ಶಾವಂತಗೇರಾ ಗ್ರಾಮ ಪಂಚಾಯತಿಯಲ್ಲಿ ಲೊಕಾಯುಕ್ತ ಇಲಾಖೆಯಿಂದ ನರೇಗಾ ದಾಖಲಾತಿ ಪರಿಶೀಲನೆ
ಕಲ್ಯಾಣ ಕರ್ನಾಟಕ ವಾರ್ತೆ
ದೇವದುರ್ಗ,ಪೆ.20-
23-24 ರಲ್ಲಿ ಶಾವಂತಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಹಗರಣ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಲೋಕಾಯುಕ್ತ ಇಲಾಖೆಯಿಂದ ನರೇಗಾ ಕಾಮಗಾರಿಗಳ ದಾಖಲಾತಿ ಪರಿಶೀಲನೆ ನಡೆಸಿದರು.
ಮಾಜಿ ಪಿಡಿಓ ಮತ್ತು ಹಾಲಿ ಪಿಡಿಓ ಇಬ್ಬರನ್ನೂ ಲೊಕಾಯುಕ್ತ ಅಧಿಕಾರಿ ಎಸ್.ಬಿ.ಲೋಕೇಶ್ ಸರಕಾರಿ ವಾಹನದಲ್ಲಿ ಕೂಡಿಸಿಕೊಂಡ ಹೊರಟು ಹೋದ ದೃಶ್ಯ ಕಂಡ ಬಂತು.