ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕು-ವಜ್ಜಲ್

Laxman Bariker
ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕು-ವಜ್ಜಲ್
oppo_2
WhatsApp Group Join Now
Telegram Group Join Now

ಧರ್ಮಸ್ಥಳ ಸಂಸ್ಥೆ ಯಿಂದ ಮಹಿಳಾ ವಿಚಾರ ಗೋಷ್ಠಿ

ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕು-ವಜ್ಜಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸೂಗೂರು : :ಮಹಿಳೆಯರು ಅರ್ಥಿಕವಾಗಿ ಸಬಲರಾಗಬೇಕು ಮಹಿಳೆ ಸಂಸಾರದ ಸೂತ್ರದಾರಿ ಹಾಗೂ ಅವರು ಈಗಿನ ದಿನಮಾನದಲ್ಲಿ ವಿವಿಧ ಕ್ಷೇತ್ರದಲು ಬಲಿಷ್ಠರಾಗಿದಾರೆ ಮಹಿಳೆರಿಗಾಗಿ ಕೇಂದ್ರ ಸರಕಾರ ೩೩% ಮೀಸಲಾತಿಯನ್ನು ನೀಡಿದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರಿಗೆ ನೀಡಿದ ಯೋಜನೆಗಳನ್ನು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡೆಯಬೇಕು ಹಾಗೂ ಸರಕಾರಗಳು ಮಹಿಳೆಯರಿಗಾಗಿ ಹೆಚ್ಚು ಉದ್ಯೋಗಳನ್ನು ಸೃಷ್ಠಿಸಬೇಕು ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರಿಗೆ ಅನೇಕ ರೀತಿಯಲ್ಲಿ ಅನೂಕುಲವಾಗಿದ್ದು ಹಾಗೂ ಮಹಿಳ ಸಮಾವೇಶ ಮಾಡುವ ಮೂಲಕ ಮಹಿಳೆಯರು ಜಾಗೃತರಾಗುತ್ತಾರೆ ಎಂದು ಶಾಸಕ ಮಾನಪ್ಪ ಡಿ ವಜ್ಜಲ ಹೇಳಿದರು.
ಅವರು ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಆಯೋಜಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ ಹಾಗೂ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಧರ್ಮಸ್ಥಳ ಸಂಸ್ಥೆ. ಸಹಯೋಗದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಂಘಟಿತರಾಗಿ ಕೌಶಲಾಭಿವೃದ್ದಿ ಬೆಳೆಸಿಕೊಳ್ಳುವ ಮೂಲಕ ಜ್ಞಾನವಂತರಾಗಬೇಕು. ಮಹಿಳೆಯರು ಹುಟ್ಟಿದ ಮತ್ತು ಮೆಟ್ಟಿದ ಎರಡು ಮನೆಗಳನ್ನು ಬೆಳಗುವ ನಂದಾದೀಪವಿದ್ದAತೆ. ಮಹಿಳೆಯರು ಎಲ್ಲಾ ರಂಗದಲ್ಲೂ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಸ್ತವಿಕವನ್ನು ಜಿಲ್ಲಾ ಯೋಜನಾಧಿಕಾರಿ ಮೋಹನ ನಾಯಕ ಮಾತನಾಡಿದರು ಹಾಗೂ ಉಪನ್ಯಾಸಕರು ಅರಣೋಧಯ ಪದವಿ ಪೂರ್ವ ಕಾಲೇಜು ಬಳಗಾನೂರಿನ ನಾಗರತ್ನ ಗುತ್ತೆದಾರ ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಹಾಗೂ ಮಹಿಳೆಯರ ಸಬಲಿಕರಣ ಕುರಿತ ವಿಷಯದ ಬಗ್ಗೆ ಮಾತನಾಡಿದರು ಬ್ಲಾಕ್ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ. ಶಶಿಕಲಾ ಭೋವಿವಹಿಸಿದರು
ಈ ಸಂಧರ್ಬದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಜನಜಾಗೃತಿ ವೇದಿಕೆ ಸದಸ್ಯರಾದ ಮಹಮ್ಮದ್ ರಫೀ, ಗಿರಿಮಲ್ಲನ ಗೌಡ, ಹುಲ್ಲೇಶ ಸಾಹುಕಾರ, ಹಾಗೂ ಮಹಿಳೆಯರು ಭಾಗವಹಿಸಿದ್ದರು ಧರ್ಮಸ್ಥಳ ಗ್ರಾಮಾಭಿವೃದ್ದಿ ತಾಲೂಕು ಯೋಜನಾಧಿಕಾರಿ ಅಡಿವೆಯ್ಯ ಸ್ವಾಗತ ನಿರುಪಣೆ ಮಾಡಿದರು.

WhatsApp Group Join Now
Telegram Group Join Now
Share This Article