ಯಾದಗಿರಿ : ಬೈಕ್ ಸಾರಿಗೆ ಬಸ್ ನಡುವೆ ಡಿಕ್ಕಿ ಒಂದೇ ಕುಟುಂಬದ ಐವರ ದುರ್ಮರಣ
ಕಲ್ಯಾಣ ಕರ್ನಾಟಕ ವಾರ್ತೆ
ಯಾದಗಿರಿ ಜಿಲ್ಲೆ ತಿಂಥಣಿ ಬಳಿ ದುರ್ಘಟನೆ
ಒಂದೇ ಕುಟುಂಬದ ಇವರ ಧಾರಣ ಸಾವು
ಯಾದಗಿರಿ : ಯಾದಗಿರಿ ಜಿಲ್ಲೆ ತಿಂಥಣಿ ಗ್ರಾಮದ ಹೊರವಲಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಬೈಕ್ ಸವಾರರೆಲ್ಲರೂ ಸಾವನ್ನಪ್ಪಿದ್ದಾರೆ. ಬುಧವಾರ ಘಟನೆ ಜರುಗಿದೆ
ಸಾವನ್ನಪ್ಪಿದವರನ್ನು ರಾಯಚೂರು ಜಿಲ್ಲೆಯ ಮೆಟಮರಡಿದೊಡ್ಡಿಯವರು ಎಂದು ಗುರ್ತಿಸಲಾಗಿದೆ.
ಬೈಕ್ ಸವಾರರು ಗುರುಗುಂಟಾದಲ್ಲಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು,
ಸಾರಿಗೆ ಬಸ್ ಉಜ್ಜನಿಯಿಂದ ಚಿಂಚೋಳ್ಳಿಗೆ ಹೊರಟಿತ್ತು ಎನ್ನಲಾಗಿದೆ.
ದುರ್ಘಟನೆಗೆ ಕಾರಣ ಮತ್ತು ಮೃತಪಟ್ಟವರ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.
ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
*ಆನಂದ ತುರ್ವಿಹಾಳ್