ತಹಸೀಲ್ ಆಫೀಸ್ ಹಣಗೋಲಮಾಲ್
ತಹಸೀಲ್ದಾರರ ಕೈವಾಡ ಇಲ್ಲದೆ ಕೋಟ್ಯಂತರ ಹಣ ವರ್ಗಾವಣೆ ಅಸಾಧ್ಯ-ಎಂ ಎಲ್ ಸಿ ಶರಣಗೌಡ ಪಾಟೀಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಧಾರ್ಮಿಕ ದತ್ತಿ ಹಾಗೂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬಂದಿರುವ ಅನುದಾನ ೧ಕೋಟಿ೮೭ ಲಕ್ಷ ವರ್ಗಾವಣೆಯಲ್ಲಿ ತಹಸೀಲ್ದಾರರ ಕೈವಾಡ ಇಲ್ಲದೆ ಅಸಾಧ್ಯವಾಗಿದೆ ಎಂದು ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ತಹಸೀಲ್ ಕಛೇರಿಯಲ್ಲಿ ಧಾರ್ಮಿಕ ದತ್ತಿ ಹಾಗೂ ಪ್ರಕೃತಿ ವಿಕೋಪ ಪರಿಹಾರ ಖಾತೆಗೆ ಬಂದಿರುವ ಹಣದಲ್ಲಿ ಸುಮಾರು ೧ಕೋಟಿ೮೭ಲಕ್ಷ ಹಣ ವರ್ಗಾವಣೆಯಾಗಿರುವ ಬಗೆಗೆ ಮಾಹಿತಿ ಬಂದಿದ್ದು ಅಷ್ಟೊಂದು ದೊಡ್ಡಮಟ್ಟದ ಹಣದ ವರ್ಗಾವಣೆಯನ್ನು ಕೇವಲ ಇಲಾಖೆಯ ಸಿಬ್ಬಂದಿ ಒಬ್ಬರಿಂದಲೇ ಇದು ಅಸಾಧ್ಯವಾದ ಮಾತು ಇದರ ಹಿಂದೆ ಕಾಣದ ಕೈಗಳು ಇರುವ ಸಾಧ್ಯತೆಗಳಿವೆ ಇದರಲ್ಲಿ ತಹಸೀಲ್ದಾರರ ಕೈವಾಡದಿಂದಲೇ ವರ್ಗಾವಣೆಯಾಗಿರಬಹುದು ಸುದ್ದಿ ತಿಳಿಯುತ್ತಲೆ ಈಗಾಗಲೆ ನಾನು ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದೇನೆ ಕೂಲಂಕುಶವಾದ ವಿಚಾರಣೆಯನ್ನು ನಡೆಸಬೇಕು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಅಲ್ಲದೆ ಹಣ ಡ್ರಾ ಆಗಿದ್ದರೆ ಅದನ್ನು ಮರಳಿಪಡೆಯಬೇಕು ಎನ್ನುವುದನ್ನು ಹೇಳಿದ್ದು ಇಲಾಖೆಯ ರಾಜ್ಯ ಕಾರ್ಯದರ್ಶಿಯವರಿಗೂ ಪತ್ರ ಬರೆಯಲಾಗಿದೆ ವಿಚಾರಣೆ ನಡೆದಾಗ ಮಾತ್ರ ಹಗರಣದ ಹಿಂದಿರುವ ಕಾಣದ ಕೈಗಳು ಹೊರಬರಲಿವೆ ಎಂದರು