ಆದಪ್ಪ ಕರಡಕಲ್ ನ ದೇಶಿಸೋಡಕ್ಕೆ ಬಹುಬೇಡಿಕೆ,ಹುಡಕಿಬರುವ ಗ್ರಾಹಕರು

Laxman Bariker
ಆದಪ್ಪ ಕರಡಕಲ್ ನ ದೇಶಿಸೋಡಕ್ಕೆ ಬಹುಬೇಡಿಕೆ,ಹುಡಕಿಬರುವ ಗ್ರಾಹಕರು
WhatsApp Group Join Now
Telegram Group Join Now

ಆದಪ್ಪ ಕರಡಕಲ್ ನ ದೇಶಿಸೋಡಕ್ಕೆ ಬಹುಬೇಡಿಕೆ,ಹುಡಕಿಬರುವ ಗ್ರಾಹಕರು

೭೨ರ ಇಳಿವಯಸಿನಲ್ಲಿ ಎಳೆಯುವಕರಂತೆ ದುಡಿಯುತ ಸ್ವಾವಲಂಬಿ ಜೀವನ

ವೃದ್ಧಾಪ್ಯ ವೇತನ ಪಡೆದಿಲ್ಲ,ದುಡಿದ ಹಣದಲ್ಲೆ ಅರವಟ್ಟಿಗೆ ನಡೆಸುವ ಗೌಡ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಯಾರಾದರು ಸೋಡಾ ಕೇಳಿದರೆ ತಟ್ಟನೆ ತೋರುವುದು ಆದಪ್ಪ ಕರಡಕಲ್ ನ ಗೌಡ್ರ ಸೂಡಾದ ಬಂಡಿಯನ್ನೆ ತೋರಿಸುತ್ತಾರೆ ಅಷ್ಟೊಂದು ಬೇಡಿಕೆ ಆದಪ್ಪನ ಸೋಡಾಕ್ಕಿದ್ದು ಗ್ರಾಹಕರು ಈತನನ್ನು ಹುಡುಕಿ ಬರುತ್ತಾರೆ

ಹೌದು ಆದಪ್ಪ ಕರಡಕಲ್ ಕೊಡುವ ಸೋಡಾ ಗಿರಾಕಿಗಳನ್ನು ಅಷ್ಟು ಆಕರ್ಷಣೆಗೊಳಿಸಿದೆ ಬೇಸಿಗೆ ಬಂದರೆ ತಂಪುಪಾನಿಯ ಹುಡುಕಿಹೋಗುವ ಹಲವರು ಕುಡಿಯುವುದು ಹಲವಾರು ರಸಾಯನಿಕ ಮಿಶ್ರಿತ ಪಾನಿಯಗಳನ್ನು ಆದರೆ ಆದಪ್ಪ ಕೊಡುವ ಸೋಡಾದಲ್ಲಿ ಯಾವುದೆ ಹಾನಿಕಾರಕ ರಸಾಯನಿಕ ಇಲ್ಲದೆ ದೇಶಿಯವಾಗಿ ದೊರೆಯುವ ಉತ್ತಮಗುಣಮಟ್ಟದ ಉಪ್ಪು ಹಾಗೂ ಜೀರಿಗೆಯನ್ನು ಬಳಸಿ ಪುಡಿಮಾಡಿ ಅದರಲ್ಲಿ ಲಿಂಬು ಬಳಕೆ ಮಾಡಿ ಕೊಡುವ ಸೋಡಾ ನಿಜಕ್ಕೂ ತುಂಬಾ ರುಚಿಯಾಗಿರುತ್ತದೆ ಅಲ್ಲದೆ ಆರೋಗ್ಯಕ್ಕೂ ಅಷ್ಟೆ ಉಪಯುಕ್ತ ಎನ್ನುತ್ತಾರೆ ಇವರ ಸೋಡಾ ಸಏವಿಸಿದ ಜನರು
ಆದಪ್ಪ ಬೆಳಗ್ಗೆ ಸೋಡಾ ಸುರುಮಾಡಿದರೆ ದಣಿವರಿಯದೆ ಸಂಜೆವರೆಗೂ ಕೆಲಸ ಮಾಡುತ್ತಾರೆ ದಿನಕ್ಕೆ ಏನಿಲ್ಲವೆಂದರು ಐದುನೂರರಿಂದ ಸಾವಿರದ ತನಕ ಮಾರಾಟವಾಗುತ್ತದೆ ಎಂದು ಅವರೇ ಹೇಳುತ್ತಾರೆ
೩೫ವರ್ಷ ನಿರಂತರಸೇವೆ:ಪಿಯು ಶಿಕ್ಷಣ ಮುಗಿದೊಡನೆ ಮನೆಯಲ್ಲಿ ಬಡತನ ದುಡಿಯಲು ಬೇರೆಕಡೆ ಹೋಗುತ್ತಾರೆ ಅಲ್ಲಿ ಸೊಡಾದ ಬಗೆಗೆ ಮಾಹಿತಿ ಪಡೆದು ಕಿರಿವಯಸಿನಲ್ಲಿಯೆ ಸೋಡಾಮಾರಾಟಕ್ಕೆ ಪ್ರಾರಂಭ ಮಾಡುತ್ತಾರೆ ಮೊದಲಿಗೆ ಗೋಲಿಸೋಡಾ ಹೊತ್ತು ಮಾರುತ್ತಿದ್ದ ಇವರು ನಂತರದಲ್ಲಿ ಸೋಡಾ ಬಂಡಿ ಆರಂಭ ಮಾಡುತ್ತಾರೆ ಮೊದಲಿಗೆ ಕೇವಲ ಒಮದು ರೂಪಾಯಿಗೆ ಸೋಡಾ ಮಾರುತಿದ್ದ ಇವರು ನಂತರದಲ್ಲಿ ೫ರೂ ಗೆ ಮಾರಾಟ ಮಾಡುತ್ತಾರೆ ತೀರಾ ಇತ್ತೀಚೆಗೆ ಎಲ್ಲಾ ಬೆಲೆಗಳು ಏರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಹತ್ತು ರೂ ಗಳಿಗೆ ಒಂದು ಸೋಡಾ ಮಾರಾಟ ಮಾಡುತ್ತಾರೆ
ವೃದ್ದಾಪ್ಯವೇತನ ಪಡೆಯದ ಆದಪ್ಪ:ಆದಪ್ಪನಿಗೆ ಈಗ ೭೨ ವಯಸ್ಸು ಆದರು ದಣಿವರಿಯದೆ ನಿತ್ಯ ದುಡಿಯುತ್ತಾರೆ ಅದರಿಂದ ಬರುವ ಹಣದಲ್ಲಿ ತಮ್ಮ ಸ್ವಾವಲಂಬಿ ಜೀವನ ಸಾಗಿಸುತ್ತಾರೆ ಆದರೆ ಸರಕಾರದಿಂದ ಬರುವ ಯಾವುದೆ ಸೌಲತ್ತು ನನಗೆ ಬೇಡ ಎನ್ನುತ್ತಾರೆ ಅದರಂತೆ ಇವರಿಗೆ ವಯಸಾದರು ನನಗೆ ಸರಕಾರದಿಂದ ಬರುವ ವೃದ್ದಾಪ್ಯವೇತನ ಬೇಡವೆಂದು ಹೇಳುತ್ತಿದ್ದಾರೆ ಅಂತಹ ಸ್ವಾವಲಂಬಿ ಜಿವನವನ್ನು ನಡೆಸುತ್ತಿದ್ದಾರೆ

ಸೋಡಾದ ಜೊತೆಗೆ ನೀರಿನ ಅರವಟ್ಟಿಗೆ:ತಾನು ಸೋಡಾ ಮಾರಿ ಜೀವನ ನಡೆಸುತ್ತಿದ್ದರು ಪರರಿಗೆ ಅನುಕೂಲವಾಗಲೆಂದು ಸೊಡಾದ ಅಂಗಡಿಯ ಪಕ್ಕದಲ್ಲಿಯೆ ನೀರಿನ ಅರವಟ್ಟಿಗೆ ಪ್ರಾರಂಭ ಮಾಡಿದ್ದಾನೆ ದಿನಾಲು ಏಳೆಂಟು ಫಿಲ್ಟರ್ ನೀರಿನ ಬಾಟಲ್ ಖಾಲಿಯಾಗುತ್ತಿದ್ದು ಅದಕ್ಕೆ ಐಸ್ ಹಾಕಿ ತಂಪುನೀರನ್ನು ನೀಡುತ್ತಾರೆ ಅದಕ್ಕೆ ಸೋಡಾದಿಂದ ಬಂದಹಣವನ್ನೆ ಖರ್ಚುಮಾಡುತ್ತಾರೆ
ದುಡಿದ ಹಣದಲ್ಲೆ ಪರೋಪಕಾರಮಾಡುತ್ತಾ ಸರಕಾರದ ಹಣಕ್ಕೆ ಕೈಯೊಡ್ಡದೆ ಸ್ವಾವಲಂಬಿ ಜೀವನ ನಡೆಸುವ ಇಳಿವಯಸಿನಲ್ಲಿಯು ದುಡಿಯುವ ಇವರ ಹುಮ್ಮಸ್ಸು ನಮ್ಮ ಯುವಕರಿಗೆ ಮಾದರಿಯೇ ಸರಿ ಹಾಗಾದರೆ ತಡವೇಕೆ ಇವರ ಸೊಡಾದ ರುಚಿ ನಿವುಒಮ್ಮೆ ನೋಡಿ ಹಿರಿಯಜೀವಕ್ಕೆ ಪ್ರೋತ್ಸಾಯಿಸಿ ಎಂಬುದು ಪತ್ರಿಕೆಯ ಆಶಯವಾಗಿದೆ

WhatsApp Group Join Now
Telegram Group Join Now
Share This Article