹಗಲಿನಲ್ಲಿಯೆ ಪ್ರೇಮಿಗಳು ಮಿಲನಮಹೋತ್ಸವದಲ್ಲಿ ತೊಡುತ್ತಿರುವರೇ ಎನ್ನುವ ಮಾತುಗಳು ಸಾಕಷ್ಟು ಕೇಳಿಬರುತ್ತಿದ್ದು ಅದಕ್ಕೆ ಸಾಕ್ಷಿ ಎಂಬAತೆ ಇತ್ತೀಚೆಗೆ ಸದರಿ ಉದ್ಯಾನವನದಲ್ಲಿ ಹಗಲಿನಲ್ಲಿಯೆ ಪ್ರೇಮಿಗಳು ಪ್ರಣಯದಲ್ಲಿ ತೊಡಗಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ
ಇಂತಹ ಘಟನೆಗಳು ಇಲ್ಲಿ ನಡೆಯುತಿದ್ದು ದೈವಿವನಕ್ಕೆ ಆಗಮಿಸುವ ಹಲವಾರು ಜನತೆಯನ್ನು ಮುಜುಗರಕ್ಕೀಡು ಮಾಡುತ್ತಿದೆ ಅಮರೇಶ್ವರ ದೇವಸ್ಥಾನದಂತಹ ಪುಣ್ಯಕ್ಷೇತ್ರದಲ್ಲಿ ಇಂತಹದ್ದೊAದು ಘಟನೆಗಳು ಜರುಗುತ್ತಿದ್ದು ನಿಜಕ್ಕೂ ಮುಜುಗರದ ಸಂಗತಿಯೆ ಸರಿ ಇನ್ನು ಮುಂದಾದರು ಇಲಾಖೆ ಎಚ್ಚೆತ್ತುಕೊಂಡು ಇಂತಹ ಅವಗಡಗಳನ್ನು ನಡೆಯದಂತೆ ಎಚ್ಚರವಹಿಸಬೇಕು ಅಲ್ಲವೇ?

WhatsApp Group Join Now
Telegram Group Join Now
Share This Article