ಬೀಜಗೊಬ್ಬರದ ಅಂಗಡಿಗಳಿಗೆ ಜಾಗೃತ ದಳದ ಅಧಿಕಾರಿ ಭೇಟಿ,ಪರಿಶೀಲನೆ, ಮಾಹಿತಿ ನೀಡಲು ಹಿಂದೇಟು ಮರ್ಮವೇನು..!!?

Laxman Bariker
ಬೀಜಗೊಬ್ಬರದ ಅಂಗಡಿಗಳಿಗೆ ಜಾಗೃತ ದಳದ ಅಧಿಕಾರಿ ಭೇಟಿ,ಪರಿಶೀಲನೆ, ಮಾಹಿತಿ ನೀಡಲು ಹಿಂದೇಟು ಮರ್ಮವೇನು..!!?
WhatsApp Group Join Now
Telegram Group Join Now

ಬೀಜಗೊಬ್ಬರದ ಅಂಗಡಿಗಳಿಗೆ ಜಾಗೃತ ದಳದ ಅಧಿಕಾರಿ ಭೇಟಿ,ಪರಿಶೀಲನೆ, ಮಾಹಿತಿ ನೀಡಲು ಹಿಂದೇಟು ಮರ್ಮವೇನು..!!?
ಜಾಗೃತ ದಳದ ಅಧಿಕಾರಿ ಬರುವ ಮಾಹಿತಿ ಪಡೆದ ರಸಗೊಬ್ಬರದ ಕೆಲ ಅಂಗಡಿಗಳ ಬಾಗಿಲುಬಂದ್!!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಬುಧವಾರ ಬೆಳಗ್ಗೆ ರಾಯಚೂರು ಜಿಲ್ಲಾ ಕೃಷಿ ವಿಭಾಗದ ಜಾಗೃತ ದಳದ ಅಧಿಕಾರಿ ಎಂದು ಪಟ್ಟಣದ ವಿವಿಧ ಬೀಜ ಮತ್ತು ರಸಗೊಬ್ಬರ ಕ್ರಿಮಿನಾಶಕದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಂಡುಬಂತು ಆದರೆ ಅವರು ಮಾಹಿತಿ ನೀಡಲು ಹಿಂದೇಟು ಹಾಕಿರುವುದರ ಮರ್ಮವೇನು ಎನ್ನುವ ಮಾತುಗಳು ಕೇಳಿಬಂದವು
ಪಟ್ಟಣದ ಅಂಚೆಕಛೇರಿಯ ಎದುರಿನ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವಾಗ ಅಕ್ಕಪಕ್ಕದ ಕೆಲಅಂಗಡಿಗಳು ತಮ್ಮ ಬಾಗಿಲು ಬಂದ್ ಮಾಡಿಕೊಂಡಿದ್ದವು ಇದರ ಹಿಂದಿನ ರಹಸ್ಯವೇನು ಎನ್ನುವುದು ಕೆಲ ರೈತರ ಅಭಿಪ್ರಾಯವಾಗಿದೆ
ರಸಗೊಬ್ಬರದ ಅಂಗಡಿಯಲ್ಲಿ ಜಾಗೃತ ದಳದ ಅಧಿಕಾರಿಯಂದ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಮಾಧ್ಯಮದವರು ಭೇಟಿ ನೀಡಿದಾಗ ನೀವು ಯಾರು ಯಾಕೆ ಬಂದಿದ್ದೀರಿ ಎಂದಾಗ ನಾವು ಜಾಗೃತ ದಳದ ಅಧಿಕಾರಿ ಸುಭಾನ್ ಅಂತ ಅಸಿಸ್ಟಂಟ್ ಡೈರೆಕ್ಟರ್ ನಾವು ಆಗಾಗ ಭೇಟಿ ನೀಡುತ್ತಲೆ ಇರುತ್ತೇವೆ ಎನ್ನುತ್ತಾರೆ ಹಿಂದೆ ಯಾವಾಗ ಭೇಟಿ ನೀಡಿದ್ದೀರಿ ಎಂದರೆ ಸುಮ್ಮನಾಗುತ್ತಾನೆ ಅಲ್ಲದೆ ಎಷ್ಟು ಅಂಗಡಿ ಪರಿಶೀಲನೆ ಮಾಡಿದಿರಿ ಏನಾದರು ವ್ಯತ್ಯಾಸಗಳು ಕಂಡು ಬಂದವು ಎಂದರೆ ಯಾವುದಕ್ಕೂ ಸರಿಯಾಗಿ ಉತ್ತರ ನೀಡಲಿಲ್ಲ ಲಿಂಗಸಗೂರಿನಲ್ಲಿ ಒಳ್ಳೆಯ  ಕಂಪನಿಯ ಲೇಬಲ್ ನಲ್ಲಿ ಸ್ಥಳಿಯವಾಗಿ ತಯಾರು ಮಾಡಿದ ಕ್ರಿಮಿನಾಶಕ ತುಂಬಿ ಈ ಹಿಂದೆ ಮಾರಾಟ ಮಾಡುತ್ತಿದ್ದರು ಅಂತಹ ಪ್ರಕರಣಗಳು ಏನಾದರು ಕಂಡುಬಂದವೇನು ಎಂದರೆ ಯಾವುದಕ್ಕೂ ಸರಿಯಾಗಿ ಉತ್ತರ ನೀಡಲಿಲ್ಲ ಈತನ ವರ್ತನೆ ನೋಡಿದರೆ ಬೀಜಗೊಬ್ಬರ ಕ್ರಿಮಿನಾಶಕ ಅಂಗಡಿಗಳಿಗೆ ಪರಿಶೀಲನೆ ಮಾಡಲು ಬಂದಿರುವರೊ ಅಥವ ಬೇರೆ ಯಾವುದಕ್ಕಾದರು ಬಂದಿರುವರೊ ಎನ್ನುವ ಮಾತುಗಳು ಕೇಳಿಬಂದವು ಯಾಕೆಂದರೆ ಚಾಲಕನಿಲ್ಲದೆ ತಾನೆ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ ಎನ್ನಲಾಗುತ್ತಿದೆ ಹಾಗಾದರೆ ಒಬ್ಬರೆ ಬಂದದ್ದೇಕೆ ಎನ್ನುವುದು ಮಾತ್ರ ನಿಗೂಢ ನಿಗೂಢ

WhatsApp Group Join Now
Telegram Group Join Now
Share This Article