ನೀರಲಕೇರಿ:ಆಕಳುಕರುಕೊಂದ ಚಿರತೆ,ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆಕಳುಕರುವನ್ನು ತಿಂದುಹಾಕಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಗ್ರಾಮದ ಗುಂಡಣ್ಣ ಎನ್ನುವವರ ಹೊಲದಲ್ಲಿ ಹೊರವಲಯದಲಿ ದನಗಳನ್ನು ಕಟ್ಟಿಹಾಕಿದ್ದು ರಾತ್ರಿ ಸಮಯದಲ್ಲಿ ದನಗಳಿರುವ ಕಡೆಗೆ ಬಂದಿರುವ ಚಿರತೆ ದನಗಳ ಮೇಲೆ ದಾಳಿ ನಡೆಸಿ ಒಂದು ಆಕಳುಕರುವನ್ನು ಹೊತ್ತೊಯ್ದು ಅನತಿದೂರದಲಿ ತಿಂದುಹಾಕಿದ್ದು ಎರಡು ಮೂರು ಆಕಳುಗಳಿಗೆ ಗಾಯಗೊಳಿಸಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ
ಅರಣ್ಯ ಇಲಾಖೆ ಅಧಿಕಾರಿ ಗಳ ಭೇಟಿ:ವಿಷಯ ತಿಳಿಯುತ್ತಲೆ ಅರಣ್ಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
ಹೇಳಿಕೆ:ನೀರಲಕೇರಿ ಗ್ರಾಮದಲಿ ಚಿರತೆ ಕಾಣಿಸಿಕೊಂಡಿರುವ ಮಾಹಿತಿ ಬಂದಿದ್ದು ನಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ ಚಿರತೆ ಹೆಜ್ಜೆಗಳು ಎಂದು ಅಂದಾಜಿಸಿದ್ದಾರೆ ಆಕಳುಕರುವನ್ನು ತಿಂದುಹಾಕಿದ ಬಗೆಗೆ ತಿಳಿದುಬಂದಿದೆ ಸ್ಥಳಕ್ಕೆ ಭೇಟಿ ನೀಡುವೆ ಸಿಸಿಕ್ಯಾಮರಾ ಹಾಗೂ ಬೋನ್ ವ್ಯವಸ್ಥೆ ಮಾಡಲಾಗುವುದು
ವಿದ್ಯಾಶ್ರೀ-ತಾಲೂಕಾ ಅರಣ್ಯ ಅಧಿಕಾರಿಗಳು ಲಿಂಗಸಗೂರು