ಸರಕಾರಿ ಪದವಿ ಕಾಲೇಜ ಪ್ರವೇಶಕ್ಕೆ ಅಭಿಯಾನ ಕಾರ್ಯಕ್ರಮ, ಶ್ಲಾಘನೀಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜುವತಿಯಿಂದ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಆಯಾ ಪಿಯು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾಲೇಜಿನಲಿ ದೊರೆಯುವ ಅವಕಾಶಗಳ ಬಗೆಗೆ ಮಾಹಿತಿಯನ್ನು ಪ್ರಥಮದರ್ಜೆ ಕಾಲೇಜಿನ ತಂಡ ನೀಡಿತು
ಹಲವಾರು ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿನತ್ತ ಸೆಳೆಯಲು ಏನೆಲ್ಲ ಕಸರತ್ತು ಮಾಡುತ್ತವೆ ಅಂತಹಹೊಸ ಪ್ರಯೋಗಕ್ಕೆ ಪಟ್ಟಣದ ಸರಕಾರಿ ಮುಂದಾಗಿರುವುದು ಶ್ಲಾಘನೀಯವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜುವತಿಯಿಂದ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಅಭಿಯಾನವನ್ನು ಹಮ್ಮಿಕೊಂಡು ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ನಾಗರಾಳ, ಹಾಗೂ ಖೈರವಾಡಗಿ ದ್ವಿತಿಯ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಬಗೆಗೆ ಮಾಹಿತಿ ನೀಡಲಾಯಿತು
ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ಬೋಧನಾ ವಿಧಾನಗಳು, ಸೌಲಭ್ಯಗಳು, ಆಧುನಿಕ ತಂತ್ರಜ್ಞಾನ ಸೇವೆಗಳ ಬಗೆಗೆ ಪ್ರಾಚಾರ್ಯ ಡಾ ಹನಮಂತಪ್ಪ ವಿವರಿಸಿದರು ಕಾಲೇಜಿನ ಸಂಚಾಲಕರಾದ ಡಾ ಪರಮಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿದರು ವಿದ್ಯಾರ್ಥಿಗಳು ಅಭಿಯಾನದ ಮೂಲಕ ವಿವಿಧಕೋರ್ಸುಗಳ ಕುರಿತು ಸಮಗ್ರ ಮಾಹಿತಿಯನ್ನು ಪಡೆದರು ಅಲ್ಲದೆ ಮಾಹಿತಿ ಇರುವ ಕರಪತ್ರಗಳನ್ನು ಹಂಚಲಾಯಿತು
ಈ ಸಂದರ್ಭದಲ್ಲಿ ಐ ಕ್ಯೂ ಎಸಿ ಸಂಯೋಜಕರಾದ ಗಣೇಶ, ªನವೀನಕುಮಾರ ಹಾಗೂ ಕಾಲೇಜುಗಳ ಪ್ರಾಚಾರ್ಯರು ಉಪನ್ಯಾಸಕರು ವಿದ್ಯಾರ್ಥಿಗಳು ಸೇರಿದಂತೆ ಇದ್ದರು