ಸಿಎಂ ಸಿದ್ದರಾಮಯ್ಯ ಬದಲಾವಣೆ ಬಿ.ವೈ ವಿಜಯೇಂದ್ರ ಹಗಲು ಕನಸು: ಸಚಿವ ಬೋಸರಾಜ

Laxman Bariker
ಸಿಎಂ ಸಿದ್ದರಾಮಯ್ಯ ಬದಲಾವಣೆ ಬಿ.ವೈ ವಿಜಯೇಂದ್ರ ಹಗಲು ಕನಸು: ಸಚಿವ ಬೋಸರಾಜ
WhatsApp Group Join Now
Telegram Group Join Now

ಸಿಎಂ ಸಿದ್ದರಾಮಯ್ಯ ಬದಲಾವಣೆ ಬಿ.ವೈ ವಿಜಯೇಂದ್ರ ಹಗಲು ಕನಸು: ಸಚಿವ ಬೋಸರಾಜ

ಕಲ್ಯಾಣ ಕರ್ನಾಟಕ ವಾರ್ತೆ

ಕೆರೆ ತುಂಬಿಸುವ ಮೂಲಕ ಅಂತರಜಲ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ, ಜಲಧಾರೆ ಯೋಜನೆಯಲ್ಲಿ ಗುಣಮಟ್ಟ ಕಾಪಾಡಲು ಸೂಚಿಸಲಾಗಿದೆ

ಲಿಂಗಸುಗೂರ: ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬದಲಾವಣೆ ಹಾಗೂ ರಾಜೀನಾಮೆ ಕುರಿತು ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಗಲು ಕನಸು ಕಾಣುತ್ತಿದ್ದಾರೆ ಈಗಾ ಸಿಎಂ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯಿಲ್ಲ ನಾವೆಲ್ಲರು ಹೈಕಮಾಂಡ ತಿರ್ಮಾಣಕ್ಕೆ ಬದ್ಧವಾಗಿರುತ್ತೆವೆ ಎಂದು ಸಣ್ಣ ನೀರಾವರಿ ಹಾಗೂ ಭೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ.ಎಸ.ಬೋಸರಾಜ ಹೇಳಿದರು.


ಅವರು ಪರ್ತಕರ್ತರೊಂದಿಗೆ ಮಾತನಾಡುತ್ತ ರಾಜ್ಯದಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಹಾಗೂ ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆದಿವೆ ಯಾವ ಶಾಸಕರ ಅತೃಪ್ತಿಯಿಲ್ಲ ಹಾಗೂ ಪಕ್ಷದಲ್ಲಿ ಯಾವದೇ ಗುಂಪುಗಾರಿಕೆ ಇಲ್ಲ ಕಳೆದ ೬ ವರ್ಷದಿಂದ ಹಾನಿಗಿಡಾದ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ದುರಸ್ಥಿ ಕಾರ್ಯ ನಿರ್ವೆಹಿಸುತ್ತಿದ್ದು ರಾಜ್ಯದಲ್ಲಿ ಒಟ್ಟು ೨೫೮೫ ಕೆರೆಗಳು ಇದ್ದು ಅದರಲ್ಲಿ ಕೆಲವು ಮಳೆಯಿಂದ ಶೇಕಡ ೮೦% ಭರ್ತಿಯಾಗಿದ್ದು ಉಳಿದಂತೆ ಬರಗಾಲ ಸಮಯದಲ್ಲಿ ಲಭ್ಯವಿರುವ ಬಸಿ ನೀರು ಹಾಗೂ ಏತನೀರಾವರಿ ನದಿಗಳ ಮೂಲಕ ಭರ್ತಿ ಮಾಡಲಾಗುವದ್ದು ಅಂತರಜಲ ಹೆಚ್ಚಿಸಲು ಸತತ ಪ್ರಯತ್ನ ಮಾಡಲಾಗುತ್ತಿದೆ ಹಾಗೂ ರಾಯಚೂರು ಕೊಪ್ಪಳ ಜಿಲ್ಲೆಯಲ್ಲಿ ೧೪೮ ಕೆರೆಗಳ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಇದರಿಂದ ಬೇಸಿಗೆ ಸಮಯದಲ್ಲಿ ನೀರಿನ ತೊಂದರೆ ಆಗುವುದಿಲ್ಲ ಹಾಗೂ ಜಿಲ್ಲೆಯ ೧೪೦೬ ಗ್ರಾಮಗಳಿಗೆ ಕುಡಿಯವ ನೀರು ಒದಗಿಸುವ ತಾಲೂಕಿನ ಕೃಷ್ಣಾ ನದಿ ಹತ್ತಿರ ನಡೆದಿರುವ ಜಲಧಾರೆ ಕಾಮಗಾರಿ ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಯ್ದು ಕೂಳ್ಳಲು ತಿಳಸಲಾಗಿದೆ.
ಈ ಸಂಧÀರ್ಬದದಲ್ಲಿ ಮಾಜಿ ಶಾಸಕ ಡಿ.ಎಸ.ಹುಲಗೇರಿ, ಬ್ಲಾಕ್ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದ ನಾಯಕ, ಪುರಸಭೆ ಮಾಜಿ ಉಪಾಧ್ಯಕ್ಷ ಮಹ್ಮದ ರಫಿ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಸಂಜೀವಪ್ಪ ಹುನಕುಂಟಿ, ಅಲ್ಲವುದಿನ ಪಟೇಲ್, ತಾಲೂಕು ಯುವ ಕಾಂಗ್ರಸ್ಸ ಅಧ್ಯಕ್ಷ ಸಂತೋಷ ಸೋಪ್ಪಿಮಠ, ಲಿಂಗಸುಗೂರ ಹೋಬಳಿ ಯುವ ಅಧ್ಯಕ್ಷ ಮೌನೇಶ ಪೂಜಾರಿ, ಖಾಜಿ ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article