ಶಾರದಾ ಎಲ್ ಡಾನ್ಸ್ ಅಕಾಡೆಮಿ ಪ್ರಾರಂಭ
ಕಲ್ಯಾಣ ಕರ್ನಾಟಕದಲ್ಲಿ ಕಲೆಗೆ ಕೊರತೆ ಇಲ್ಲ,ಪ್ರೋತ್ಸಾಹದ ಕೊರತೆ ಇದೆ-ನಾಗರಾಜ ಕಲ್ಲತ್ತಹಳ್ಳಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕಲ್ಯಾಣ ಕರ್ನಾಟಕದಲ್ಲಿ ಹಲವಾರು ಅದ್ಭತ ಪ್ರತಿಭೆಗಳಿವೆ ಕಲೆಗೆ ಕೊರತೆ ಇಲ್ಲ ಆದರೆ ಪ್ರೋತ್ಸಾಹದ ಕೊರತೆ ಇದೆ ಎಂದು ನಿರ್ದೇಶಕ ನಾಗರಾಜ ಕಲ್ಲತ್ತಹಳ್ಳಿ ಹೇಳಿದರು
ಅವರು ಪಟ್ಟಣದ ಹೊಸಬಸ್ ನಿಲ್ದಾಣದ ಹತ್ತಿರದ ಐದನಾಳರ ಬಿಲ್ಡಿಂಗ್ ನಲ್ಲಿ ಶಾರದಾ ಎಲ್ ಡಾನ್ಸ್ ಅಕಾಡೆಮಿ ಬೇಸಿಗೆಯ ಡಾನ್ಸ್ ತರಬೇತಿ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿ ಮಾತನಾಡುತ್ತಾ ಈ ಭಾಗದಲ್ಲಿ ಸಾಕಷ್ಟು ಕಲಾವಿದರಿದ್ದಾರೆ ಕಲೆಯು ಇದೆ ಆದರೆ ಅದನ್ನು ಪ್ರೋತ್ಸಾಹಿಸುವವರ ಕೊರತೆ ಇದೆ ಶಾರದಾ ಎಲ್ ಅಕಾಡೆಮಿ ಅಂತಹ ಕಲೆಯನ್ನು ಗುರುತಿಸಿ ಹೊರತಂದು ರಾಜ್ಯಮಟ್ಟದ ಕಿರುತೆರೆಯಲ್ಲಿ ಅವಕಾಶ ಕಲ್ಪಿಸುವಂತಹ ಕೆಲಸವನ್ನು ಅಕಾಡೆಮಿ ಮಾಡಲಿದ್ದು ಪಾಲಕರು ಈ ಭೇಸಿಗೆ ರಜೆಯಲ್ಲಿ ತಮ್ಮ ಮಕ್ಕಳನ್ನು ಡಾನ್ಸ ತರಗತಿಗೆ ಕಳುಹಿಸುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು
ಕೋರಿಯೋಗ್ರಫಿ ನಾಗರಾಜನಾಯಕ ಮಾತನಾಡಿ ನಮ್ಮ ಭಾಗದ ಪ್ರತಿಭೆ ಸಿಂಗA ಎಮದೆ ಖ್ಯಾತಿಯಾದ ಡ್ರಾಮಾ ಜೂನಿರ‍್ಸ್ ನ ಅರುಣಕುಮಾರ ಕೋಟಾ ಈಗಾಗಲೆ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ ನಾನು ಕೂಡಾ ಉದೀ ಉದೋ ಎಲ್ಲಮ್ಮ, ಎಡೆಯೂರ ಸಿದ್ದಲಿಂಗೇಶ್ವರ ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದೇನೆ ನಾನು ಕೊರಿಯೋಗ್ರಫಿ ಹೇಳಿದರೆ ನಾಗರಾಜ ಕಲ್ಲತ್ತಳ್ಳಿಯವರು ನಟನೆ ಹೇಳಿಕೊಡುತ್ತಾರೆ ಕಡಿಮೆ ಫೀ ಯಲ್ಲಿ ಮಕ್ಕಳಿಗೆ ನಟನೆ ಹಾಗೂ ಡಾನ್ಸ್ ಕಲಿಸಲಾಗುವುದು ಇದರ ಸದುಪಯೋಗ ಪಡೆಯುವಂತೆ ಹೇಳಿದರು
ಪತ್ರಕರ್ತ ಲಕ್ಷö್ಮಣ ಬಾರಿಕೇರ್ ಮಾತನಾಡಿ ಮನುಷ್ಯನ ಜೀವನದಲ್ಲಿ ಪಾಠದೊಮದಿಗೆ ಪಠ್ಯೇತರ ಚಟುವಟಿಕೆಗಳು ಅಷ್ಟೇ ಮುಖ್ಯವಾಗುತ್ತವೆ ಶಾರದಾ ಡಾನ್ಸ್ ಅಕಾಡೆಮಿ ಒಳ್ಳೆಯ ಅವಕಾಶ ತಂದಿದೆ ಅದರ ಸದ್ಭಳಕೆಯಾಗಲಿ ಈ ಭಾಗದ ಪ್ರತಿಭೆಗಳು ಬೆಳೆಯಲಿ ಎಂದರು
ಡ್ರಾಮಾ ಜೂನಿರ‍್ಸ್ ನ ಅರುಣಕುಮಾರ, ಲಲಿತಾಶಟ್ಟಿ ಸೇರಿದಂತೆ ಹಲವರು ಮಾತನಾಡಿದರು
ಈ ಸಂದರ್ಭದಲ್ಲಿ ಸಂಗಮೇಶ ಎಂ, ಗಂಗಾಧರ ಚವಾಣ, ಲಕ್ಷಿö್ಮÃ, ಶಾಂತಾ ಸೇರಿದಂತೆ ಇದ್ದರು