ಪುರಸಭೆ:ಬಜೆಟ್ ಪೂರ್ವಸಾಮಾನ್ಯಸಭೆ
ತಾಜ್‌ಮಹಲ್,ರಾಮಮಂದಿರದ ಬೇಡಿಕೆ,ಸಭೆಯಲ್ಲಿ ಮಾತಿನ ಜಟಾಪಟಿ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಪುರಸಭೆಯ ಬಜೆಟ್ ಪೂರ್ವ ಸಾಮನ್ಯಸಭೆಯಲ್ಲಿ ತಾಜ್ ಮಹಲ್ ಹಾಗೂ ರಾಮಮಂದಿರ ಬೇಡಿಕೆಗೆ ಕೆಲಸದಸ್ಯರು ಬಜೆಟ್ ಮೀಸಲಿಗೆ ಸೂಚಿಸುತ್ತಿರುವಂತೆ ಸಭೆಯಲ್ಲಿ ಮಾತಿನ ಜಟಾಪಟಿ ಚರ್ಚೆಯ ಸ್ವಾರಸ್ಯಕರ ಘಟನೆ ಒಂದೆಡೆಯಾದರೆ ಜನಸಾಮಾನ್ಯರಿಗೆ ಮೂಲಭೂತಸೌಕರ್ಯ ನೀಡುವಲ್ಲಿ ಪುರಸಭೆ ವಿಫಲವಾಗುತ್ತಿದೆ ಎಂಬ ಗಂಭೀರಚಿAತನೆಯು ಅದರ ಹಿಂದೆ ಧ್ವನಿಸುತ್ತಿತ್ತು
ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷರಾದ ಬಾಬುರೆಡ್ಡಿ ಮುನ್ನೂರು ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಸಭೆಯನ್ನು ಸದಸ್ಯರು ಸಂಘಟನೆಗಳು ಹಿರಿಯನಾಗರೀಕರು ಸೇರಿದಂತೆ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ಪುರಸಭೆಯ ವ್ಯವಸ್ಥಾಪಕ ಹನಮಂತನಾಯಕ ೨೦೨೫-೨೬ನೇ ಸಾಲಿನ ಆಯ-ವ್ಯಯ ಚರ್ಚಿಸುವ ಬಗ್ಗೆ ವಿವರಗಳ ಸಾರಾಂಶದ ಪಟ್ಟಿ ಓದುತ್ತಿರುವಂತೆ ಸದಸ್ಯರಾದ ಎಂ,ಡಿ ರಫಿಯವರು ಮಾತನಾಡುತ್ತಾ ನಮ್ಮಬೇಡಿಕೆ ತಾಜ್ ಮಹಲ್ ನಿರ್ಮಾಣಕ್ಕೆ ಬಜೆಟ್ ನೀಡಿ ಎಂದರೆ ಅದಕ್ಕೆ ತಕ್ಷಣವೇ ಮತ್ತೊಬ್ಬ ಸದಸ್ಯರಾದ ಮುದಕಪ್ಪನಾಯಕ ಮಾತನಾಡುತ್ತಾ ನಮಗೆ ರಾಮಮಂದಿರ ನಿರ್ಮಾಣಕ್ಕೆ ಬಜೆಟ್ ನೀಡಿ ಎನ್ನುತ್ತಾ ಸಭೆಯನ್ನು ಕ್ಷಣಕಾಲ ಗಂಭೀರಚಿAತನೆಯತ್ತ ಸೆಳೆದರು
ನಂತರ ಅವರು ಮಾತನಾಡುತ್ತಾ ಪುರಸಭೆಯ ವ್ಯಾಪ್ತಿಯಲ್ಲಿ ದೀಪಗಳ ಸಮಸ್ಯೆ ಇದೆ ಚರಂಡಿ ಕುಡಿಯುವ ನೀರು ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳಿಗೆ ಕಸಸಂಗ್ರಹದ ಬುಟ್ಟಿಗಳನ್ನು ಕೆಲವರಿಗೆ ಮಾತ್ರ ನೀಡಲಾಗಿದೆ ಇನ್ನುಳಿದವರಿಗೆ ಕೊಡುವದು ಯಾವಾಗ?ಜನ ನಮ್ಮನ್ನು ಕೇಳುತ್ತಿದ್ದಾರೆ ನಾವು ಹೇಳಿದ ಕೆಲಸ ಯಾವವು ಆಗುತ್ತಿಲ್ಲ ಯಾವುದೆ ವಿಷಯವನ್ನು ನಮ್ಮ ಗಮನಕ್ಕೆ ತರುತ್ತಿಲ್ಲ ಇದುವರೆಗೂ ಸಾಮಾನ್ಯಸಭೆ ಕರೆಯಲಿಲ್ಲ ಎಲ್ಲಾ ತೀರ್ಮಾನಗಳನ್ನು ನೀವೆ ಮಾಡುವುದಾದರೆ ಜನ ನಮ್ಮನ್ನು ಯಾಕೆ ಆಯ್ಕೆ ಮಾಡಿ ಕಳಿಸಿದ್ದಾರೆ ಅವರು ಕೇಳಿದರೆ ನಾವು ಏನು ಉತ್ತರಿಸಬೇಕು ಎಂದು ಮಾತಿನ ಜಟಾಪಟಿ ನಡೆಯಿತು ಅದಕ್ಕೆ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಸಮಜಾಯಿಸಿ ನೀಡಿದರು ಇಂತಹ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲವೆಂದು ಎಂ,ಡಿ ರಫಿ ಹಾಗೂ ಮುದಕಪ್ಪನಾಯಕ ಹೊರನಡೆದರು
ನಂತರದಲ್ಲಿ ಹಲವಾರು ಸದಸ್ಯರು ಹಾಗೂ ಸಂಘ-ಸAಸ್ಥೆಯವರು ಮತ್ತು ನಾಗರೀಕರು ತಮ್ಮ ತಮ್ಮ ವಆಡುಗಳಿಲ್ಲಿರುವ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು ಅವುಗಳಿಗೆ ಹಣಮೀಸಲಿಡಲು ಕೋರಿದರು
೨೦೨೫-೨೬ನೇ ಸಾಲಿನ ಆದಾಯ ರೂ ೧೮,೬೧,೯೫೦೦೦,ಖರ್ಚು೧೮,೫೨,೯೮,೮೦೦ ಆದಾಯ೮,೯೬,೨೦೦ ಆಯ-ವ್ಯಯ ಚರ್ಚಿಸುವ ವಿವರದ ಪಟ್ಟಿಯನ್ನು ವ್ಯವಸ್ಥಾಪಕ ಹನಮಂತನಾಯಕ ಓದಿದರು
ಈ ಸಂದರ್ಭದಲ್ಲಿ ಸದಸ್ಯರು ಹಾಗೂ ನಾಗರೀಕರು ದೊಡ್ಡನಗೌಡ ಪಾಟೀಲ್, ರುದ್ರಪ್ಪ ಬ್ಯಾಗಿ, ಯಮನಪ್ಪ ದೇಗಲಮರಡಿ,ಬಸವರಾಜ ಯತಗಲ್,ಪರಶುರಾಮ ಕೆಂಬಾವಿ,ಕುಪ್ಪಣ್ಣ ಕವಿತಾಳ, ವಿಶ್ವನಾಥ ಆನ್ವರಿ, ಹನಮಂತ ಕನ್ನಾಳ, ಮಹಿಳಾ ಸದಸ್ಯರು,ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಇದ್ದರು