ವಿದ್ಯಾಚೇತನ ಕಾಲೇಜಿನ ಕು.ಕಿರಣ ಶೇ ೯೯% ಅಂಕಗಳಿಸಿ ಜಿಲ್ಲೆಗೆ ಪ್ರಥಮ : ಸಮ್ ಕಾಲೇಜಿನ ಶಾಂತ ಶೇ ೯೮.೧೭% ಅಂಕಗಳಿಕೆ

Laxman Bariker
ವಿದ್ಯಾಚೇತನ ಕಾಲೇಜಿನ ಕು.ಕಿರಣ ಶೇ ೯೯% ಅಂಕಗಳಿಸಿ ಜಿಲ್ಲೆಗೆ ಪ್ರಥಮ : ಸಮ್ ಕಾಲೇಜಿನ ಶಾಂತ ಶೇ ೯೮.೧೭% ಅಂಕಗಳಿಕೆ
WhatsApp Group Join Now
Telegram Group Join Now

ವಿದ್ಯಾಚೇತನ ಕಾಲೇಜಿನ ಕು.ಕಿರಣ ಶೇ ೯೯% ಅಂಕಗಳಿಸಿ ಜಿಲ್ಲೆಗೆ ಪ್ರಥಮ : ಸಮ್ ಕಾಲೇಜಿನ ಶಾಂತ ಶೇ ೯೮.೧೭% ಅಂಕಗಳಿಕೆ

ಕಲ್ಯಾಣ ಕರ್ನಾಟಕ ವಾರ್ತೆ

ಕಲ್ಯಾಣ ಕರ್ನಾಟಕ ವಾರ್ತೆ ಲಿಂಗಸುಗೂರು ಏ೦೮ :
ರಾಜ್ಯಾಧ್ಯಂತ ೨೦೨೪-೨೫ನೇ ಸಾಲಿನ ಪಿಯುಸಿ ದ್ವೀತಿಯ ವರ್ಷದ ಪರೀಕ್ಷೆಗಳು ಮಾರ್ಚ ೦೧ ರಿಂದ ಮಾರ್ಚ ೨೦ ರವರೆಗೆ ನಡೆಸಲಾಗಿತ್ತು. ಮಂಗಳವಾರ ಪಿಯು ಬೋರ್ಡ ಪರೀಕ್ಷೆಯ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು ಪಟ್ಟಣದ ವಿದ್ಯಾಚೇತನ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಉಮಾ ಮಹೇಶ್ವರಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲೆ ಟಾಪರ್ ಸ್ಥಾನ ಪಡೆಯುವ ಮೂಲಕ ಕಾಲೇಜು ಕೀತಿ ಹೆಚ್ಚಿಸಿದ್ದಾರೆ.


ಪಟ್ಟಣದ ವಿದ್ಯಾಚೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕುಮಾರ ಕಿರಣ ತಂದೆ ಬಾಪುಗೌಡ ವಿಜ್ಞಾನ ವಿಭಾಗದ ವಿದ್ಯಾರ್ಥಿ ೬೦೦ ಅಂಕಗಳಿಗೆ ೫೯೪ ಅಂಕ ಪಡೆದು ಪ್ರತಿಶತ ಶೇ ೯೯% ಸಾಧನೆಗೈದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಹಾಗೂ ಶ್ರೀ ಉಮಾ ಮಹೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶಾಂತಾ ತಂದೆ ಮಲ್ಲಪ್ಪ ಚಕ್ಲಿ ನಾಗರಾಳ ೬೦೦ ಅಂಕಗಳಿಗೆ ೫೮೯ ಅಂಕ ಪಡೆದು ಪ್ರತಿಶತ ಶೇ೯೮.೧೭% ಸಾಧನೆಗೈದು ಜಿಲ್ಲೆಗೆ ೫ನೇ ಸ್ಥಾನ ಪಡೆದಿದ್ದು ಲಿಂಗಸಗೂರಿನಿAದ ಇರ್ವರು ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಹೇಳಿಕೆ ೦೧ : ನನ್ನ ಯಶಸ್ಸಿಗೆ ತಂದೆ ತಾಯಿ ಹಾಗೂ ನಾನು ವಿದ್ಯಾಭ್ಯಾಸ ಮಾಡುವ ವಿದ್ಯಾಚೇತನ ಕಾಲೇಜಿನ ಉಪನ್ಯಾಸಕರ ಶ್ರಮ ಮತ್ತು ವಾರ ಮತ್ತು ತಿಂಗಳಿಗೆ ಒಂದು ಬಾರಿ ತಿಂಗಳಿಗೆ ನಡೆಸುವ ಪ್ರೀಪ್ರೇಟರಿ ಪರೀಕ್ಷೆಗಳು ನಾನು ಜಿಲ್ಲೆಗೆ ಟಾಪರ್ ಸ್ಥಾನ ಪಡೆಯಲು ಸಹಕಾರಿಯಾಗಿದೆ—–ಲಿಂಗಸಗೂರು ವಿದ್ಯಾಚೇತನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕುಮಾರ ಕಿರಣ ತಂದೆ ಬಾಪುಗೌಡ

ಹೇಳಿಕೆ ೦೨ : ನಾನು ಉತ್ತಮ ಅಂಕ ಪಡೆಯಲು ನನ್ನ ತಂದೆ ತಾಯಿ ಪಾಲಕರ ಜತೆ ಉಮಾ ಮಹೇಶ್ವರಿ ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಪ್ರತಿ ಪ್ರಶ್ನೆಗಳಿಗೆ ಉತ್ತರ ಬರೆಯಿಸಿ ಸ್ಟಡಿ ಅವರ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಮರು ದಿನ ನಮ್ಮ ತಪ್ಪುಗಳನ್ನು ತಿದ್ದಿ ಹೇಳುವ ಮೂಲಕ ನಮಗೆ ನೀಡಿದ ಮಾರ್ಗದರ್ಶನ ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ. —— ಶ್ರೀ ಉಮಾ ಮಹೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶಾಂತಾ ತಂದೆ ಮಲ್ಲಪ್ಪ ಚಕ್ಲಿ

ಫಲಿತಾಂಶ ಬರುತಿದ್ದಂತೆಯೆ ಕಾಲೇಜು ಆಡಳಿತ ಮಂಡಳಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ

 

 

WhatsApp Group Join Now
Telegram Group Join Now
Share This Article