ಲಿಂಗಸುಗೂರ ಯುವ ಕಾಂಗ್ರೆಸ್ಸ ಅಧ್ಯಕ್ಷದ ಮೂರು ಸ್ಥಾನಗಳು ಹೂಲಗೇರಿ ಬಣಕ್ಕೆ ಗೆಲವು,ಹರ್ಷ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ::ಮಾಜಿ ಶಾಸಕ ಡಿ.ಎಸ.ಹೂಲಗೇರಿ ಬಣದ ಕಾರ್ಯಕರ್ತರು ಇತ್ತಿಚಿಗೆ ಜರುಗಿದ ಯುವ ಕಾಂಗ್ರೆಸ್ಸ ಪದಾಧಿಕಾರಿಗಳ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದು ಮೇಲುಗೈಯಾಗಿದೆ.
ಲಿಂಗಸುಗೂರ ತಾಲೂಕು ಯುವ ಕಾಂಗ್ರೆಸ್ಸ ಅಧ್ಯಕ್ಷರಾಗಿ ಸಂತೋಷ ಸೋಪ್ಪಿಮಠ ಕರಡಕಲ್ ಹಾಗೂ ಲಿಂಗಸೂಗೂರ ಹೋಬಳಿ ಅಧ್ಯಕ್ಷರಾಗಿ ಮೌನೇಶ ಪುಜಾರಿ ಮತ್ತು ಮುದಗಲ್ ಭಾಗದ ಯುವ ಕಾಂಗೆಸ್ಸ ಅಧ್ಯಕ್ಷರಾಗಿ ಖಜೀರ ಸಾಬ್ ಪಾನ್ವಾಲೆ ಇವರುಗಳು ಆಯ್ಕೆಯಾಗಿದ್ದಾರೆ.
ತಾಲೂಕು ಯೂಥ ಕಾಂಗ್ರೆಸ್ಸ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ ಸೋಪ್ಪಿಮಠ ಇವರು ಶ್ರೀ ಕಾಂತ ಗೌಡ ಮುದಗಲ್‌ರನ್ನು ಪರಾಭವಗೂಳಿಸಿದ್ದು, ಗೆಲವು ಸಾಧಿಸಿದ ಪದಾಧಿಕಾರಿಗಳನ್ನು ಲಿಂಗಸುಗೂರ ಬ್ಲಾಕ್ ಕಾಂಗ್ರೆಸ್ಸ ಕಛೇರಿಯಲ್ಲಿ ಅಧ್ಯಕ್ಷ ಗೋವಿಂದ ನಾಯಕ ಸನ್ಮಾನಿಸಿದರು.
ಈ ಸಂಧರ್ಬದಲ್ಲಿ ತಾಲೂಕು ಗ್ಯಾರಂಟಿ ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಎ.ಪಿ.ಎಂ.ಸಿ ಅಧ್ಯಕ್ಷ ಅಮರೇಶ ಹೆಸರೂರ, ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮೂನ್ನೂರ, ಮಾಜಿ ಉಪಧ್ಯಕ್ಷ ಮಹ್ಮದ ರಫೀ,ಮಹಿಳಾ ಕಾಂಗ್ರೆಸ್ಸ ಅಧ್ಯಕ್ಷೆ ವಿಜಯಲಕ್ಷಿö್ಮ, ಗುರುಬಾಯಿ, ಅಲ್ಲಾವುದ್ದಿನ ಪಟೇಲ್, ಶಿವಣ್ಣ ಕೋಠ, ಶರಣು ಮೇಟಿ, ಭೂಪನಗೌಡ ವಕೀಲ, ಗುಂಡಪ್ಪ ಸಹುಕಾರ ಮೇದನಾಪೂರ, ಗದ್ದೆನಗೌಡ ಇತರರು ಇದ್ದರು.