ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ: ಕಳೆದ ಎರಡು ಮೂರು ತಿಂಗಳಿನಿAದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗೌರವಧನ ನೀಡಿರುವುದಿಲ್ಲ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ಮುಖ್ಯ ಮಂತ್ರಿಗೆ ಬರೆದ ಮನವಿ ಪತ್ರವನ್ನು ಅಂಗನವಾಡಿ ನೌಕರರು ಸಹಾಯಕ ಅಯುಕ್ತ ಬಸವಣಪ್ಪ ಕಲಶೆಟ್ಟಿ ಮುಖಾಂತರ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು)ತಾಲೂಕು ಅಧ್ಯಕ್ಷೆ ಸರಸ್ವತಿ ಈಚನಾಳ ನೇತೃತ್ವದಲ್ಲಿ ನೌಕರರು ಮನವಿ ಸಲ್ಲಿಸಿದರು.
ತಾವು ಗೌರವಧನ ಪಡೆಯಬೇಕಾದರೆ ಹೋರಾಟ ಮಾಡಿಯೆ ತೆಗೆದುಕೊಳ್ಳಭೇಕಾದ ಪರಸ್ಥಿತಿ ನಿರ್ಮಾಣವಾಗಿದೆ ತಾಲೂಕಾ ಅಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ ಸೇರಿದಂತೆ ವಿವಿಧ ಬೇಡಿಕೆಳು ೨೦೨೩ ಡಿಸೆಂಬರ ತಿಂಗಳನಿAದ ಕಾರ್ಯಕರ್ತೆರಿಗೆ ಹಾಗೂ ಸಹಾಯಕಿಯರಿಗೆ ಗೌರವಧನ ಪ್ರತಿ ತಿಂಗಳು ನೀಡುತ್ತಿಲ್ಲ ಅದನ್ನು ಪ್ರತಿ ತಿಂಗಲು ನೀಡಬೇಕು, ಭಾಗ್ಯ ಲಕ್ಷಿö್ಮ ಯೋಜನೆಯ ಫಲಾನುಭವಿಗಳಿಗೆ ೧೮ವರ್ಷ ತುಂಬಿದರು ಹಣ ಇನ್ನು ಹಾಕಿಲ್ಲ ಕೂಡಲೆ ಹಾಕಬೇಕು, ಲಿಂಗಸುಗೂರ ಮಸ್ಕಿ ಭಾಗದಲ್ಲಿ ೩ ವರ್ಷ ಗಳಿಂದ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು, ಆಹಾರ ಗುಣಮಟ್ಟ, ಬೆಲ್ಲ. ರವೆ ಕಳಪೆಮಟ್ಟದ್ದಾಗಿರುತ್ತದೆ. ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು, ೨೦೨೪ರಲ್ಲಿ ಪೂರೈಕೆಯಾದ ಮೊಬೈಲಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಪೋಷಣ ಟ್ರ‍್ಯಾಕ್ ಕೆಲಸ ಮಾಡಲು ತೊಂದರೆಯಾಗುತ್ತಿದ್ದು ಹಾಗೂ ಫಲಾನುಭವಿಗಳ ಓ.ಟಿ.ಪಿ. ನಂಬರ ಕೇಳುತ್ತಾರೆ ಹಳ್ಳಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನರಿಂದ ಓಟಿಪಿ . ಪಡೆಯುವದು ತೊಂದರೆಯಾಗುತ್ತಿದ್ದು ಪೋಷಣ ಟ್ರ‍್ಯಾಕ್ ಕೆಲಸ ಮಾಡಲು ಪರ್ಯಾಯ ವ್ಯವಸ್ಥೆ ಮಾಡಬೇಕು.
ಪೋಷಣಾ ಅಭಿಯಾನದ ಶ್ರೀಮಂತ ಕಾರ್ಯಕ್ರಮಕ್ಕಾಗಿ ಅನ್ನ ಪ್ರಾಸನ್ ರೂ.೨೫೦ ಗಳು ೨ವರ್ಷಗಳಿಂದ ಕೊಟ್ಟಿರುವುದಿಲ್ಲ ಕೇಳಿದರೆ ಕಾರ್ಯಕರ್ತೆಯರೇ ಸ್ವಂತ ಹಣದಲ್ಲಿ ಖರ್ಚು ಮಾಡಿ ಕಾರ್ಯಕ್ರಮ ಮಾಡಲು ಹೇಳುತ್ತಾರೆ ಮತ್ತು ೨೦೨೩೮ ಬರಬೇಕಾದ ಮಾತೃವಂದಾ ಕಾರ್ಯಕರ್ತೆಯರಿಗೆ ಕೂಡಲೇ ಮಂಜೂರು ಮಾಡಬೇಕು ೪-೫ವರ್ಷಗಳಿಂದ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕೀಯರ ಎನ್.ಪಿ.ಎಸ್. ಇಲ್ಲದವರ ಹಿಡುಗಂಟು ಹಣ ಕೂಡಲೇ ಬಿಡುಗಡೆ ಮಾಡಬೇಕು.
ನಿವೃತ್ತಿಯಾದ ಕಾರ್ಯಕರ್ತೆಯರು, ಸಹಾಯಕೀಯರಿಗೆ ಗ್ರಾಚುಟಿ ಹಣ ಕೂಡಲೇ ಮಂಜೂರು ಮಾಡಬೇಕು. ನಿವೃತ್ತಿ ಹೊಂದಿದ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳಿಗೆ ರೂ.೬೦೦೦ ಸಹಾಕಯರಿಗೆ ರೂ.೪,೦೦೦ ನಿವೃತ್ತಿ ವೇತನ ನೀಡಬೇಕು ೧೯೯೩ರ ಮಹಿಳಾ ಒಕ್ಕೂಟ ಹಳೆಯ ಕಾರ್ಯಾಲಯ ಮತ್ತು ೨೦೦೫ರ ಬಾಲಭವನ ೨೦೧೭ರ ಸ್ತ್ರೀಶಕ್ತಿ ಭವನ ಇಲಾಖೆಯ ಕಾರ್ಯಾಲಯ ಕೂಡಲೇ ನಿರ್ಮಾಣಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿಸಂಘಟನೆಯ ತಾಲೂಕಾಧ್ಯಕ್ಷೆ ಸರಸ್ವತಿ ಈಚನಾಳ, ಲಕ್ಷ್ಮೀ ನಗನೂರು ಮಹೇಶ್ವರಿ ಹಟ್ಟಿ, ಸುಮಿತ್ರಾ ಗುರುಗುಂಟ, ಬಸಮ್ಮ, ಜಯಶ್ರೀ,ಪದ್ಮ,ಸುಮಂಗಲಾ, ಪವಿತ್ರಾ,ಕುಸುಮಾದೇ,ವಿಜಯಲಕ್ಷ್ಮೀ ,ಹುಲಿಗೆಮ್ಮ ಶಿಲ್ಪಾ ಮೌನಾಕ್ಷಿ ನರಕಲದಿನ್ನಿ, ಅಮೃತಾ ಕನ್ನಾಳ, ಅಂಜನಮ್ಮ, ಮಲ್ಲಣ್ಣಗೌಡ ಮುದಗಲ್ ಹಾಗೂ ಇತತರು ಇದ್ದರು.