ಶಾಸಕ ಮಾನಪ್ಪ ವಜ್ಜಲ್ ೪ ನೂತನ ಡಯಾಲಿಸಸ್ ಯಂತ್ರಕ್ಕೆ ಚಾಲನೆ ಕ

Laxman Bariker
ಶಾಸಕ ಮಾನಪ್ಪ ವಜ್ಜಲ್ ೪ ನೂತನ ಡಯಾಲಿಸಸ್ ಯಂತ್ರಕ್ಕೆ ಚಾಲನೆ  ಕ
WhatsApp Group Join Now
Telegram Group Join Now

ಶಾಸಕ ಮಾನಪ್ಪ ವಜ್ಜಲ್ ೪ ನೂತನ ಡಯಾಲಿಸಸ್ ಯಂತ್ರಕ್ಕೆ ಚಾಲನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೂತನವಾಗಿ ಬಂದಿರುವ ೪ ಡಯಾಲಿಸಸ್ ಯಂತ್ರಗಳಿಗೆ ಶಾಸಕ ಮಾಣಪ್ಪ ವಜ್ಜಲ್ ಚಾಲನೆ ನೀಡಿದರು
೨೦೨೪-೨೫ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿAದ ಮಂಜೂರಿಯಾದ ಅಂದಾಜು ಹಣ ೨೬ ಲಕ್ಷದಲ್ಲಿ ಡಯಾಲಿಸಸ್ ನ ನಾಲ್ಕು ನೂತನ ಯಂತ್ರಗಳಿಗೆ ಚಾಲನೆ ನೀಡುವುದರ ಮೂಲಕ ರೋಗಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಅವರು ಹೇಳಿದರು
ತಾಲೂಕಾ ಆಸ್ಪತ್ರೆಯಲ್ಲಿ ಡಯಲಿಸಸ್ ಸೌಲಭ್ಯ ಪಡೆದ ಆಸ್ಪತ್ರೆ ನಮ್ಮದಾಗಿದ್ದು ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ವೈದ್ಯರು ಉತ್ತಮಸೇವೆ ಸಲ್ಲಿಸಬೇಕು ರಾತ್ರಿ ಪಾಳೆಯಲ್ಲಿಯು ಸೇವೆ ಸಲ್ಲಿಸಬೇಕು ರೋಗಿಗಳ ಆರೋಗ್ಯವನ್ನು ಕಾಪಾಡಿ ಉತ್ತಮ ಹೆಸರು ತರುವ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಗಿರಿಮಲ್ಲನಗೌಡ ಪಾಟೀಲ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ರುದ್ರಗೌಡ ಪಾಟೀಲ್, ತಾಲೂಕಾ ವೈದ್ಯಾಧಿಕಾರಿ ಅಮರೇಶ ಪಾಟೀಲ್, ಡಾ ದಿಗಂಬರ, ಡಾ ಬಸವರಾಜ ಹಾಗೂ ಮುಖಂಡರಾದ ವೀರಣ್ಣ ಹುರಕಡ್ಲಿ, ನಾಗಭೂಷಣ, ಫಕೀರಪ್ಪ ಕುರಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article