ಮಾನವ ಜನ್ಮ ಸಂಸಾರದ ಜೊತೆಗೆ ಪಾರಮಾರ್ಥ ವನ್ನು ಅರಿಯಬೇಕು-ಹನಮಂತ್ರಾಯ ಶರಣರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಾನವ ಜನ್ಮದಲ್ಲಿ ಜನಿಸಿಬಂದ ಬಳಿಕ ಬರಿ ಸಂಸಾರದ ಚಿಂತನೆಯಲ್ಲಿ ತೊಡಗದೆ ಪಾರಮರ‍್ಥದ ರ‍್ಥವನ್ನು ಅದರಿದು ಮಾನವ ಜನ್ಮ ಜನನದ ಲಾಭ ಅರಿಯಬೇಕು ಎಂದು ನಿಜಾನಂದ ಆಶ್ರಮ ಶಕ್ತಿನಗರ ಪೀಠಾಧಿಪತಿ ಹನಮಂತ್ರಾಯ ಶರಣರು ಹೇಳಿದರು
ಅವರು ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಶ್ರೀಮೌನೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ರ‍್ಪಡಿಸಿದ ಪ್ರವಚನ ಕರ‍್ಯಕ್ರಮದಲ್ಲಿ ಪ್ರವನಚನಕಾರರಾಗಿ ಆಗಮಿಸಿ ಸತತವಾಗಿ ೧೧ದಿನ ನಿಜಗುಣ ಶಿವಯೋಗಿಗಳ ಮಾನವ ಜನನದ ಲಾಭವಾಹುದು ಎನ್ನುವ ವಿಷಯದ ಕುರಿತು ಪ್ರವಚನ ನಡೆಸುತ್ತಾ ಕೊನೆಯದಿನದ ಪ್ರವಚನ ನೀಡುತ್ತಾ ಮಾನವ ಜನಸಾಗರ,ಜಲಸಾಗರ ದಾಟಬಹುದು ಆದರೆ ಭವಸಾಗರ ದಾಟುವುದು ಕಠಿಣವಾಗಿದ್ದು ಮಾನವ ದೇಹದ ಪಂಚೇಂದ್ರೀಯಗಳನ್ನು ಸರಿಯಾಗಿ ಬಳಿಸಿಕೊಂಡು ವಿಷಯ ಲಾಲಸೆಕಡೆಗೆ ಸಾಗದೆ ಪಾರಮರ‍್ಥದ ತತ್ವಚಿಂತನೆ ಮಾಡಿದರೆ ಜೀವನದ ಮುಕ್ತಿ ದೊರೆಯಲಿದೆ ಎಂದು ಬಹಳ ಅದ್ಭತವಾದ ಮೌಲ್ಯಯುತ ಮಾತನಾಡಿದರು
ಅತಿಥಿಗಳಾಗಿ ಆಗಮಿಸಿದ ಕಲ್ಯಾಣ ರ‍್ನಾಟಕ ಪತ್ರಿಕೆಯ ಸಂಪಾದಕ ಲಕ್ಷö್ಮಣ ಬಾರಿಕೇರ್ ಮಾತನಾಡುತ್ತಾ ಚಿಕ್ಕಹೆಸರುರು ಗ್ರಾಮದಲ್ಲಿ ಜಾತ್ರಾಮಹೋತ್ಸವವೆಂದರೆ ಕೇವಲ ರಥ ಎಳೆಯುವುದಲ್ಲ ಅದರ ಜೊತೆಗೆ ರ‍್ಮಗೋಷ್ಠಿಗಳು,ಸಾಮೂಹಿಕ ವಿವಾಹಗಳು,ನಾಟಕ ಸೇರಿದಂತೆ ವಿವಿಧ ಕರ‍್ಯಕ್ರಮ ಹಮ್ಮಿಕೊಂಡಿದ್ದು ವಿಶಿಷ್ಟವಾಗಿದೆ ಆಹಾರ ಪರಿಸರ ಕಲುಷಿತವಾಗುತ್ತಿದೆ ಇದೀಗ ಅದರ ಜೊತೆಗೆ ಮನುಜರ ಮನಸುಗಳು ಅಂತಹ ಮನದ ಕಲುಷಿತ ಕಳೆಯಲು ಅನುಭಾವಿಗಳ ಮಾತುಗಲು ಅಷ್ಟೆ ಮಹತ್ವದಾಗಿದ್ದು ಪ್ರವಚನಕಾರರು ನಾಟಕ ರಚನೆಕಾರರಾದ ಹನುಮಂತ್ರಾಯ ಶ್ರೀಗಳು ಉತ್ತಮ ಚಿಂತನೆಯನ್ನುಗೈಯುವುದರ ಮೂಲಕ ಮಾನವ ಜನನದ ನಿಜಲಾಭದ ರ‍್ಥವಿವರಿಸಿದ್ದು ಶ್ಲಾಘನೀಯವಾಗಿದೆ ಎಂದರು
ಶಶಿನಾ ಚಿಕ್ಕಹೆಸರೂರು ಮಾತನಾಡುತ್ತಾ ಒಣಬೇಸಾಯದ ಗ್ರಾಮವಾದರು ಇಲ್ಲಿ ಕೊಡುಗೈದಾನಿಗಳು ಇರುವುದರಿಂದ ರ‍್ಷದಲ್ಲಿ ಎರಡು ಜಾತ್ರೆಗಳು ನಡೆಯುತ್ತವೇ ಎಂದರು
ಈ ಸಂರ‍್ಭದಲ್ಲಿ ಶರಣಬಸಪ್ಪ ಪಟ್ಟೇದ,ಶರಣಬಸವ, ಬಸವರಾಜ ಸೇರಿದಂತೆ ಗ್ರಾಮದ ಮುಖಂಡರು ಇದ್ದರು