ಲಂಡನ್:ಬಸವೇಶ್ವರ ಪ್ರತಿಷ್ಠಾನದಿಂದ ಬಸವ ಜಯಂತಿ ಆಚರಣೆ
ಕಲ್ಯಾಣ ಕರ್ನಾಟಕ ವಾರ್ತೆ
ಲಂಡನ್:ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ಯುನೈಟೆಡ್ ಕಿಂಗಡಂ ಲಂಡನನಲ್ಲಿ ಪಹಲ್ಗಾಮ ದಾಳಿಯ ಸಂತ್ರಸ್ತರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬಸವ ಜಯಂತಿಯನ್ನು ಆಚರಿಸಲಾಯಿತು
ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವು ಹಿಂದೂಸ್ ಫಾರ್ ಲೇಬರನ ಸಹಭಾಗಿತ್ವದಲ್ಲಿ ಬಸವ ಜಯಂತಿಯನ್ನು ಆಚರಿಸುತ್ತಾ ಇತ್ತೀಚೆಗೆ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಲಂಡನನಲ್ಲಿರುವ ಬಸವೇಶ್ವರರ ಪ್ರತಿಮೆಯ ಬಳಿ ಬಸವ ಜಯಂತಿಯ ಮುನ್ನಾದಿನ ಆಚರಿಸಿತು
ಯುಕೆಗೆ ಭಾರತದ ಹೈಕಮಿಷನರ್ ಆಗಿರುವ ಗೌರವಾನ್ವಿತ ವಿಕ್ರಮ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಮೌನಪ್ರಾರ್ಥನೆ ನಡೆಯಿತು ಅವರು ದಾಳಿಯನ್ನು ಬಲವಾಗಿ ಖಂಡಿಸಿದರು ಮತ್ತು ಬಲಿಪಶು ಕುಟುಂಬಗಳಿಗೆ ಬ್ರಿಟಿಷ ಭಾರತೀಯ ಸಮುದಾಯದ ಪರವಾಗಿ ಆಳವಾದ ಸಂತಾಪ ಸೂಚಿಸಿದರು
ಬ್ರಿಟಿಷ ಸಂಸತ್ತಿನ ಎದುರಿನ ಪ್ರಸಿದ್ದ ಬಸವೇಶ್ವರರ ಪ್ರತಿಮೆ ಪಕ್ಕದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ವಿವಿಧ ಧರ್ಮಗಳ ಸಮುದಾಯದ ಪ್ರಮುಖ ಗಣ್ಯರು ಮತ್ತು ನಾಯಕರು ಸೇರಿದ್ದರು
ಈ ಸಂದರ್ಭದಲ್ಲಿ ಬರ್ನ್ಲಿಯ ಲಾರ್ಡಖಾನ ನಂಬಿಕೆ ಮತ್ತು ಸಮುದಾಯಗಳ ಸಚಿವೆ, ಸೀಮಾ ಮಲ್ಹೂತ್ರಾ ಸಂಸದೆ ಗುರಿಂದರ ಸೊಸನ್ ಸಂಸದೆ, ಲಾರ್ಡ ಸೆಲ ರೂಕ್, ಯುಕೆಗೆ ಭಾರತದ ಹೈಕಮಿಷನರ್ ವಿಕ್ರಮ ದೊರೆಸ್ವಾಮಿ ಸೇರಿದಂತೆ ಇದ್ದರು