ತಾಲೂಕಿನಲ್ಲಿ ಅನಧೀಕೃತ ಕೋಚಿಂಗ್ ಸೆಂಟರ್, ಕೈ ಚಲ್ಲಿದ ಶಿಕ್ಷಣ ಇಲಾಖೆ,ಕ್ರಮಯಾವಾಗ?

Laxman Bariker
ತಾಲೂಕಿನಲ್ಲಿ ಅನಧೀಕೃತ ಕೋಚಿಂಗ್ ಸೆಂಟರ್, ಕೈ ಚಲ್ಲಿದ ಶಿಕ್ಷಣ ಇಲಾಖೆ,ಕ್ರಮಯಾವಾಗ?
WhatsApp Group Join Now
Telegram Group Join Now

ತಾಲೂಕಿನಲ್ಲಿ ಅನಧೀಕೃತ ಕೋಚಿಂಗ್ ಸೆಂಟರ್, ಕೈ ಚಲ್ಲಿದ ಶಿಕ್ಷಣ ಇಲಾಖೆ,ಕ್ರಮಯಾವಾಗ?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನಲ್ಲಿ ಹಲವಾರು ಕೋಚೀಂಗ್ ಸೆಂಟರ್ ಗಳು ಅನಧೀಕೃತವಾಗಿ ನಡೆಯುತ್ತಿದ್ದು ಅವುಗಳಲ್ಲಿ ತಡೆಯುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಕೈಚಲ್ಲಿದ್ದು ಅಂತಿಮವಾಗಿ ನಿರ್ಧಾರವನ್ನು ಪಾಲಕರ ಗಮನಕ್ಕೆ ತರಲು ಯತ್ನಿಸಿರುವುದು ಕಂಡು ಬಂದಿದೆ
ತಾಲೂಕಿನಲ್ಲಿ ಲಿಂಗಸಗೂರು, ಮುದಗಲ್,ಮಸ್ಕಿ, ಗುರುಗುಂಟಾ,ಹಟ್ಟಿ ಮೊದಲಾದ ಕಡೆಯಲ್ಲಿ ಅನಧೀಕೃತ ಕೋಚಿಂಗ್ ಸೆಂಟರ ನಡೆಸಲಾಗುತ್ತಿದೆ ನಿಯಮಬಾಹಿರವಾಗಿ ನಡೆಸುತ್ತಿರುವ ಕೋಚಿಂಗ್ ಸೆಂಟರ್ ಬಂದ್ ಮಾಡುವಂತೆ ಹಲವಾರು ಸಂಘ ಸಂಸ್ಥೆಗಳು ಸಾರ್ವಜನಿಕರು ಬಂದ್ ಮಾಡಿಸುವಂತೆ ಒತ್ತಾಯಿಸುತ್ತಲೆ ಬಂದಿದ್ದವು ಶಿಕ್ಷಣ ಇಲಾಖೆಯು ಆರೋಪಗಳು ಕೇಳಿಬಂದಾಗಲೊಮ್ಮೆ ದಾಳಿ ಮಾಡಿದವೆ ಹೊರತು ಯಾವುದೆ ಕೇಂದ್ರಗಳು ಬಂದ್ ಆಗಲಿಲ್ಲ
ಕೊನೆಗೆ ಅನಿವಾರ್ಯವಾಗಿ ಶಿಕ್ಷಣ ಇಲಾಖೆ ಮಾಧ್ಯಮಗಳಿಗೆ ಪ್ರೆಸ್ ನೋಟ್ ನೀಡಿ ತಾಲೂಕಿನಲ್ಲಿ ಕೇವಲ ೫ ಕೋಚಿಂಗ್ ಸೆಂಟರಗಳಿಗೆ ವಸತಿ ರಹಿತವಾಗಿ ನಡೆಸುವಂತೆ ಅನುಮತಿಯನ್ನು ನೀಡಲಾಗಿದ್ದು ಉಳಿದವುಗಳಿಗೆ ಅನುಮತಿಯನ್ನು ನೀಡಿರುವುದಿಲ್ಲ ಮತ್ತು ಅವುಗಳ ಮೇಲೆ ದಾಳಿ ಮಾಡಲಾಗಿದೆ ಆದರು ಸಹಿತ ಅವುಗಳನ್ನು ಹಾಗೆ ಮುಂದುವರೆಸಲಾಗುತ್ತಿದೆ ಎಂದು ನಿರ್ಧಾರವನ್ನು ಪಾಲಕರ ಮೇಲೆ ಬಿಟ್ಟಿದ್ದು ಅಲ್ಲಿಗೆ ಶಿಕ್ಷಣ ಇಲಾಖೆ ತನ್ನ ಜವಾಬ್ದಾರಿಯನ್ನು ಕಳೆದುಕೊಂಡAತಾಗಿದೆ
ಕ್ರಮ ಯಾರ ಮೇಲೆ?:ತಾಲೂಕಿನಲ್ಲಿ ಅನುಮತಿ ಪಡೆಯದೆ ಹಲವಾರು ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದೆ ಎಂದು ಇಲಾಖೆ ಗಮನಕ್ಕೆ ಇದ್ದರು ಅಸಹಾಯಕವಾಗಿ ವರ್ತಿಸುತ್ತಿರುವುದು ಒಂದೆಡೆಯಾದರೆ ಅನುಮತಿ ಪಡೆಯದೆ ಕೋಚಿಂಗ್ ಸೆಂಟರ್ ನಡೆಸುತ್ತಿರುವುದು ಮತ್ತೊಮದೆಡೆ ಹಾಗಾದರೆ ಇಲ್ಲಿ ಕ್ರಮಯಾವಾಗ? ಯಾರ ಮೇಲೆ ಎನ್ನುವುದೆ ನಿಗೂಢವಾಗಿದೆ ಕೂಡಲೇ ಸಂಬAಧಿಸಿದ ಅಧಿಕಾರಿಗಳು ಕ್ರಮವಹಿಸಿಬಹುದೆ? ಕಾದುನೋಡೋಣ

WhatsApp Group Join Now
Telegram Group Join Now
Share This Article