ಸುಸಜ್ಜಿತ ನ್ಯಾಯಾಲಯ ಕಟ್ಟಡದಲ್ಲಿ ಬಡವರಿಗೆ ನ್ಯಾಯಾ ಸಿಗಬೇಕು-ಅಂಜರಿಯಾ
ನರಳುತ್ತಾ ಬಂದವರು,ನಗುತ್ತಾ ಸಾಗಬೇಕು-ಪಾಟೀಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ::ಪಟ್ಟಣದಲ್ಲಿ ನ್ಯಾಯಾಲಯದ ಸಂಕೀರ್ಣದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಬರುವ ಬಡ ಕಕ್ಷಿದಾರರಿಗೆ ತೀವ್ರ ನ್ಯಾಯಾ ಸಿಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳಾದ ಎನ್.ವಿ. ಅಂಜರಿಯಾ ಹೇಳಿದರು

ಅವರು ಪಟ್ಟಣದಲ್ಲಿ ೨೧ ಕೋಟಿ ರೂ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನ್ಯಾಯಾಧೀಶರ ವಸತಿ ಗೃಹ ವಕೀಲರ ಭವನ ಹಾಗೂ ಇ ಸೇವಾ ಕೇಂದ್ರದ ಶಿಲ್ಯಾನ್ಯಸನವನ್ನು ಉದ್ಘಾಟಿಸಿ ಮಾತನಾಡಿ ಲಿಂಗಸುಗೂರ ಐತಿಹಾಸಿಕ ಕೇಂದ್ರವಾಗಿದ್ದು ಕಟ್ಟಡ ಎಲ್ಲಾ ಮೂಲ ಸೌಕರ್ಯಗಳಿಂದ ನಿರ್ಮಿತವಾಗಿದ್ದು ಇದರಿಂದ ತಾಲೂಕಿನ ಜನರಿಗೆ ಹಾಗೂ ವಕೀಲರಿಗೆ ಸಾಕಷ್ಟು ಅನುಕೂಲವಾಗಲಿದೆ ಜಿಲ್ಲೆಯಲ್ಲಿ ಮಾದರಿ ಕಟ್ಟಡವಾಗಿದ್ದು ರಾಷ್ಟçಕೂಟಾ ಚಾಲುಕ್ಯರ ರಾಜಮನೆತನದವರು ಆಳಿದ ಛಾವಣಿ ಬ್ರಿಟಿಷರ್ ಸೈನಿಕರ ದಂಡು ಪ್ರದೇಶವಾಗಿದ್ದು, ಹಿಂದೆ ಜಿಲ್ಲಾ ಕೇಂದ್ರ ವಾಗಿರುವ ಸ್ಥಳವಾಗಿದೆ ಇಂತಹ ಸ್ಥಳದಲಿ ನ್ಯಾಯಾದಾನ ಪುಣ್ಯದ ಕೆಲಸವಾಗಿದ್ದು ವಕೀಲರು ಸಕಲ ರೀತಿ ತಯಾರಾಗಿ ಬಡವರ ಪರ ನ್ಯಾಯಾ ದೂರಕಿಸಬೇಕು ಎಂದರು
ಸುಪ್ರೀಂ ಕೂರ್ಟ್ ನಿವೃತ್ತ ನ್ಯಾಯಾಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ ನ್ಯಾಯಾಲಯ ಹಾಗೂ ಆಸ್ಪತ್ರೆಗಳು ಎಂದು ಮನೊರಂಜನೆ ಕೇಂದ್ರಗಳಲ್ಲ ಇಲ್ಲಿ ಬರುವ ಬಡವರಿಗೆ ಸೂಕ್ತ ಚಿಕಿತ್ಸೆ ಹಾಗೂ ನ್ಯಾಯಾ ದೊರಕಿಸ ಕೂಡಬೇಕು ವಕೀಲರು ನ್ಯಾಯಾ ಹಾಗೂ ಧರ್ಮ ಪಾಲಿಸಬೇಕು ಸರಕಾರ ನ್ಯಾಯಾಂಗ ಇಲಾಖೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದು ತಾಲೂಕು ಕೇಂದ್ರ ಸುಸಜಿತ ನ್ಯಾಯಾಲಯ ಕಟ್ಟಡ ನಿರ್ಮಾವಾಗಿದ್ದು ವಕೀಲರು ಸೂಕ್ತ ಕಾನೂನು ಬಳಸಿ ಕಕ್ಷಿದಾರರಿಗೆ ನ್ಯಾಯಾ ಒದಗಿಸುವ ಕೆಲಸ ಆಗಬೇಕು ನರಳುತ್ತಾ ಬಂದವರು ನಗುತ್ತಾ ಸಾಗಬೇಕು, ಇಂದಿನ ನಾಲ್ಕು ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಯವನಾದ ನನಗೆ ಹೆಮ್ಮೆ ಎನ್ನಿಸಿದೆ ಎಂದು ಹೇಳಿದರು.
ರಾಯಚೂರು ಜಿಲ್ಲಾ ಉಸ್ತವಾರಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ ನಮ್ಮ ಸರಕಾರ ಹಾಗೂ ಮುಖ್ಯಮಂತ್ರಿಗಳು ನ್ಯಾಯಾಲಯ ಹಾಗೂ ನ್ಯಾಯಾಂಗದ ಬಗ್ಗೆ ಗೌರವ ಇದ್ದು ನ್ಯಾಯಾಂಗದ ಅಭಿವೃದ್ಧಿಗೆ ದಾಪೂಗಾಲು ಹಾಕಿದ್ದು ಕಾರಣ ಲಿಂಗಸುಗೂರನಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗಿದ್ದು ಸೂಕ್ತ ನ್ಯಾಯಾ ಸಿಗಬೇಕು ಸಂವಿಧಾನ ೩೭೧ ಜೇ ತಿದ್ದುಪಡೆಯಿಂದ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ನಿರೋದ್ಯೂಗಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಮತ್ತು ನಮ್ಮ ಕರ್ತವ್ಯವಾಗಿದ್ದು ಸರಕಾರ ಎಲಾ ಇಲಾಖೆ ಅಭಿವೃದ್ಧಿಗೆ ಸಹಕಾರ ನೀಡುವದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧಿಶರಾದ ಎಂ.ಜಿ ಉಮಾ ಮಾತನಾಡಿದರು.
ಶಾಸಕ ಮಾನಪ್ಪ ವಜ್ಜಲ್ ಹಾಗೂ ಎಂಎಲಸಿ ಶರಣಗೌಡ ಪಾಟೀಲ ಬಯ್ಯಾಪುರ ಮಾತನಾಡಿ ನ್ಯಾಯಾಲಯ ದೇವಾಲಯವಿದ್ದಂತೆ ಸ್ವಚ್ಛತೆಯೊಂದಿಗೆ ಪಾವಿತ್ರತೆ ಕಾಪಾಡಬೇಕು ಹಾಗೂ ಕಕ್ಷಿದಾರರಿಗೆ ನ್ಯಾಯಾ ಸಿಗಬೇಕು ಎಂದು ಹೇಳಿದರು
ಸಂದರ್ಭದಲ್ಲಿ ಹೈಕೋರ್ಟ ರೇಜಿಸ್ಟರ ಜೆನರಲ್ ಕೆ.ಎಸ ಭರತ, ರಾಯಚೂರು ಜಿಲ್ಲಾ ಸೆಸ್ನಸ್ ನ್ಯಾಯಾಧಿಶರಾದ ಮಾರುತಿ ಎಸ ಬಗಾಡೆ, ತಾಲೂಕು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧಿಶರಾದ ಉಂಡಿ ಮಂಜುಳಾ, ತಾಲೂಕು ಪ್ರಧಾನ ಸಿವಿಲ ನ್ಯಾಯಾಧೀಶರಾದ ಅಂಬಣ್ಣ ಕೆ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ ವಕೀಲರು , ಎಂಎಲಸಿ ವಸಂತ ಕುಮಾರ, ರಾಯಚೂರು ಜಿಲ್ಲಾಧಿಕಾರಿ ನಿತೀಶ ಕೆ, ಜಿಲ್ಲಾ ಪೂಲೀಸ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹಾಗೂ ಇತರೆ ತಾಲೂಕ ವಕೀಲರು ಸಾರ್ವಜನಿಕರು ಇದ್ದರು.
ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ನ್ಯಾಯಾಧಿಶರಾದ ಬಸ್ಸಪ್ಪಬಾಲ್‌ಜಗಾತಿ ಮಾಡಿದರು ಮತ್ತು ವಕೀಲರ ಸಂಘದ ಕಾರ್ಯಾದರ್ಶಿ ಬಾಲರಾಜ ಸಾಗರ ವಂದಿಸಿದರು.