ತಹಸೀಲ್ ಕಚೇರಿ ಯಲಿ 1.88ಕೋಟಿ ಹಣವರ್ಗಾವಣೆ ಭಾರಿಗೋಲ್ ಮಾಲ್ ಮಗ,ಮಗಳು,ಪತ್ನಿ ಖಾತೆಗೆ ವರ್ಗಾವಣೆ

Laxman Bariker
ತಹಸೀಲ್ ಕಚೇರಿ ಯಲಿ 1.88ಕೋಟಿ ಹಣವರ್ಗಾವಣೆ ಭಾರಿಗೋಲ್ ಮಾಲ್  ಮಗ,ಮಗಳು,ಪತ್ನಿ ಖಾತೆಗೆ ವರ್ಗಾವಣೆ
WhatsApp Group Join Now
Telegram Group Join Now

ತಹಸೀಲ್ ಕಚೇರಿ ಯಲಿ 1.88ಕೋಟಿ ಹಣವರ್ಗಾವಣೆ ಭಾರಿಗೋಲ್ ಮಾಲ್

ಮಗ,ಮಗಳು,ಪತ್ನಿ ಖಾತೆಗೆ ವರ್ಗಾವಣೆ

ತಹಸೀಲ್ ಕಚೇರಿ ಎಸ್ ಡಿ ಎ ,ಬ್ಯಾಂಕ್ ಮ್ಯಾನೇಜರ್ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಕಲ್ಯಾಣ ಕರ್ನಾಟಕ ಪತ್ರಿಕೆ ಯಲ್ಲಿ ನಿನ್ನೆ ಹಣದ ಗೋಲ್ ಮಾಲ್ ಬಗ್ಗೆ ಸುದ್ದಿ ಪ್ರಕಟವಾದ ಬೆನ್ನಲ್ಲಿಯೆ ಲಿಂಗಸಗೂರು ಠಾಣೆಯಲಿ ಪ್ರಕರಣ ದಾಖಲಾಗಿದ್ದು ತಹಸೀಲ್ ಕಚೇರಿಗೆ ಸೇರಿದ ಬರೊಬ್ಬರಿ 1,88,86,561 ರೂಗಳ ಅನುದಾನವನ್ನು ಅದೆ ಕಚೇರಿಯ ಎಸ್ ಡಿ ಎ ತನ್ನ ಮಗ, ಮಗಳು, ಪತ್ನಿ ಖಾತೆಗೆ ವರ್ಗಾಯಿಸಿ ಸರಕಾರಕ್ಕೆ ವಂಚಿಸಿದ ಆರೋಪಕ್ಕೆ ಸಂಬಂದಿಸಿದಂತೆ ಎಸ್ ಡಿ ಎ ಹಾಗೂ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ದ ತಹಸೀಲ್ದಾರ ಎನ್ ಶಂಶಾಲಂ ನೀಡಿದ ದೂರು ಆಧರಿಸಿ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ತಹಸೀಲ್ ಕಚೇರಿ ಯ ಎಸ್ ಡಿ ಎ ಯಲ್ಲಪ್ಪ ಪ್ರಕರಣದ ಸೂತ್ರದಾರನಾಗಿದ್ದು ಕೆನರಾ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ನೆರವಿನೊಂದಿಗೆ ಖೊಟ್ಟಿ ದಾಖಲೆ ಗಳನ್ನು ಸೃಷ್ಠಿಸಿ ಈ ಕೃತ್ಯ ಎಸಗಿದ್ದಾರೆಂದು ತಿಳಿಸಲಾಗಿದೆ
ಪ್ರಕರಣದ ವಿವರ:ಎಸ್ ಡಿಎ ಯಲ್ಲಪ್ಪ ತಾಲ್ಲೂಕಿನ ಮುಜರಾಯಿ ದೇವಸ್ಥಾನ ಗಳಿಗೆ ಬಳಸಬೇಕಿದ್ದ 38 86 397 ರೂ ಗಳನ್ನು ಜನವರಿ 6-2025ರಂದು ತನ್ನ ಮಗನ ಕೆನರಾ ಬ್ಯಾಂಕ್ ಖಾತೆಗೆ 2175994 ರೂ ಹಾಗೂ ಮಗಳ ಖಾತೆಗೆ 1119238 ರೂ ತನ್ನ ಪತ್ನಿ ಖಾತಗೆ ವರ್ಗಾಯಿಸಿದ್ದಾನೆ
ಹಾಗೂ ದೇವಸ್ಥಾನ ಗಳ ಬಾಬತ್ತಿನಲಿ 3662597 ರೂ ನಲ್ಲಿ ಮಗನ ಖಾತೆಗೆ 4230296 ರೂ ಮತ್ತೊಂದು ಖಾತೆಗೆ 1012104 ರೂ ಪತ್ನಿ ಖಾತೆಗೆ 718397 ರೂಗಳನ್ನು ವರ್ಗಾಯಿಸಿದ್ದಾನೆ
ಪರಿಸರ ವಿಕೋಪ ಪರಿಹಾರ ಖಾತೆಯ 1981538 ರೂಗಳನ್ನು ಪತ್ನಿ ಖಾತೆಗೆ ಬಾಕಿ 1145361 ರೂಗಳನ್ನು ತಹಸೀಲ್ ಕಚೇರಿಯ ಜಮಾವಣೆ ಖಾತೆಗೆ ವರ್ಗಾಯಿಸಿದ್ದಾನೆ
ಈ ಎಲ್ಲ ಖಾತೆಗಳ ವ್ಯವಹಾರ ಮುಕ್ತಾಯ ಗೊಳಿಸುವಂತೆ ಬ್ಯಾಂಕಿಗೆ ಮನವಿ ಮಾಡಿಕೊಂಡಿದ್ದಾನೆ ಇದಕ್ಕೆ ಬ್ಯಾಂಕ್ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ದೂರಿನಲಿ ವಿವರಿಸಲಾಗಿದೆ
ಭಾರಿ ಅಕ್ರಮ ಬಯಲಾಗಿದ್ದು ಹಣ ವರ್ಗಾವಣೆ ದಂಧೆ ಯಾವಾಗಿನಿಂದ ನಡೆಯುತಿತ್ತು ಇದರ ಹಿಂದೆ ಯಾವುದಾದರು ಕಾಣದ ಕೈಗಳು ಇವೆಯಾ ಎನ್ನುವುದು ಪ್ರಕರಣದ ತನಿಖೆ ನಡೆದರೆ ಹೊರಬೀಳಬಹುದು

WhatsApp Group Join Now
Telegram Group Join Now
Share This Article