ಲಿಂಗಸಗೂರು:ತಹಸೀಲ್ದಾರ ಖಾತೆಯಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಯ್ತಾ..? ಗುಸುಗುಸು ಸುದ್ದಿ

Laxman Bariker
ಲಿಂಗಸಗೂರು:ತಹಸೀಲ್ದಾರ ಖಾತೆಯಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಯ್ತಾ..? ಗುಸುಗುಸು ಸುದ್ದಿ
WhatsApp Group Join Now
Telegram Group Join Now

ಲಿಂಗಸಗೂರು:ತಹಸೀಲ್ದಾರ ಖಾತೆಯಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಯ್ತಾ..? ಗುಸುಗುಸು ಸುದ್ದಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಾ ತಹಸೀಲ್ದಾರರ ಖಾತೆಯಲ್ಲಿರುವ ಕೋಟ್ಯಂತರ ದುಡ್ಡು ದುರ್ಬಳಕೆಯಾಗಿದೆಯಾ ಎನ್ನುವ ಗುಸುಗುಸು ಸುದ್ದಿ ಹರಡಿದ್ದು ಕಂದಾಯ ಇಲಾಖೆ ಇದುವರೆಗೂ ಯಾವುದೆ ಗುಟ್ಟುಮಾತ್ರ ಬಿಟ್ಟುಕೊಟ್ಟಿಲ್ಲ ಆದರೆ ಇಲಾಖೆ ಅಧಿಕಾರಿಗಳು ಖಾತೆ ಇರುವ ಬ್ಯಾಂಕಿಗೆ ಭೇಟಿ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ಇಂತಹದೊAದು ಹಣ ದುರ್ಬಳಕೆಯ ಸುದ್ದಿ ಹರಡಿದ್ದು ಅದು ಯಾವಹಣ ಮತ್ತು ಎಷ್ಟು ದುರ್ಬಳಕೆಯಾಗಿದೆ ಎನ್ನುವ ಬಗೆಗೆ ಯಾವುದೆ ಸ್ಪಷ್ಟವಾದ ಮಾಹಿತಿಗಳು ಇದುವರೆಗೂ ನಿಗೂಢವಾಗಿವೇ
ಒಂದು ಮೂಲಗಳ ಪ್ರಕಾರ ಸುಮಾರು ೧ಕೋಟಿ ೭೪ ಲಕ್ಷ ಹಣದ ವ್ಯತ್ಯಾಸವಾಗಿದೆ ಎಂದು ಹೇಳಲಾಗುತ್ತಿದೆ ಅದು ನಿಜವೇ ಆಗಿದ್ದರೆ ಅದನ್ನು ಯಾರು ದುರ್ಬಳಕೆ ಮಾಡಿದ್ದಾರೆ ಎನ್ನುವುದು ತನಿಖೆ ನಡೆದಾಗಲೆ ಸತ್ಯಾಸತ್ಯತೆ ಹೊರಬರಲಿದೆ
ಕಂದಾಯ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಯಾವ ಖಾತೆ ಎಷ್ಟುಹಣ ಎನ್ನುವುದರ ಬಗೆಗೆ ತನಿಖೆ ನಡೆಯುತ್ತಿದೆ ತನಿಖೆಪೂರ್ಣಗೊಂಡಾಗ ಮಾತ್ರ ಸ್ಪಷ್ಟ ಚಿತ್ರಣ ದೊರೆಯಲಿದೆ ಎನ್ನುತ್ತಾರೆ
ಕಂದಾಯ ಇಲಾಖೆಯಲ್ಲಿ ಹಣ ದುರ್ಬಳಕೆಯ ಬಗೆಗೆ ದಟ್ಟವಾದ ಸುದ್ದಿ ಹಬ್ಬಿದ್ದು ಅದು ಬೆಳೆಪರಿಹಾರದ ಹಣವೋ ಅಥವ ಧಾರ್ಮಿಕ ದತ್ತಿ ಇಲಾಖೆ ಹಣವೋ ಯಾವಹಣ ದುರ್ಬಳಕೆ ನಿಜವೇ ಎನ್ನುವುದು ತನಿಖೆಯಿಂದ ಮಾತ್ರ ಹೊರಬರಲುಸಾಧ್ಯ!!?

WhatsApp Group Join Now
Telegram Group Join Now
Share This Article