ಲಿಂಗಸಗೂರು ಉ.ಖಾ ಯೋಜನೆ ೨ ಕೋಟಿಗೂ ಅಧಿಕ ಹಣ ದುರ್ಬಳಕೆ
ಸಹಾಯಕ ಕೃಷಿ ನಿರ್ದೆಶಕಿ ನಾಗರತ್ನ ಹಾಗೂ ಕೃಷಿ ಅಧಿಕಾರಿ ಸಿದ್ದಪ್ಪ ಅಮಾನತ್ತು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು ಫೇ೧೯:
ತಾಲೂಕಿನ ಆನಾಹೊಸುರ ಗ್ರಾ.ಪಂ, ಸೇರಿ ಇತರೆ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು ೨ ಕೋಟಿ ಹಣ ದುರುಪಯೋಗದ ದೂರು ಆಧರಿಸಿ ಲಿಂಗಸಗೂರು ಸಹಾಯಕ ಕೃಷಿ ನಿರ್ದೆಶಕಿ ನಾಗರತ್ನ ಎಚ್ ಹುಲಕೋಟಿ ಮತ್ತು ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಅವರನ್ನು ಕೃಷಿ ಇಲಾಖೆ ಅಧಿನ ಕಾರ್ಯದರ್ಶಿ ಇಂದ್ರ ಎಂ ಅವರು ಅಮಾನತ್ತು ಮಾಡಿದ್ದಾರೆ.
ಆನಾಹೋಸುರು ಗ್ರಾ.ಪಂ, ಸೇರಿ ವಿವಿಧ ಗ್ರಾ.ಪಂಗಳಲ್ಲಿ ೨೦೨೪-೨೫ನೇ ಸಾಲಿನ ಉಧ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಂಡ ೨ ಕೋಟಿ ೭೫ಲಕ್ಷ ೭೩ಸಾವಿರ ೭೦೭ರೂ,ಗಳ ಅವ್ಯವಹಾರದ ದೂರು ಆಧರಿಸಿ ಪ್ರಾಥಮಿಕ ತನಿಖೆ ಕಡತ ಪರಿಶೀಲನೆಗೆ ತನಿಖಾ ತಂಡ ರಚಿಸಲಾಗಿತ್ತು. ಆನಾಹೋಸುರ ಗ್ರಾ.ಪಂ, ಉ.ಖಾ ಯೋಜನೆಯಡಿ ಎಂಐಎಸ್ ವರದಿಯನ್ವಯ ೧೭೩ ಕಾಮಗಾರಿಗಳು ಚಾಲ್ತಿಯಲ್ಲಿದ್ದು ೧೫೦ ಕಾಮಗಾರಿ ಪರಿಶೀಲನೆಗೆ ಒದಗಿಸಲಾಗಿದೆ. ಜಿ.ಪಂ,ನಿಂದ ಅನುಮೊದನೆ ಪಡೆಯದೇ ೧೭೦ ಕಾಮಗಾರಿಗಳ ನೊಂದಣಿ ಮಾಡಿ ೬೭.೧೧ ಲಕ್ಷದ ಪಾವತಿಗೆ ಕ್ರವಹಿಸಿದ್ದು ಕಾಮಗಾರಿಗಳ ಬೌತಿಕ ಸ್ಥಳ ಪರಿಶೀಲನೆಯಲ್ಲಿ ಅನುಷ್ಟಾನ ವಾಗದಿರುವುದು. ಕಡತ ದಾಖಲೆ ಕ್ರಮಬದ್ದವಾಗಿರುವುದಿಲ್ಲ. ಕಡತಗಳನ್ನು ಪರಿಶೀಲನೆ ಹಾಜರು ಪಡಿಸದಿರುವ ಕುರಿತು ತನಿಖಾ ತಂಡ ವರದಿ ನೀಡಿತ್ತು.
ಹಾಗೂ ವಿವಿಧ ಕಾಮಗಾರಿಗಳ ೪೧೭ ಕಂದಕ ಬದು ಮತ್ತು ಕೋಡಿ ನಿರ್ಮಾಣ ಕಾಮಗಾರಿಗಳಲ್ಲಿ ಗ್ರಾ.ಪಂ,ನಲ್ಲಿ ಅನುಷ್ಠಾನ ವಾಗದೆ ೧ಕೋಟಿ, ೫೮ ಲಕ್ಷ ೮೪ ಸಾವಿರದ ೪೮೫ರೂಗಳ ಮೊತ್ತದ ಮಾನವ ದಿನಗಳನ್ನು ಪಾವತಿಸಿ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಹಣ ದುರುಪಯೋಗದ ಆರೋಪ ಸ್ಪಷ್ಟವಾಗಿ ಕಂಡು ಬಂದಿರುವುದರಿAದ ಲಿಂಗಸಗೂರು ಸಹಾಯಕ ಕೃಷಿ ನಿರ್ದೆಶಕಿ ನಾಗರತ್ನ ಎಚ್ ಹುಲಕೋಟಿ ಮತ್ತು ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಇವರ ವಿರುದ್ದ ಕರ್ನಾಟಕ ನಾಗರಿಕ ಸೇವಾ ನಿಯಮ ೧೯೫೭ರ ನಿಯಮ ೧೧ ಅನ್ವಯ ಶಿಸ್ತು ಕ್ರಮ ಜರುಗಿಸಲು ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಿ ಫೇ ೧೧ರಂದೇ ಆದೇಶ ಹೊರಡಿಸಿದ್ದಾರೆ.