ಕೆ, ಬಸ್ಸಾಪುರ:1ಕೋಟಿ ವೆಚ್ಚದ ಸಿಸಿರಸ್ತೆ ಕಾಮಗಾರಿ, ಕಳಪೆ ಆರೋಪ,ಕ್ಯಾರೇ ಎನ್ನದ ಅಧಿಕಾರಿಗಳು!!?

Laxman Bariker
ಕೆ, ಬಸ್ಸಾಪುರ:1ಕೋಟಿ ವೆಚ್ಚದ ಸಿಸಿರಸ್ತೆ ಕಾಮಗಾರಿ, ಕಳಪೆ ಆರೋಪ,ಕ್ಯಾರೇ ಎನ್ನದ ಅಧಿಕಾರಿಗಳು!!?
Oplus_131072
WhatsApp Group Join Now
Telegram Group Join Now

ಬಸ್ಸಾಪುರ:1ಕೋಟಿ ವೆಚ್ಚದ ಸಿಸಿರಸ್ತೆ ಕಾಮಗಾರಿ, ಕಳಪೆ ಆರೋಪ,ಕ್ಯಾರೇ ಎನ್ನದ ಅಧಿಕಾರಿಗಳು!!?

ಕಲ್ಯಾಣ  ಕರ್ನಾಟಕ ವಾರ್ತೆ

ಲಿಂಗಸಗೂರು:ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆ ಬಸ್ಸಾಪುರದಲ್ಲಿ ಕೆಕೆರ‍್ಡಿಬಿ ಯೋಜನೆಯಲ್ಲಿ ೧ಕೋಟಿ ಹಣದಲ್ಲಿ ಮಾಡುತ್ತಿರುವ ಕಾಮಗಾರಿಯು ಕಳಪೆಯಾಗಿದ್ದು ಇದರ ಬಿಲ್ ತಡೆಯುವಂತೆ ಗ್ರಾಮಸ್ಥರು ಮನವಿ ಮಾಡಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ವೀರಭದ್ರಪ್ಪ ಹಾಗೂ ಗ್ರಾಮಸ್ಥರು ಆರೋಪಿಸುತ್ತಾರೆ
ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆ ಬಸ್ಸಾಪುರದಲ್ಲಿ ೧ಕೋಟಿ ರಊ ವೆಚ್ಚದ ಪೈವೆಂಡಿಂಗ್ ಸಿಸಿ ರೋಡ್ ಕಾಮಗಾರಿಯನ್ನು ಗ್ರಾಮದ ಕರಿಯಮ್ಮ ಮನೆಯಿಂದ- ಹನಮಂತ ಗುಡಿಸಲಿ ಮನೆಯವರೆಗೆ, ದುರುಗಪ್ಪನ ಮನೆಯಿಂದ ಶೇಖರಯ್ಯಸ್ವಾಮಿ ಮನೆಯವರೆಗೆ ಹಾಗೂ ಹನುಂತ್ರಾಯ ಶಿವನಗುತ್ತಿ ಮನೆಯಿಂದ ಗಣೇಶನ ಮನೆಯವರೆಗೆ ಕಾಮಗಾರಿಗಳನ್ನು ಮಾಡಿದ್ದು ಸದರಿ ಕಾಮಗಾರಿಗಳನ್ನು ಕಳಪೆಯಾಗಿ ಮಾಡಲಾಗುತ್ತಿದೆ ಅರ್ಥವರ್ಕ ಸರಿಯಾಗಿ ಮಾಡದೆ ನೆಲದ ಮೇಲೆಯೆ ಸಿಸಿಹಾಕುವುದು ಮರಮ್ ಬಳಕೆ ಸರಿಯಾಗಿ ಹಾಕದೆ ನಿರ್ಮಾಣ, ನಿಯಮಬದ್ದ ಕಂಕರ ಬಳಕೆ ಮಾಡದೆ ಇರುವುದು ಸಿಸಿರಸ್ತೆಗೆ ಕಪ್ಪುಮಣ್ಣು ಬಳಕೆ ಮಾಡುವುದು ಕಾಂಕ್ರಿಟ್ ಸರಿಯಾಗಿ ಹಾಕದಿರುವುದು ಸೇರಿದಂತೆ ಕಾಮಗಾರಿಯನ್ನು ಮನಸಿಗೆ ಬಂದAತೆ ಮಾಡಿರುವುದರಿಂದ ತೀರಾಕಳಪೆಯಾಗಿದೆ ಈ ಕುರಿತು ಈಗಾಗಲೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರು ಇದುವರೆಗೂ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ಮೇಲೆ ಅಥವಾ ಕಾಮಗಾರಿಯ ಉಸ್ತುವಾರಿ ವಹಿಸುತ್ತಿರುವ ಇಂಜನಿಐರ ಕಾಶಿನಾಥನ ಮೇಲೆ ಯಾವುದೆ ಕ್ರಮ ಜರುಗಿಲ್ಲ ಅಲ್ಲದೆ ಬಿಲ್ ತಡೆಯುಬೇಕಾಗಿತ್ತು ಆದರೆ ಒಳಗೊಳಗೆ ಬಲ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾಮಗಾರಿಯ ಬಿಲ್ ತಡೆಹಿಡಿಯಬೇಕು ಗುಣಮಟ್ಟದ ಕಾಮಗಾರಿಯನ್ನು ಮಾಡಿಸಬೇಕೆನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ
ಗ್ರಾಮಸ್ಥರಾದಹೊನ್ನಪ್ಪ, ವೀರಭದ್ರಪ್ಪ,ಮಹಾದೇವಪ್ಪ, ದುರಗಪ್ಪ, ಮಂಜುನಾಥ, ದುರಗಪ್ಪ ಬಸವರಾಜ,ಶಶಿಧರ, ನಾಗಪ್ಪ,ಬಸಪ್ಪ,ಪಂಪಾಪತಿ ರಾಮಣ್ಣ ಸೇರಿದಂತೆ ಹಲವಾರು ಜನ ಆರೋಪಿಸಿದ್ದಾರೆ
ಮೆಸೇಜ್ ಹಾಕಿದರೆ ಕರೆಸ್ವೀಕರಿಸುವ ಜೆಇ:ಸದರಿ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮವಹಿಸಿದ್ದು ಇದರ ಉಸ್ತುವಾರಿಯನ್ನು ಕಾಶಿನಾಥ ಎನ್ನುವವರುವಹಿಸಿದ್ದು ಯಾರ ಮೊಬೈಲ್ ಕರೆಗಳನ್ನು ಸ್ವೀಕರಿಸುವುದಿಲ್ಲವಂತೆ ಈತನೊಡನೆ ಮಾತನಾಡಬೇಕೆಂದರೆ ಮೊದಲು ಮೆಸೇಜ್ ಹಾಕಬೇಕಂತೆ ಹೇಗಿದೆ ಜೆಇಯ ಕರಾಮತ್ತು ಇವರು ಉಸ್ತುವಾರಿ ಮಾಡುತ್ತಿರುವ ಇತರೆ ಕಾಮಗಾರಿಗಳ ಬಗೆಗೂ ಆರೋಪಗಳು ಕೇಳಿಬರುತ್ತಿದ್ದು ಇವರ ಮೇಲಾಧಿಕಾರಿಗಳು ಸೂಕ್ತಕ್ರಮ ಜರುಗಿಸಬಹುದೇ ಕಾದುನೋಡೋಣ? ವಾಸ್ತವವೆಂಬಂತೆ ಪತ್ರಿಕೆಯ ಕರೆಯನ್ನು ಸ್ವೀಕರಿಸಲಿಲ್ಲ

WhatsApp Group Join Now
Telegram Group Join Now
Share This Article