*ಮಾವಿನಬಾವಿ-ಗ್ರಾಮಮಧ್ಯ ವಾಮಾಚಾರ ಬೆಚ್ಚಿಬಿದ್ದ ಜನತೆ*-
*ವಾಮಾಚಾರಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು*ಮಾವಿನಭಾವಿ ಗ್ರಾಮದ ಹೃದಯ ಭಾಗದಲ್ಲಿ ವಾಮಾಚಾರ*
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು ತಾಲೂಕಿನಲ್ಲಿ ವಾಮಾಚಾರಗಳು ಮೇಲಿಂದ ಮೇಲೆ ನಡೆಯುತಿದ್ದು ಅದರ ಒಂದು ಭಾಗವಾಗಿ ತಾಲೂಕಿಗೆ ಸಮೀಪ ಇರುವ ಮಾವಿನಭಾವಿ ಗ್ರಾಮದಲ್ಲಿ ಮಂಡಲದ ರೀತಿ ಊರ ಮಧ್ಯೆ ವಾಮಾಚಾರ ನಡೆದಿರುವುದು ಜನರಲ್ಲಿ ಆತಂಕ ಮೂಡಿದೆ, ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮಾವಿನಬಾವಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಊರ ಮಧ್ಯೆ ಹೃದಯ ಭಾಗದ ಅಗಸಿ ಸಮೀಪ ಹಾಗೂ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯ ಮುಂಬಾಗದಲ್ಲಿ ದೊಡ್ಡ ಮೈದಾನವಿದ್ದು ಅಲ್ಲಿ ಗ್ರಾಮದ ಜನ ಕುಡಿಯಲು ನೀರು ತರಲು ಪೊಲೀಸ್ ಪಾಟೀಲ್ ಹೊಲದಲ್ಲಿರುವ ಊರಿನ ಬಾವಿಗೆ ಕುಡಿಯುವ ನೀರು ತರಲು ಹೋಗುವ ಮದ್ಯ ಮಾರ್ಗದಲ್ಲಿ ಈ ವಾಮಾಚಾರ ನಡೆದಿದೆ, ಈ ವಾಮಾಚಾರದಲ್ಲಿ ಸುತ್ತಲು ಮಂಡಲ ಹಾಕಿ ಮಧ್ಯೆ ಮಂತ್ರ ಶಕ್ತಿ ರೂಪದಂತೆ ಕೆಲವು ಕನ್ನಡ ಹಾಗು ಸಂಸ್ಕೃತದ ಹೆಸರಿನ ಪ್ರಾರಂಭದ ಅಕ್ಷರ ಬರೆದು ಅದರ ಸುತ್ತ ನಿಂಬೆಹಣ್ಣು ವಾಮಾಚಾರಿ ಕ್ಕೆ ಪ್ರಯೋಗಿಸುವ ಕೆಲವು ಪದಾರ್ಥಗಳನ್ನು ಹಾಕಿ ಅದರ ಮಧ್ಯೆ ಒಂದು ಕಾಯಿಯನ್ನು ಇಟ್ಟು ಅದರ ಸುತ್ತಲೂ ಗಂಡು ಮತ್ತು ಹೆಣ್ಣಿನ ಚಿತ್ರ ಬರೆದು ಅದರ ಮೇಲೆ ಚಂದನ ಭಂಡಾರದಂತ ಕೆಲವು ಪದಾರ್ಥಗಳನ್ನ ಹಾಕಿ ಅದರ ಮಧ್ಯೆ ತೆಂಗಿನಕಾಯಿ ಇಟ್ಟು ಅದಕ್ಕೆ ಪೂಜೆ ನೈವೇದ್ಯ ಮಾಡಿ ಮಕ್ಕಳಲ್ಲಿ ಮತ್ತು ಜನರಲ್ಲಿ ಆತಂಕ ಉಂಟುಮಾಡುವ ವಾಮಾಚಾರ ಆಗಿರಬಹುದು ಎನ್ನುವುದು ಗ್ರಾಮಕ್ಕೆ ಕಂಟಕ ಕಾದಿರಬಹುದು ಎನ್ನುವ ಜನರ ಅಭಿಪ್ರಾಯವಾಗಿದೆ, ಹಾಗೂ ಜನರಲ್ಲಿ ಆತಂಕ ಮೂಡುವ ರೀತಿಯಲ್ಲಿ ಈ ವಾಮಾಚಾರ ನಡೆದದ್ದು ಮುಂದೆ ಗ್ರಾಮಕ್ಕೆ ಒಳ್ಳೆಯದಾಗುತ್ತೋ, ಏನಾದರೂ ಕೆಟ್ಟ ಪರಿಣಾಮ ಆಗುತ್ತೆ ಎನ್ನುವುದು ಗ್ರಾಮಸ್ಥರಲ್ಲಿ ಮನೆ ಮಾಡಿರುವುದಾಗಿ ಗ್ರಾಮದ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ, ಎನ್ನುವುದು ಸ್ಪಷ್ಟವಾಗಿದೆ ಇಂತಹ ವಾಮಾಚಾರಗಳು ಮೇಲಿಂದ ಮೇಲೆ ನಡೆಯುತ್ತಿರುವ ಇಂಥ ವಾಮಾಚಾರಕ್ಕೆ ಜನ ಆತಂಕ ಪಟ್ಟಿದ್ದಾರೆ, ಆದರೆ ಇಲ್ಲಿ ವಾಮಾಚಾರ ನಡೆದ ಸ್ಥಳ ಗ್ರಾಮದ ಹೃದಯ ಭಾಗವಾಗಿದ್ದು ಇಲ್ಲಿ ಯಾರು ನೋಡದ ಹಾಗೆ ನಡೆದಿರುವುದು ಗ್ರಾಮಕ್ಕೆ ಒಳ್ಳೆಯದೊ ಕೆಟ್ಟದ್ದೂ ಒಂದು ಅರ್ಥವಾಗುತ್ತಿಲ್ಲ ಎನ್ನುವುದು ಗ್ರಾಮದ ಜನರ ಯಕ್ಷಪ್ರಶ್ನೆಯಾಗಿದೆ,,,