ಜಲಧಾರೆ ಕಾಮಗಾರಿ ಕಳಪೆ, ಅಂದಾಜು ಸಮಿತಿ ಅತೃಪ್ತಿ

Laxman Bariker
ಜಲಧಾರೆ ಕಾಮಗಾರಿ ಕಳಪೆ, ಅಂದಾಜು ಸಮಿತಿ ಅತೃಪ್ತಿ
Oplus_131072
WhatsApp Group Join Now
Telegram Group Join Now

೨೩೦೦ಕೋಟಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅತಂತ್ರ ,ಅವಧಿ ಮುಗಿದರು ಪೂರ್ಣಗೊಳ್ಳದ ಕಾಮಗಾರಿ, ಕೊನೆಯಭಾಗದ ಗ್ರಾಮಗಳಿಗೆ ನೀರು ತಲುಪುವುದು ಡೌಟ್!!?

ಜಲಧಾರೆ ಕಾಮಗಾರಿ ಕಳಪೆ, ಅಂದಾಜು ಸಮಿತಿ ಅತೃಪ್ತಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ: ತಾಲೂಕಿನ ಚಿತ್ತಾಪೂರ ಗ್ರಾಮದ ಹತ್ತಿರ ನಿರ್ಮಾಣತ್ತಿರುವ ಕೇಂದ್ರ ಸರಕಾರದ ಕುಡಿಯುವ ನೀರಿನ ಯೋಜನೆ ಜಲಧಾರೆ ಕಾಮಗಾರಿಯುವ ನಿಗದಿತ ಅವಧಿಯಲ್ಲಿ ಮಾಡದೆ ವಿಳಂಭ ಹಾಗೂ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲವೆಂದು ಜಿಲ್ಲೆಯ೮೬೦ ಗ್ರಾಮ ಹಾಗೂ ೧೪೦೬ ಜನವಸತಿಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆಂದು ವಿಧಾನ ಸಭಾ ಅಂದಾಜು ಸಮಿತಿ ಅಧ್ಯಕ್ಷ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.


ಅವರು ಶುಕ್ರವಾರ ಜಲಧಾರೆ ಕಾಮಗಾರಿ ಸ್ಥಳಕ್ಕೆ ಅಂದಾಜು ಸಮಿತಿಯ ಸದಸ್ಯರ ಶಾಸಕರ ತಂಡ ಭೇಟಿ ನೀಡಿ ನಂತರ ಸ್ಥಳಿಯ ಶಾಸಕ ವಜ್ಜಲ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಜಲಧಾರೆ ಕಾಮಗಾರಿ ಬಗ್ಗೆ ಬಹಳಷ್ಟು ದೂರು ಬಂದ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶಿಲಿಸಿ ಜಲದಾರೆ ಕಾಮಗಾರಿ ನಿಗದಿತ ಸಮಯದಲ್ಲಿ ಮಾಡಿರುವುದಿಲ್ಲ ಹಾಗೂ ಮಾಸ್ಟರ ಟ್ಯಾಂಕಗಳಿಗೆ ಕಳಪೆ ಸಾಮಗ್ರಿಗಳನ್ನು ಬಳಸಲಾಗುತ್ತಿದ್ದು ಕಂಡು ಬಂದಿದ್ದೆ ಗುತ್ತೆಗೆದಾರರೆ ವಿನ್ಯಾಸ ನಿರ್ಮಿಸಿ ಯೋಜನೆ ಕಾಮಗಾರಿ ಆರಂಭಿಸಿದ್ದು ಏಕಕಾಲಕಕ್ಕೆ ಕಾಮಗಾರಿಯನ್ನು ನಡೆಸದೆ ಸಿವಿಲ್ ಕಾಮಗಾರಿಗೆ ಮಹಾತ್ವ ನೀಡಿದು ೧೦ ತಾಲೂಕುಗಳಲ್ಲಿ ಪೈಪ ಲೈನ್ ಕಾಮಗಾರಿ ನಡೆಸಿದ್ದಾರೆ ಹೊರತು ನೀರು ಸಂಗ್ರಹ ಟ್ಯಾಂಕ್ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ.

oplus_2

ರಾಯಚೂರು ತಾಲೂಕಿನ-155 ಗ್ರಾಮಗಳು, ದೇವದುರ್ಗ-177 ಗ್ರಾಮಗಳು, ಲಿಂಗಸಗೂರು-189 ಗ್ರಾಮಗಳು, ಮಾನ್ವಿ-165 ಗ್ರಾಮಗಳು, ಸಿಂಧನೂರು-174 ಗ್ರಾಮಗಳು ಒಟ್ಟು-860 ಗ್ರಾಮಗಳು ಹಾಗೂ 1406 ಜನವಸತಿಗಳಿಗೆ ನೀರು ತಲುಪಿಸುವ ಯೋಜನೆ ಇದಾಗಿದೆ


ಜಿಲ್ಲೆಯ ಒಟ್ಟು ೧೬ಲಕ್ಷ ಜನಸಂಖ್ಯೆಗೆ ಶುದ್ಧ ನೀರು ಪೂರೈಸುವ ಯೋಜನೆಯಾಗಿದೆ ಈ ಯೋಜನೆಗೆ ೨೩೦೦ ಕೋಟಿ ಅನುದಾನ ನೀಡಿಲಾಗಿದ್ದು ಕೇವಲ ೬೦% ಕಾಮಗಾರಿ ಆಗಿದ್ದು ಸ್ಥಳೀಯವಾಗಿ ೬ ಮಾಸ್ಟರ ಬ್ಯಾಲನ್ಸಿಂಗ ರಿಸರ್ವೈರ್ ಪ್ರತಿ ತಾಲೂಕಿನಲ್ಲಿ ೧೦ ಝೋನಲ್ ಬ್ಯಾಲನ್ಸಿಂಗ ರಿಸರ್ವೈರ್ ನಿರ್ಮಿಸಬೇಕಾಗಿದ್ದು ಜನಸಂಖ್ಯೆ ಆಧಾರವಾಗಿ ನೀರು ಸರಿಯಾಗಿ ಪೂರೈಸುವಲ್ಲಿ ವಿಳಂಭವಾಗಿದೆ ೨೦೨೦ರಲ್ಲಿ ಕಾಮಗಾರಿ ಆರಂಭಿಸಿದ್ದು ಡಿಸೆಂಬರ್ ೨೪ರಯೊಳಗೆ ಪೂರ್ಣಗೂಳಬೇಕಾಗಿದ್ದು ಗುತ್ತೆಗೆದಾರರು ಸಮಯ ವಿಸ್ತರಣೆ ಕೇಳಿದಾರೆ ಆದಷ್ಟು ತೀವ್ರ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ನಮ್ಮ ಅಂದಾಜು ಸಮಿತಿ ರಚನೆಯಾಗಿ ೩ ತಿಂಗಳುಯಾಗಿದ್ದು ಇನ್ನೂ ೭ತಿಂಗಳು ಬಾಕಿದ್ದು ಇನ್ನೂಮ್ಮೆ ಜಲಧಾರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲಾಗುವದೆಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿರುವರು.

ಈ ಸಮಯದಲ್ಲಿ ಅಂದಾಜು ಸಮಿತಿ ಸದಸ್ಯರುಗಳಾದ ಶಾಸಕರುಗಳಾದ ಮಾನಪ್ಪ ಡಿ. ವಜ್ಜಲ್, ಬಸನಗೌಡ ದದ್ದÀಲ್, ಅಭಯ ಪಾಟೀಲ್, ಸುರೇಶಗೌಡ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಮ್ ಪಾಂಡ್ವೆ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಭಿಯಂತರಾದ ಜಿ.ಗುಪ್ತಾ, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಶಿಲ್ದಾರ ಸೈಯದ್ ಶಂಶಾಲಾA, ಆರ್‌ಡಬ್ಲೂö್ಯಎಸ ಎಇಇ ಪರೇಮೇಶ್ವರ ಟೇಂಗಳಿ, ಗುತ್ತೆದಾರರು ಹಾಗೂ ಸಿಬ್ಬಂದಿಗಳು ಇದ್ದರು.

WhatsApp Group Join Now
Telegram Group Join Now
Share This Article