ಅಂಗನವಾಡಿ ಶಿಕ್ಷಕಿಗೆ ತಲೆಸುತ್ತು,ವಾಹನ ನೀಡಿ ಮಾನವೀಯತೆ ಮೆರೆದ ಎಸಿ ಕಲಶಟ್ಟಿ
ಆ್ಯಂಬುಲೆನ್ಸ್ ವಿಳಂಬ ಆಕ್ರೋಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲೂಕಿನ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನವಿಕೊಡಲು ಬಂದ ಸಂದರ್ಭದಲ್ಲಿ ಶಿಕ್ಷಕಿಯೋರ್ವರು ತಲೆಸುತ್ತು ಬಂದು ನೆಲಕ್ಕೆ ಉರುಳಿದಾಗ ಅಲ್ಲೆ ಇದ್ದ ಸಹಾಯಕ ಆಯುಕ್ತರು ತಕ್ಷಣವೇ ಸ್ಪಂದಿಸಿ ತಮ್ಮ ವಾಹನದಲಿಯೆ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಘಟನೆ ಜರುಗಿದೆ

ಇಂದು ಬೆಳಗ್ಗೆ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ತಮ್ಮ ಹಲವಾರು ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲು ಬಂದಿದ್ದರು ಆ ಸಂದರ್ಭದಲ್ಲಿ ಗಂಗಮ್ಮ ಕರಡಕಲ್ ಎನ್ನುವ ಶಿಕ್ಷಕಿಗೆ ತಲೆಸುತ್ತು ಬಂದು ಬಿದ್ದಳು ಅಲ್ಲೆ ಇದ್ದ ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶಟ್ಟಿಯವರು ಮಹಿಳೆಯ ಹತ್ತಿರ ಬಂದು ಆರೋಗ್ಯ ಏರುಪೇರು ಕಂಡು ಅವರೆ ತಕ್ಷಣ ಆ್ಯಂಬುಲೆನ್ಸ್ ವಾಹನಕ್ಕೆ ಕರೆಮಾಡಿದರು ಆ್ಯಂಬುಲೆನ್ಸ್ ವಾಹನ ಬರಲಿಲ್ಲ ಕೂಡಲೆ ಸಹಾಯಕ ಆಯುಕ್ತರು ತಮ್ಮ ವಾಹನದಲ್ಲಿಯೆ ಆರೋಗ್ಯದಲಿಅಸ್ವಸ್ಥಳಾದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸೂಚಿಸಿದರು
ಸದರಿ ಮಹಿಳೆಯೊಂದಿಗೆ ತಾಲೂಕಾ ಅಧ್ಯಕ್ಷೆ ಸರಸ್ವತಿ ಈಚನಾಳ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸುತಿದ್ದಾರೆ
ಆ್ಯಂಬುಲೆನ್ಸ್ ಪದೆಪದೆ ವಿಳಂಬ:ಈ ಹಿಂದೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿ ಗಾಯಾಳು ಗಂಟೆಗಟ್ಟಲೆ ರಸ್ತೆಯಲ್ಲಿ ಬಿದ್ದು ನರಳಾಡಿದರು ಬೇಗ ಆ್ಯಂಬುಲೆನ್ಸ್ ಬರಲಿಲ್ಲ ಇಂದು ಕೂಡ ಸ್ವತಃ ಸಹಾಯಕ ಆಯುಕ್ತರೆ ಕರೆ ಮಾಡಿದರು ಆ್ಯಂಬುಲೆನ್ಸ್ ಬೇಗ ಬರಲಿಲ್ಲ ಪದೆಪದೆ ವಿಳಂಬವಾಗುತ್ತಿರುವುದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸುತಿದ್ದಾರೆ
ಕೆಲಸದ ಒತ್ತಡಕ್ಕೆ ಹೀಗಾಗುತ್ತಿದೆ ಆರೋಪ: ಅಂಗನವಾಡಿ ನೌಕರರಿಗೆ ದಿನಬೆಳಗಾದರೆ ಸಾಕಷ್ಟು ಕೆಲಸದ ಒತ್ತಡ ಹಾಕುತ್ತಾರೆ ಯಾವುದೊ ಮಾಹಿತಿ ತಕ್ಷಣವೇ ಕೊಡಿ ಎಂಬ ಒತ್ತಡಗಳು ಬೇಗ ವೇತನ ನೀಡದಿರುವುದು ಮನೆಯ ಒತ್ತಡ ಇಂತಹ ಒತ್ತಡದಲಿ ಹೀಗೆ ತಲೆಸುತ್ತು ಬರುತ್ತಿವೆ ಹೃದಯಾಘಾತವಾದರು ಆಶ್ಚರ್ಯ ವಿಲ್ಲ ಎಂದು ಹಲವಾರು ಅಂಗವಾಡಿ ಶಿಕ್ಷಕಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು