ಗುಂಡಸಾಗರ: ಪಡಿತರ ವಿತರಣೆಯಲ್ಲಿ ಲೋಪ, ನ್ಯಾಯಬೆಲೆ ಅಂಗಡಿ ಸಂಖ್ಯೆ153 ಅಮಾನತ್

Laxman Bariker
ಗುಂಡಸಾಗರ: ಪಡಿತರ ವಿತರಣೆಯಲ್ಲಿ ಲೋಪ, ನ್ಯಾಯಬೆಲೆ ಅಂಗಡಿ ಸಂಖ್ಯೆ153 ಅಮಾನತ್
WhatsApp Group Join Now
Telegram Group Join Now

ಗುಂಡಸಾಗರ: ಪಡಿತರ ವಿತರಣೆಯಲ್ಲಿ ಲೋಪ, ನ್ಯಾಯಬೆಲೆ ಅಂಗಡಿ ಸಂಖ್ಯೆ153 ಅಮಾನತ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಡಿತರದಾರರಿಗೆ ಸರಿಯಾಗಿ ಆಹಾರಧಾನ್ಯಗಳನ್ನು ವಿತರಣೆ ಮಾಡದಿರುವುದರಿಂದ ಹಲವಾರು ಲೋಪಗಳ ಆರೋಪಗಳು ಬಂದ ಹಿನ್ನೆಲೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಿಳಾ ಸಹಕಾರಿ ಸಂಘ ನಡೆಸುತ್ತಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೫೩ನ್ನು ಜಿಲ್ಲಾ ಆಹಾರ ಉಪನಿರ್ದೇಶಕರು ಅಮಾನತ್ತಿನಲ್ಲಿಸಿ ಆದೇಶಹೊರಡಿಸಿದ್ದಾರೆ
ತಾಲೂಕಿನ ಗುಂಡಸಾಗರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಿಳಾ ಸಹಕಾರಿ ನ್ಯಾಯಬೆಲೆ ಅಂಗಡಿ ಸಂಖ್ಯೆ  153ರ ಡೀಲರಿಗೆ ಹಲ್ಕಾವಟಿಗಿ, ಸಜ್ಜಲಗುಡ್ಡ,ಪಲಗಲದಿನ್ನಿ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 75ಮತ್ತು 81ನ್ನು ಲಗತ್ತಿಸಲಾಗಿತ್ತು ಸದರಿ ಡೀಲರ್ ಸರಿಯಾಗಿ ಪಡಿತರ ವಿತರಣೆ ಮಾಡದಿರುವುದು, ಬಯೋಮೆಟ್ರಿಕ್ ಪಡೆಯದೆ ಕೇವಲ ೨ದಿನ ಮಾತ್ರ ವಿತರಿಸುವುದು ಎರಡು ಮೂರು ತಿಂಗಳು ೮೦ರಿಂದ ೯೦ ಕಾರ್ಡುಗಳಿಗೆ ಆಹಾರ ವಿತರಣೆ ಮಾಡದಿರುವುದು ಪ್ರತಿ ಪಡಿತರ ಚೀಟಿಗೆ ಹತ್ತು ರೂ ಪಡೆಯುವುದು ಸೇರಿದಂತೆ ಗ್ರಾಹಕರಿಗೆ ಹಲವಾರು ಲೋಪಗಳನ್ನು ಮಾಡುತ್ತಾ ಬಡವರಿಗೆ ಸರಿಯಾಗಿ ಆಹಾರ ವಿತರಣೆ ಮಾಡುತ್ತಿಲ್ಲವೆಂದು ದೂರುಗಳ ಬಂದ ನಂತರ ಪಂಚನಾಮೆಯಲ್ಲಿಯು ಕಂಡು ಬಂದಿರುವುದರಿAದ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಸದರಿ ಅಂಗಡಿಯನ್ನು ಮುಂದುವರೆಸುವುದು ಸಮಂಜಸವಲ್ಲವೆಂದು ನ್ಯಾಯಬೆಲೆ ಅಂಗಡಿ ಸಂಖ್ಯೆ ೧೫೩ನ್ನು 16-01-2025ರಂದು ಅಮಾನತ್ ಗೊಳಿಸಿದ್ದು ಗುಂಡಸಾಗರ, ಹಲ್ಕಾವಟಿಗಿ, ಸಜ್ಜಲಗುಡ್ಡ,ಪಲಗಲದಿನ್ನಿ ಗ್ರಾಮಗಳ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಿರುವ ಬಗೆಗೆ ಮಾಹಿತಿ ನೀಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ

WhatsApp Group Join Now
Telegram Group Join Now
Share This Article