ತಹಸೀಲ್ ಕಛೇರಿಯಲ್ಲಿ 1,87ಕೋಟಿ ಹಣ ವರ್ಗಾವಣೆಘಟನೆ, ಕ್ರಮ ಯಾವಾಗ?

Laxman Bariker
ತಹಸೀಲ್ ಕಛೇರಿಯಲ್ಲಿ 1,87ಕೋಟಿ ಹಣ ವರ್ಗಾವಣೆಘಟನೆ, ಕ್ರಮ ಯಾವಾಗ?
WhatsApp Group Join Now
Telegram Group Join Now

ತಹಸೀಲ್ ಕಛೇರಿಯಲ್ಲಿ 1,87ಕೋಟಿ ಹಣ ವರ್ಗಾವಣೆಘಟನೆ, ಕ್ರಮ ಯಾವಾಗ?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಹಸೀಲ್ ಕಛೇರಿಗೆ ಸೇರಿದ ಧಾರ್ಮಿಕ ದತ್ತಿ ಹಾಗೂ ಪ್ರಕೃತಿ ವಿಕೋಪಕ್ಕೆ ಬಂದಿರುವ ಅನುದಾನ ೧.೮೭ಕೋಟಿ ಅನುದಾನ ಸ್ವಂತ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಕಳೆದ ಫೆಬ್ರವರಿಯಲ್ಲಿ ಭಾರಿಸುದ್ದಿಯಾಗಿತ್ತು ಆದರೆ ಅದಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರು ಯಾರು ಕ್ರಮ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ
sಸ್ಥಳಿಯ ತಹಸೀಲ್ದಾರ ಕಛೇರಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರಿಗೆ ಪಾವತಿಸಬೇಕಿದ್ದ ೩೮೮೬೩೯೭ ಹಾಗೂ ಪರಸರ ವಿಕೋಪದ ಹಣ ಹಾಗೂ ಕಬ್ಬು ಬೆಳೆಗಾರರ ಮೊತ್ತ೧೨೩೮೫೬೨, ರೈತನಿಗೆ ಪಾವತಿಸಬೇಕಾಗಿದ್ದ ಹಣ ಸೇರಿದಂತೆ ಸುಮಾರು ೧.೮೭ಕೋಟಿ ಹಣ ಖಾಸಗಿಯಾಗಿ ಖಾತೆದಾರರ ಖಾತೆಗಳಿಗೆ ಪಾವತಿಸಲಾಗಿದೆ ಎಂದು ಭಾರಿ ಸುದ್ದಿಯಾಯಿತು
ಅದರ ಬೆನ್ನಹಿಂದೆಯೆ ಜಿಲ್ಲಾಧಿಕಾರಿಗಳು ರಾಯಚೂರಿನ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಹಾಗೂ ಲೆಕ್ಕಪರಿಶೋಧಕರಾದ ಸಿದ್ದಪ್ಪನವರು ಬಂದು ಬ್ಯಾಂಕ್ ಹಾಗೂ ತಹಸೀಲ್ದಾರ ಕಛೇರಿಗೆ ಭೇಟಿ ನೀಡಿ ತನಿಖೆಯನ್ನು ಮಾಡಿ ಅದರಲ್ಲಿ ತಹಸೀಲ್ದಾರ , ಸೇರಿದಂತೆ ಸುಮಾರು ಆರು ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದರು ಬ್ಯಾಂಕಿನಲ್ಲಿ ಎಷ್ಟು ಖಾತೆಗಳಿವೆ ತಿಂಗಳ ಕೊನೆಯ ದಿನಾಂಕದಂದು ನಗದು ಪುಸತಕ ಪರಿಶೀಲನೆ ಮಾಡಿದ್ದೀರಾ ಹೀಗೆ ಹಲವು ವಿಚಾರಣೆ ನಡೆದು ಅದರಲ್ಲಿ ಘಟನೆಯ ಬಗೆಗೆ ವಿವರವನ್ನು ಸಂಗ್ರಹಿಸಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಬಗೆಗೂ ತಿಳಿದು ಬಂದಿತು

ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರರವರು ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಲಾಗುವುದೆಂದು ಆಗಿನ ಸಂದರ್ಭದಲ್ಲಿ ಹೇಳಿದ್ದರು
ಘಟನೆ ಜರುಗಿ ಸುಮಾರು ಮೂರು ತಿಂಗಳು ಗತಿಸುತ್ತಾ ಬಂದರು ಸಿಬ್ಬಂದಿ ಯಲ್ಲಪ್ಪನನ್ನು ಬಿಟ್ಟರೆ ಇದುವರೆಗೂ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಎಂಬುದು ಮಾತ್ರ ನಿಗೂಢವಾಗಿಯೆ ಉಳಿದಿದೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವನೆಯಾದರು ಇದರಲ್ಲಿ ಮುಖ್ಯಪಾತ್ರ ಯಾದರು ಇದರಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎನ್ನುವದು ಮಾತ್ರ ನಿಗೂಡವಾಗಿಯೆ ಉಳಿದಿದ್ದು ಹಿರಬರುವುದು ಯಾವಾಗ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ

WhatsApp Group Join Now
Telegram Group Join Now
Share This Article