ಮಾಜಿ ಸಚಿವ ಶಿವನಗೌಡ ನಾಯಕ ಮಾವ ರಾಜಾಅಮರಪ್ಪನಾಯಕ (೮೬) ಬಿಡಿಓ ಇನ್ನಿಲ್ಲ
ಕಲ್ಯಾಣ ಕರ್ನಾಟಕ ವಾರ್ತೆ
ಗುರುಗುಂಟಾ-೧೨ : ಸ್ಥಳೀಯ ಹಾಗೂ ಮಾಜಿ ಸಚಿವ ಶಿವನಗೌಡನಾಯಕಗೆ ಹೆಣ್ಣು ಕೊಟ್ಟ ಮಾವ ರಾಜಾಅಮರಪ್ಪನಾಯಕ (೮೬) ಬಿಡಿಓ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ೪ ಪುತ್ರ, ೩ ಪುತ್ರಿ ಹಾಗೂ ಅಪಾರ ಬಂದು ಬಳಗ ಆಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮೇ13 ಮಂಗಳವಾರ ಗುರುಗುಂಟಾದ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಕಂದಾಯ ಇಲಾಖೆಯಲ್ಲಿ ದೀರ್ಘ ಸೇವೆ ಸಲ್ಲಿಸಿ ಅಂದಿನ ಅವಧಿಯಲ್ಲಿ ತಾಲೂಕಾ ಅಭಿವೃದ್ಧಿ ಮಂಡಳಿಗೆ ಬಿಡಿಓ ಆಗಿ ನಿವೃತ್ತಿ ಹೊಂದಿದ್ದರು.
ಸಂತಾಪ : ರಾಜಕೀಯ ಗಣ್ಯಮಾನ್ಯರು ಮುಖಂಡರು, ಗುರುಗುಂಟಾ ಆರ್ಯವೈಶ್ಯ ಸಮಾಜ, ವಿಪ್ರ ಸಮಾಜ, ವೀರಶೈವ ಲಿಂಗಾಯತ ಸಮಾಜ, ವಾಲ್ಮೀಕಿ ನಾಯಕ ಸಮಾಜ, ಭಾವಸಾರ ಕ್ಷತ್ರಿಯ, ವಿಶ್ವಕರ್ಮ ಸಮಾಜದವರು ದುಃಖತಪ್ತ ಕುಟುಂಬಕ್ಕೆ ಬಾಳಿ ಬೆಳಗುವ ಶಕ್ತಿ ಸಾಮರ್ಥ್ಯ ಕರುಣಿಸಲು ಭಗವಂತನಲ್ಲಿ ಪ್ರಾರ್ಥಿಸಿ, ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.