ಡಿಗ್ರಿಕಾಲೇಜು ಹತ್ತಿರಹೊಸಲೇಔಟ್ ಸರಕಾರಿ ಜಾಗೆ ಒತ್ತುವರಿ ಆರೋಪ, ಸರ್ವೇ ಯಾವಾಗ? ವಿಳಂಬದ ಹಿಂದಿನ ಮರ್ಮವೇನು?

Laxman Bariker
ಡಿಗ್ರಿಕಾಲೇಜು ಹತ್ತಿರಹೊಸಲೇಔಟ್ ಸರಕಾರಿ ಜಾಗೆ ಒತ್ತುವರಿ ಆರೋಪ, ಸರ್ವೇ ಯಾವಾಗ? ವಿಳಂಬದ ಹಿಂದಿನ ಮರ್ಮವೇನು?
Oplus_16908288
WhatsApp Group Join Now
Telegram Group Join Now

ಡಿಗ್ರಿಕಾಲೇಜು ಹತ್ತಿರಹೊಸಲೇಔಟ್ ಸರಕಾರಿ ಜಾಗೆ ಒತ್ತುವರಿ ಆರೋಪ, ಸರ್ವೇ ಯಾವಾಗ? ವಿಳಂಬದ ಹಿಂದಿನ ಮರ್ಮವೇನು?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪುರಸಭೆ ವ್ಯಾಪ್ತಿಯ ಸರಕಾರಿ ಡಿಗ್ರಿ ಕಾಲೇಜು ಹತ್ತಿರದ ರಾಂಪುರ ರಸ್ತೆಯ ಹತ್ತಿರದ ನೂತನ ಲೇಔಟ್ ಮಾಡಲಾಗಿದ್ದು ಅಲ್ಲಿ ಸರಕಾರಿ ಜಮೀನು ಒತ್ತುವರಿ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ವೇ ಮಾಡಲು ಸೂಚಿಸಲಾಗಿತ್ತು ಆದರೆ ಅದು ಇದುವರೆಗೂ ಸರ್ವೇಯಾಗಿಲ್ಲ ಹಾಗಾದರೆ ವಿಳಂಬದ ಹಿಂದಿನ ಮರ್ಮವೇನು?
ಹೌದು ಪುರಸಭೆ ವ್ಯಾಪ್ತಿಯ ಸರಕಾರಿ ಡಿಗ್ರಿಕಾಲೇಜು ಹತ್ತಿರ ಹೆದ್ದಾರಿಪಕ್ಕದ ರಾಂಪೂರ ರಸ್ತೆಗೆ ಸಾಗುವ ಮಾರ್ಗದ ಹತ್ತಿರ ಹೊಸಲೇಔಟ್ ಗಳನ್ನು ಮಾಡಲಾಗಿತ್ತು ಅದರ ಪಕ್ಕದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಭೂಮಿ ಇತ್ತು ಅದು ಒತ್ತುವರಿ ಮಾಡಲಾಗಿದೆ ಎನ್ನುವ ಆರೋಪಗಳು ೨೦೨೩ರಲ್ಲಿ ಬಲವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಇಲ್ಲಿಯ ತಹಸೀಲ್ದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿಸುತ್ತೇವೆ ಎಂದು ಹೇಳುತ್ತಲೆ ಬರುತ್ತಿದ್ದಾರೆ ಆದರೆ ಸುಮಾರು ಎರಡು ವರ್ಷ ಗತಿಸುತ್ತಾ ಬಂದರು ಸಹಿತ ಇದುವರೆಗೂ ಅದರ ಸರ್ವೇಕಾರ್ಯ ಮಾತ್ರ ಸಂಪೂರ್ಣವಾಗಿಲ್ಲ ಎನ್ನುವುದಾದರೆ ಇದರ ಹಿಂದಿನ ಮರ್ಮವೇನು
ಮೊದಮೊದಲಿಗೆ ರಾಂಪೂರಕ್ಕೆ ಹೋಗುವ ಮಾರ್ಗವೇ ಲೇಔಟ್ ನ ಕೊನೆಯಭಾಗ ಎಂದು ಹೇಳಲಾಗುತ್ತಿತ್ತು ನಂತರದಲ್ಲಿ ಅದು ಬೇರೆಕಡೆ ಬರುತ್ತದೆ ಎಂದು ಗುಡ್ಡದಲ್ಲಿ ತೋರಿಸಲಾಯಿತು ಹಲವಾರು ಸಂಘಟನೆಯವರು ಹೋರಾಟಗಳನ್ನು ರೂಪಿಸಿದರು ಕೆಲಮಾಧ್ಯಮಗಳು ಅದರ ಬಗೆಗೆ ಬರೆದವು ಆಗ ಸರ್ವೇ ಮಾಡಿ ಸರಿಯಾದ ಬದು ನಿರ್ಣಯಿಸಲಾಗುವುದೆಂದು ಹೇಳಲಾಯಿತು ನಂತರದಲ್ಲಿ ತಹಸೀಲ್ದಾರ ಸರ್ವೇಯವರಿಗೆ ಪತ್ರ ಬರೆಯುವುದು ಅರಣ್ಯ ಇಲಾಖೆಯವರು ಸರ್ವೇಗೆ ಪತ್ರ ಬರೆಯುವುದು ನಡೆಯಿತು ಪತ್ರ ಬರೆದರೆ ಹೊರತು ಅದು ಇದುವರೆಗೂ ಸರಿಯಾಗಿ ಸರ್ವೇಮಾತ್ರ ಆಗಿಲ್ಲ ಎನ್ನುವುದು ಅಷ್ಟೇ ಸತ್ಯ
ಸರ್ವೇ ಮಾಡಲು ಎಷ್ಟುದಿನಬೇಕು:ಸರಕಾರಿ ಜಾಗೆ ಎಂದು ಹೇಳಲಾಗುತ್ತಿದ್ದು ಅದನ್ನು ಸರ್ವೇ ಮಾಡಿಸಲು ಅಧಿಕಾರಿಗಳು ಎರಡು ವರ್ಷವಾದರು ವಿಳಂಭ ಮಾಡುತ್ತಾರೆ ಎನ್ನುವುದಾದರೆ ಸರ್ವೇ ಮಾಡಿಸಲು ಇನ್ನು ಎಷ್ಟು ದಿನಬೇಕು ಸರಕಾರಿ ಭೂಮಿಯ ಕತೆ ಃಈಗಾದರೆ ಇನ್ನ ಜನಸಾಮಾನ್ಯರ ಪಾಡೇನು ಎನ್ನುವುದನ್ನು ಗಮನಿಸಬೇಕಾಗುತ್ತದೆ
ಸದರಿ ಜಮೀನು ಸರ್ವೇ ಮಾಡುವುದಾದರು ಯಾವಾಗ? ಅದು ಕಂದಾಯ ಇಲಾಖೆಯದ್ದೋ ಅಥವ ಅರಣ್ಯ ಇಲಾಖೆಯದ್ದೋ ಅಥವ ಭೂಮಾಲೀಕರದೊ ಎನ್ನುವ ಸತ್ಯ ಹೊರಬರುವುದಾದರು ಯಾವಾಗ?

ಹೇಳಿಕೆ: ಎರಡು ಮೂರು ದಿನದ ಹಿಂದೆ ಸರ್ವೇ ಇಲಾಖೆಯವರು ಸರ್ವೇ ಮಾಡುವುದಾಗಿ ತಿಳಿಸಿದ್ದು ಇಷ್ಟರಲ್ಲೆ ಸರ್ವೇಯಾಗಬಹುದು,-ಶಂಶಾಲಂ ತಹಸೀಲ್ದಾರರು ಲಿಂಗಸಗೂರು

ಹೇಳಿಕೆ:ಈಗಾಗಲೆ ಸರ್ವೇ ಮಾಡಲಾಗಿದ್ದು ಅದರಲ್ಲಿ ರಾಂಪೂರ ರಸ್ತೆ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ ಆದರೆ ದಾಖಲೆಯನ್ನು ನೀಡಿಲ್ಲ, ತಹಸೀಲ್ದಾರರು ಆ ಸರ್ವೇ ಸರಿಯಾಗಿಲ್ಲ ಬೇರೆ ಸರ್ವೇಯವರಿಂದ ಮಾಡಿಸಲಾಗುವದು ಎಂದು ಹೇಳಿದ್ದಾರೆ ಯಾವಾಗ ಸರ್ವೇ ಮಾಡಲಾಗುತ್ತದೆಯೊ ತಿಳಿಯದು- ವಿದ್ಯಾಶ್ರೀ ತಾಲೂಕಾ ಅರಣ್ಯ ಅಧಿಕಾರಿಗಳು ಲಿಂಗಸಗೂರು

WhatsApp Group Join Now
Telegram Group Join Now
Share This Article