ಪಶುಗಳು ತಿನ್ನದಜೋಳ,ಮನುಷ್ಯರಿಗೆ ವಿತರಣೆ!!? :ಜೀಡಿಗಟ್ಟಿದ,ಹುಳುಹಿಡಿದ ಜೋಳವಿತರಣೆ,ಪಡಿತರದಾರರು ಆಕ್ರೋಶ ಕ

Laxman Bariker
ಪಶುಗಳು ತಿನ್ನದಜೋಳ,ಮನುಷ್ಯರಿಗೆ ವಿತರಣೆ!!? :ಜೀಡಿಗಟ್ಟಿದ,ಹುಳುಹಿಡಿದ ಜೋಳವಿತರಣೆ,ಪಡಿತರದಾರರು ಆಕ್ರೋಶ  ಕ
WhatsApp Group Join Now
Telegram Group Join Now

ಪೂಲಬಾವಿ:ನ್ಯಾಯಬೆಲೆ ಅಂಗಡಿಯಲ್ಲಿ ಪಶುಗಳು ತಿನ್ನದಜೋಳ,ಮನುಷ್ಯರಿಗೆ ವಿತರಣೆ!!?
:ಜೀಡಿಗಟ್ಟಿದ,ಹುಳುಹಿಡಿದ ಜೋಳವಿತರಣೆ,ಪಡಿತರದಾರರು ಆಕ್ರೋಶ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಪೂಲಬಾವಿ ಗ್ರಾಮದಲ್ಲಿ ಫೆಬ್ರವರಿ ತಿಂಗಳಿನಲ್ಲಿ ವಿತರಿಸಿದ ಜೋಳವು ಜೀಡಿಗಟ್ಟಿದ್ದು,ಹುಳುಹಿಡಿದು ಧೂಳುಮಯವಾಗಿದ್ದು ಪಶುಗಳಿಗೂ ಹಾಕಿದರು ತಿನ್ನದ ಹಾಳಾದ ಆಹಾರಧಾನ್ಯವನ್ನು ಪಡಿತರ ಅಂಗಡಿಯಲ್ಲಿ ವಿತರಿಸಲಾಗುತ್ತಿದೆ ಎಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸುತ್ತಾರೆ

ಕಲ್ಯಾಣ ಕರ್ನಾಟಕ ಪತ್ರಿಕೆಯು ಕಳೆದ ಜನವರಿ ತಿಂಗಳಿನಲ್ಲಿ ವಿತರಿಸಲಾದ ಜೋಳ ಹುಳುಹಿಡಿದ ಧೂಳುಹಿಡಿದದ್ದನ್ನು ಹಂಚಿಕೆ ಮಾಡಲಾಗುತ್ತಿದೆ ಇದರಲ್ಲಿ ಟೆಂಡರದಾರರು ಹಾಗೂ ಇಲಾಖೆಯವರು ಕೈವಾಡ ಇದೆ ಎಂದು ಸುದ್ದಿಮಾಡಿದರು ಯಾವ ಅಧಿಕಾರಿಯು ಅಷ್ಟೊಂದು ಗಮನಹರಿಸದೆ ಅಂತಹಜೋಳವನ್ನೆ ವಿತರಣೆ ಮಾಡಿದರು
ಈ ಫೆಬ್ರುವರಿ ತಿಂಗಳಿನಲ್ಲಿ ಜೋಳದ ವಿತರಣೆಯನ್ನು ಬಂದ್ ಮಾಡಲಾಗಿದೆ ಆದರೆ ತಾಲೂಕಿನ ಪೂಲಬಾವಿ ಗ್ರಾಮದ ನ್ಯಾಐಬೆಲೆ ಅಂಗಡಿಯಲ್ಲಿ ಜೋಳ ವಿತರಿಸಲಾಗುತ್ತಿದೆ ಇಲ್ಲದ ಪಡಿತರ ಇಲ್ಲಿ ವಿತರಣೆಯಾಗುತ್ತಿದೆ ಅಲ್ಲದೆ ಅದು ಸಾಕಷ್ಟು ಹಾಳಾಗಿದೆ ಅಂತಹ ಜೋಳವನ್ನು ಇಲ್ಲಿ ವಿತರಣೆ ಮಾಡಲಾಗುತ್ತಿದೆ ಇಂತಹ ಹಾಳಾದ ಜೋಳವನ್ನು ತಿನ್ನುವುದಾದರು ಹೇಗೆಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಕ್ರಮ ಯಾವಾಗ?ಇಂತಹ ಜೀಡಿಗಟ್ಟಿದ ಹುಳುಹಿಡಿದ ಆಹಾರಧಾನ್ಯ ವಿತರಣೆ ಮಾಡಿದ ಆಹಾರ ವಿತರಣೆ ಅಧಿಕಾರಿಗಳು ಹಾಗೂ ವಿತರಕರ ಮೇಲೆ ಕ್ರಮಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ
ಹೇಳಿಕೆ:ಈ ತಿಂಗಳ ಪಡಿತರದಲ್ಲಿ ಕೇವಲ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದೆ ಕೆಲವೆಡೆ ವಿತರಣೆಯಾಗದೆ ಉಳಿದ ಜೋಳವಿದ್ದು ಅಂತಲ್ಲಿ ಮಾತ್ರ ಜೋಳವಿತರಣೆ ಮಾಡಿರಬಹುದು ಹುಳುಹಿಡಿದಜೋಳ ವಿತರಣೆ ಸರಿಯಲ್ಲ ವಿತರಣೆಯಾಗಿದ್ದರೆ ಬದಲಾವಣೆ ಮಾಡಿಕೊಡಲಾಗುತ್ತದೆ-ಅಬ್ದಲ್ ತಾಲೂಕಾ ಆಹಾರ ನಿರೀಕ್ಷಕರು ಲಿಂಗಸಗೂರು

WhatsApp Group Join Now
Telegram Group Join Now
Share This Article