ಅಮರೇಶ್ವರ ಜಾತ್ರಾ ಮಹೋತ್ಸವ : ಪೂರ್ವಭಾವಿ ಸಭೆ
ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಸಿ ಸೂಚನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು ; ತಾಲೂಕಿನ ಐತಿಹಾಸಿಕ ಪ್ರಸಿದ್ಧ ಗುರುಗುಂಟಾ ಅಮರೇಶ್ವರ ಜಾತ್ರೆ ಮಾರ್ಚ್ ನಲ್ಲಿ ಹೋಳಿ ಹುಣ್ಣಿಮೆಯಂದು ನಡೆಯಲಿದ್ದು, ಇದರ ನಿಮಿತ್ತ ನಾನಾ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆ ಗುರುವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ಮಾರ್ಚ್ 4ರಿಂದ ಆರಂಭವಾಗುವ ಜಾತ್ರಾ ಮಹೋತ್ಸವ 15 ದಿನಕಾಲ ನಡೆಯುತ್ತದೆ, ಜಾತ್ರೆಯ ಯಶಸ್ವಿಗೆ ಸಾರಿಗೆ ಸಂಚಾರ,
ವಿಶೇಷವಾಗಿ ರಾಸುಗಳ ಪರಿಷೆ ನಡೆಯಲಿದ್ದು, ಕುಡಿವ ನೀರು, ವಿದ್ಯುತ್, ವಸತಿ ಸೇರಿ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು. ಕೃಷಿ, ತೋಟಗಾರಿಕೆ, ಪಶು, ಆರೋಗ್ಯ, ಅರಣ್ಯ ಸೇರಿ ನಾನಾ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಶಂಶಾಲಂ, ಮಸ್ಕಿ ತಹಶಿಲ್ದಾರ ಮಲ್ಲಪ್ಪ, ಪುರಸಭೆ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ, ಡಾ: ರಾಚಪ್ಪ, ಡಾ: ಅಮರೇಶ ಪಾಟೀಲ್, ಅಬಕಾರಿ ಇನ್ಸ್ಪೆಕ್ಟರ್ ಮಹಮ್ಮದ್ ಹುಸೇನ್, ಕೆಇಬಿ ಎಇಇ ಬೆನ್ನೆಪ್ಪ ಕರಿಬಂಟನಾಳ, ಬಸ್ ಡಿಪೋ ವ್ಯವಸ್ಥಾಪಕ ರಾಹುಲ್, ಅಗ್ನಿಶಾಮಕ ಅಧಿಕಾರಿ ಹೊನ್ನಪ್ಪ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.