ಅಮರೇಶ್ವರ ಗುಡ್ಡದಲ್ಲಿ ಅರಣ್ಯ ಇಲಾಖೆಯಿಂದ ಹಾಕಿದ ಸಸಿಗಳು ನಾಪತ್ತೆ ದೂರು, ಪರೀಶಿಲನೆ, 52ಲಕ್ಷ ಭ್ರಷ್ಟಾಚಾರದ ಆರೋಪ !!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತ ಯರಡೋಣ ಸಮೀಪದ ಅಮರೇಶ್ವರ ಗುಡ್ಡದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ೨೦೨೩-೨೪ರಲ್ಲಿ ೩ಸಾವಿರ ಸಸಿಗಳನ್ನು ನಡೆಲಾಗಿದೆಂದು ಬೊಗಸ್ ಬಿಲ್ ಮಾಡಿ ತಾಲೂಕಿನ ೭ ಗ್ರಾಮ ಪಂಚಾಯತಗಳಲ್ಲಿಯು ಇದೆ ರೀತಿ ಬೋಗಸ್ ಬಿಲ್ ಮಾಡಿ ಬಿಓಸಿ ಹಣ ಲಪಟಾಸಿಲಾಗಿದೆಂದು ಕುಬೇರಪ್ಪ ಗುಪ್ಪಿಗುಡ್ಡ ಎನ್ನುವರು ತಾಲೂಕು ಪಂಚಾಯತ ಕಾರ್ಯನಿರ್ವಾಹ ಅಧಿಕಾರಿಗೆ ದೂರು ಸಲ್ಲಿಸಿರುವರು.
ಹೊನ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಯರಡೋಣ ಸಮೀಪ ಅಮರೇಶ್ವರ ಗುಡ್ಡದಲ್ಲಿ ೩ ಸಾವಿರ ಸಸಿಗಳು ನಡೆಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯ ಇಲಾಖೆ ದಾಖಲಾತಿಯಲ್ಲಿ ದೂರಿನ್ವಯ ತಾ.ಪಂ ಇಓ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದಾಗ ಅಲ್ಲಿ ಯಾವದೆ ಸಸಿಗಳು ಕಂಡು ಬಂದಿಲ್ಲ ಕೆಲವೊಂದು ನಿರ್ವಾಹಣೆ ಕೂರತೆಯಿಂದ ಒಣಗಿ ಹೋಗಿವೆ ೩ ಸಾವಿರ ಸಸಿಗಳಿಗೆ ಸಂಬAಧಿಸಿದAತೆ ಬೊಗಸ್ ಬಿಲ್ ಮೂಲಕ ಸಾಮಗ್ರಿ ವೆಚ್ಚ ಪಡೆಯಲಾಗಿದೆ ಎಂದು ತಿಳಿದುಬಂದಿದೆ
ಕುಬೆರಪ್ಪ ದೂರಿನ್ವಯ ೨೦೨೩-೨೪ನೇ ಸಾಲೀನಲ್ಲಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ವ್ಯಾಪ್ತಿಯಲ್ಲಿ ನಡೆದಿರುವ ಯಾವದೇ ಸಸಿಗಳನ್ನು ನಡೆದೆ ಹಾಗೂ ಸರಿಯಾಗಿ ನಿರ್ವಾಹಣೆ ಮಾಡದೆ ಸಾಮಗ್ರಿಗಳ ವೆಚ್ಚ(ಬಿಓಸಿ) ಬಾರಿ ಬೂಗಸ್ ಬಿಲ್ಲ ಮಾಡಿದ್ದು ತಾಲೂಕಿನ ೭ ಪಂಚಾಯತಿಗಳಾದ ಹೊನ್ನಳ್ಳಿ, ದೇವರಭೂಪೂರ, ಈಚನಾಳ, ರೋಡಲಬಂಡಾ ಯುಕೆಪಿ, ಕಾಳಪೂರು, ಗುಂತಗೋಳ ಪಂಚಾಯತಿಗಳ ಒಟ್ಟು ೫೨ ಲಕ್ಷ೨೧ಸಾವಿರ ೨೮೦ ರೂ ಬಾರಿ ಭ್ರಷ್ಟಾಚಾರವೇಸಗಿದಾರೆ ಇದರಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಲಯ ಅರಣ್ಯ ಅಧಿಕಾರಿಗಳು ಶ್ಯಾಮಿಲಾಗಿದ್ದಾರೆ ಎಂದು ದೂರಿದ್ದಾರೆ.