ಬುದ್ದಿನ್ನಿ : ಸಿಡಿಲು ಬಡಿದು ಯುವಕನಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು
ಕಲ್ಯಾಣ ಕರ್ನಾಟಕ ವಾರ್ತೆ
(ಮಟ್ಟೂರು ) ಲಿಂಗಸಗೂರು ಮುದಗಲ್ ಸಮೀಪದ ಮಟ್ಟೂರು ಗ್ರಾ. ಪಂ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲಿನ ಆಘಾತಕ್ಕೆ ಒಳಗಾಗಿ ಓರ್ವ ಯುವಕ ಗಂಭೀರವಾಗಿ ಗಾಯಗೊಂ ಡಿದ್ದು ಲಿಂಗಸಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ ಏಕಾಎಕಿ ಬಿರುಗಾಳಿ ಸಹಿತ ಮಳೆ ಆರಂಭದ ವೇಳೆ ಕುರಿ ಕಾಯಲು ಹೋಗಿದ್ದ, ಗುಂಡಪ್ಪ ತಂದೆ ಬಸಣ್ಣ ಬಡಗಿ (25) ಎಂಬ ಯುವಕನಿಗೆ ಸಿಡಿಲು ಬಡಿದು ಗಂಭೀರವಾದ ಗಾಯಗಳಾಗಿವೆ, ಯುವಕನ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡ ಯುವಕನನ್ನು ಲಿಂಗಸುಗೂರಿನ ಬಸವಪ್ರಭು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವ್ಯದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ಮಸ್ಕಿ ಕಂದಾಯ ನಿರೀಕ್ಷಕ ಶರಣಗೌಡ ಪಾಟೀಲ. ಮಟ್ಟೂರ ಗ್ರಾಮ ಲೆಕ್ಕಾಧಿಕಾರಿ ಸೋಮನಗೌಡ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ತಿಮ್ಮನಗೌಡ ಪಾಟೀಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಲಕ್ಷ್ಮಿ ವೀರೇಶ್ ಬುದ್ದಿನ್ನಿ, ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಯುವಕನ ಕುಟುಂಬಕ್ಕೆ ಪ್ರಕೃತಿ ವಿಕೋಪದಲ್ಲಿ, ಸೂಕ್ತ ಪರಿಹಾರ ಒದಗಿಸುವಂತೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಲಕ್ಷ್ಮಿ ವೀರೇಶ್ ಬುದ್ದಿನ್ನಿ, ಸದಸ್ಯರಾದ ಅಮರೇಶ್ ಬುದ್ಧಿನ್ನಿ, ಈರಣ್ಣ ಗುಡಿಹಾಳ, ಮಹದೇವಪ್ಪ ತೆರವಿಭಾವಿ, ಸೇರಿದಂತೆ ಬುದ್ಧಿನ್ನಿ ಗ್ರಾಮಸ್ಥರು ಸರ್ಕಾರವನ್ನು ಹಾಗೂ ತಾಲೂಕಾ ಆಡಳಿತಕ್ಕೆ ಒತ್ತಾಯಿಸಿದ್ದಾರೆ. ಸಂಜೆ ಬೀಸಿದ ಮಳೆ ಬಿರುಗಾಳಿಗೆ ಸಂತೆಕೇಲ್ಲೂರು ಮಟ್ಟೂರು ಗ್ರಾ. ಪಂ ವ್ಯಾಪ್ತಿಯಲ್ಲಿ ತಗಡಿನಿ ಮನೆ ಹೆಂಚಿನ ಮನೆಯ ಸೀಟ್ ಹಾರಿ ಹೋಗಿವೆ ವಿದ್ಯುತ ಹಾಗೂ ಕೇಬಲ್ ಹರಿದು ಹೋಗಿದ್ದು ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತ ವಾಗಿದ್ದು ಜನ ಜೀವನ ಅಸ್ತವ್ಯಸ್ತ ವಾಗಿದ್ದು ಅಪಾರ ಪ್ರಮಾಣದ ಹಾನಿ ಸೃಷ್ಟಿಯಾಗಿದೆ.