ಕರಡಕಲ್,ಸರಣಿ ಕಳ್ಳತನ ,ಹಣ ಬಂಗಾರ ಕಳುವು,ಪೊಲೀಸ್ ತನಿಖೆ

Laxman Bariker
ಕರಡಕಲ್,ಸರಣಿ ಕಳ್ಳತನ ,ಹಣ ಬಂಗಾರ ಕಳುವು,ಪೊಲೀಸ್ ತನಿಖೆ
WhatsApp Group Join Now
Telegram Group Join Now

ಕರಡಕಲ್,ಸರಣಿ ಕಳ್ಳತನ ,ಹಣ ಬಂಗಾರ ಕಳುವು,ಪೊಲೀಸ್ ತನಿಖೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಪುರಸಭೆ ವ್ಯಾಪ್ತಿಯ ಕರಡಕಲ್ಲಿನಲ್ಲಿ ಸರಣಿ ಕಳ್ಳತನ ನಡೆದಿದ್ದು ಹಣ ಒಡವೆ ಸೇರಿ ಅಪಾರ ಮೊತ್ತ ಕಳ್ಳತನ ವಾಗಿದೆ ಎಂದು ತಿಳಿದು ಬಂದಿದೆ
ಮೊಹರಂ ಕತಲ್ ರಾತ್ರಿ ಕಾರ್ಯಕ್ರಮ ದಲಿ ಜನತೆ ಭಾಗಿಯಾಗಿರುವ ಸಮಯದಲಿ ಗ್ರಾಮದಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ

ಬಾಗಿಲು ಹಾಕಿದ ಮನೆಗಳನ್ನೆ ಟಾರ್ಗೇಟ್ ಮಾಡಿರುವ ಕಳ್ಳರು ಸುಮಾರು ನಾಲ್ಕೈದು ಮನೆಗಳಲಿ ಕಳ್ಳತನ ನಡೆದಿರುವುದಾಗಿ ಹೇಳುತ್ತಾರೆ

ಗ್ರಾಮದ ರುದ್ರಯ್ಯಸ್ವಾಮಿ ಮನೆಯಲ್ಲಿ ನಾಲ್ಕುವರೆ ತೊಲಿ ಬಂಗಾರ 15 ತೊಲಿ ಬೆಳ್ಳಿ ಹಾಗೂ ಅರವತ್ತು ಸಾವಿರ ನಗದು ಕಳ್ಳತನ ವಾಗಿದೆ ಎಂದು ಹೇಳಲಾಗುತ್ತಿದೆ ಹಾಗೆಯೆ ಗ್ರಾಮದ ಗುಂಡಯ್ಯಸ್ವಾಮಿ ಮನೆ,ಪವಾಡೆಪ್ಪನಾಯಕ,ಹಾಗೂ ಮಹಾಂತೇಶ ಕುಂಬಾರ ಮನೆಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದ್ದು
ಶನಿವಾರ ರಾತ್ರಿ ಈ ಕಳ್ಳತನ ನಡೆದಿದ್ದು ಸಿಸಿ ಕ್ಯಾಮರಾ ದೃಶ್ಯ ದಲಿ ಎರಡು ಬೈಕ್ ಗಳಲಿ ಬರುವ ಕಳ್ಳರು ಕೃತ್ಯ ನಡೆಸಿರುವುದು ಕಂಡು ಬರುತ್ತಿದೆ
ವಿಷಯ ತಿಳಿಯುತ್ತಲೆ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ

WhatsApp Group Join Now
Telegram Group Join Now
Share This Article