ಛಲವಾದಿ ನಾರಾಯಣಸ್ವಾಮಿ ದಿಗ್ಭಂದನ, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯ
ಕ್ಷೇತ್ರಕ್ಕೆ ಅನ್ಯಾಯವಾದರೆ ಶಾಸಕರು ರಾಜೀನಾಮೆ ಸಲ್ಲಿಸುವುದು ಸೂಕ್ತ-ವೀರನಗೌಡ ಪಾಟೀಲ್
ಕ್ಷೇತ್ರದಲ್ಲಿ ಯಾರ ಅವಧಿಯಲ್ಲಿ ಅಭಿವೃದ್ದಿ ತನಿಖೆಯಾಗಲಿ,ಚರ್ಚೆಗೂ ಸಿದ್ದ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯಕ್ರಮದಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡುವಾಗ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವರನ್ನು ದಿಗ್ಭಂಧನ ಮಾಡಿದ ಘಟನೆ ಜರುಗಿದ್ದು ಅಲ್ಲಿಯ ಆಡಳಿತ ಕುಸಿದಿದ್ದು ಕೂಡಲೇ ಪ್ರಿಯಾಂಕ್ ಖರ್ಗೆಯವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಬಿಜೆಪಿಯ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಅವರು ಹೇಳಿದರು
ಅವರು ಪತ್ರಣದ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಗಾದೆ ಮಾತು ಹೇಳಿದರೆಂಬ ನೆಪದಿಂದ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಕೂಡಿಹಾಕಿರುವುದು ನೋವಿನ ಸಂಗತಿಯಾಗಿದ್ದು ಕೂಡಲೇ ಪ್ರಿಯಾಂಕ್ ಖರ್ಗೆಯವರು ತಮ್ಮ ಮಂತ್ರಿಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು
ಖರ್ಗೆಯವರ ಕುಟುಂಬ ಸೇಡಿನ ರಾಜಕೀಯ ಮಾಡುತ್ತಿದೆ ಖರ್ಗೆಯವರ ಕುಟುಂಬದ ಆಸ್ತಿಗಳ ಬಗೆಗೆ ಸದನದಲ್ಲಿ ಛಲವಾದಿ ನಾರಾಯಣಸ್ವಾಮಿ ಹೋರಾಟ ನಡೆಸಿದ್ದರು ಅದರ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿಯವರಿಗೆ ಪೋಲೀಸರ ಕಣ್ಣೆದುರೆ ಹಲ್ಲೆ ಮಾಡುವುದು ದಿಗ್ಭಂದನ ಹಾಕುವುದನ್ನು ಕಾಂಗ್ರೆಸಿಗರು ಮಾಡಿದ್ದು ನೋವಿನ ಸಂಗತಿಯಾಗಿದ್ದು ಮೇ ೨೪ರಂದು ಕಲಬುರ್ಗಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು
ಲಿAಗಸೂರಿನಲ್ಲಿ ೨೦೦ ಹಾಸಿಗೆಗಳ ಜಿಲ್ಲಾಸ್ಪತ್ರೆಯನ್ನು ನೀಡುವುದಾಗಿ ಸರಕಾರ ಹೇಳಿತ್ತು ಅದರಂತೆ ಭೂಮಿಯನ್ನು ಗುರುತಿಸಲಾಗಿದೆ ಆದರು ಮಾಧ್ಯಮದಲ್ಲಿ ಜಿಲ್ಲಾಸ್ಪತ್ರೆ ಸಿಂಧನೂರಿಗೆ ವರ್ಗಾವಣೆ ಎನ್ನುವುದು ದುರಂತವಾಗಿದೆ ಪಕ್ಷಾತೀತ ಹೋರಾಟವನ್ನು ರೂಪಿಸಿ ಪಟ್ಟಣವನ್ನು ಬಂದ್ ಮಾಡಿಸಿ ಸರಕಾರಕ್ಕೆ ಎಚ್ಚರಿಕೆಯ ಬಿಸಿ ತಟ್ಟಿಸಬೇಕಾಗಿದೆ ಶಾಸಕರು ಬೆಂಗಳೂರಿನಲ್ಲಿ ಮಂತ್ರಿಗಳ ಹಾಗೂ ಅಧಿಕಾರಿಗಳ ಭೇಟಿ ನಡೆಸಿದ್ದು ಜಿಲ್ಲಾಸ್ಪತ್ರೆಯನ್ನು ಲಿಂಗಸಗೂರಿಗೆ ತರಲು ಹೋರಾಟ ಮಾಡಲಾಗುವುದು ಕ್ಷೇತ್ರಕ್ಕೆ ಧಕ್ಕೆ ಬಂದರೆ ನಮ್ಮ ಶಾಸಕರು ಸುಮ್ಮನಿರುವುದಿಲ್ಲ ಅವರು ರಾಜೀನಾಮೆಗೂ ಸಿದ್ದರಾಗಬೇಕು ಎಂದರು
ಮಾಜಿಶಾಸಕರು ಹಾಲಿ ಶಾಸಕರ ಬಗೆಗೆ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದಿಯಾಗಿಲ್ಲ ಎನ್ನುವುದಾದರೆ ೨೦೦೮ರಿಂದಲೆ ಎಲ್ಲಾ ಕಾಮಗಾರಿಗಳ ತನಿಖೆಯಾಗಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದರು
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಗಿರಿಮಲ್ಲನಗೌಡ ಬಿಜೆಪಿ ತಾಲೂಕಾಧ್ಯಕ್ಷ ಅಯ್ಯಪ್ಪ ಮಾಳೂರು ವಕೀಲರು, ಬಸನಗೌಡ ಚಿತ್ತಾಪುರ,ವೆಂಕನಗೌಡ ಐದನಾಳ, ನಾಗಭೂಷಣಮ ನಾಗರಾಜ ಸೇರಿದಂತೆ ಇದ್ದರು