ಕೃಷಿಕ ಸಮಾಜದ ತಾಲೂಕಾಧ್ಯಕ್ಷರಾಗಿ ಸುರೇಂದ್ರಗೌಡ ಪಾಟೀಲ್ ಅವಿರೋಧ ಆಯ್ಕೆ,ಸನ್ಮಾನ

Laxman Bariker
ಕೃಷಿಕ ಸಮಾಜದ ತಾಲೂಕಾಧ್ಯಕ್ಷರಾಗಿ ಸುರೇಂದ್ರಗೌಡ ಪಾಟೀಲ್ ಅವಿರೋಧ ಆಯ್ಕೆ,ಸನ್ಮಾನ
WhatsApp Group Join Now
Telegram Group Join Now

ಕೃಷಿಕ ಸಮಾಜದ ತಾಲೂಕಾಧ್ಯಕ್ಷರಾಗಿ ಸುರೇಂದ್ರಗೌಡ ಪಾಟೀಲ್ ಅವಿರೋಧ ಆಯ್ಕೆ,ಸನ್ಮಾನ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಕೃಷಿಕ ಸಮಾಜದ ತಾಲೂಕಾ ಅಧ್ಯಕ್ಷರಾಗಿ ಸುರೇಂದ್ರಗೌಡ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದು ಅವರನ್ನು ಕಾಂಗ್ರೆಸ್ ಪಕ್ಷದವತಿಯಿಂದ ಸನ್ಮಾನಿಸಲಾಯಿತು

oplus_2

ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ನಿವಾಸಕ್ಕೆ ಆಗಮಿಸಿದಾಗ ಪಕ್ಷದವತಿಯಿಂದ ಅಧ್ಯಕ್ಷರಿಗೆ ಹಾಗೂ ಅವರ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು

ಕಳೆದ ಹತ್ತುವರ್ಷಗಳ ನಂತರ ಇದೀಗ ಕೃಷಿಕ ಸಮಾಜಕ್ಕೆ ನೂತನ ಸದಸ್ಯಮಂಡಳಿ ರಚನೆಯಾಗಿ ಮಂಗಳವಾರ ಪದಾಧಿಕಾರಿಗಳ ನೇಮಕವನ್ನು ಮಾಡಲಾಯಿತು
ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳ ಹಿಂದೆಯೆ ಚುನಾವಣೆ ನಡೆಯಬೇಕಾಗಿತ್ತು ಆದರೆ ತಡೆಯಾಜ್ಞೆಯಿಂದಾಗಿ ವಿಳಂಬವಾಗಿತ್ತು ಕಳೆದ ತಿಂಗಳು ಸದಸ್ಯರ ಆಯ್ಕೆ ನಡೆದಿತ್ತು ಡಿ೨೪ರಂದು ಮಂಗಳವಾರ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಸರಕಾರದಿಮದ ಬರುವ ಸವಲತ್ತುಗಳನ್ನು ರೈತರಿಗೆ ಪ್ರಾಮಾಣಿಕವಾಗಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದರು ಅಲ್ಲದೆ ನನ್ನ ಆಯ್ಕೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಅಮರೇಗೌಡ ಪಾಟೀಲ್ ಬಯ್ಯಾಪುರ, ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಪಕ್ಷದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು
ನೂತನ ಪದಾಧಿಕಾರಿಗಳು:ಸುರೇಂದ್ರಗೌಡ ಪಾಟೀಲ್- ಅಧ್ಯಕ್ಷರು, ಹನಮಂತಪ್ಪ ಆರ್ ಕುಲಕರ್ಣಿ-ಉಪಾಧ್ಯಕ್ಷರು, ಅಮರೇಶ ಅಂಗಡಿ-ಪ್ರ,ಕಾ, ಲಾಲಸಾಬ ಗುರುಗುಂಟ-ಖಜಾAಚಿ, ಆದಪ್ಪ ಸುಲ್ತಾನಪುರ-ಜಿಲ್ಲಾ ಪ್ರತಿನಿಧಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಸಿದ್ರಾಮರೆಡ್ಡಿ ಮಟ್ಟೂರು, ಶರಣಗೌಡ ಪಾಟೀಲ್ ಬೋಗಾಪುರ, ಬಸನಗೌಡ ಪಾಟೀಲ್ ಆದಾಪುರ, ಅಮರೇಗೌಡ ಪಾಟೀಲ್ ಆದಾಪುರ, ಮಂಜುನಾಥ ದೇಸಾಯಿ ಮುದಗಲ್, ಪ್ರಶಾಂತ ಮಾಲಿ ಬಿರಾದಾರ, ಪಾರ್ವತೆಮ್ಮ ಅಮರೇಗೌಡ ಹೆಸರೂರು, ಬಸವರಾಜ ಕೆಲ್ಲುರು ಸಾ ಚುಕನಟ್ಟಿ ಆಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪನಗೌಡ ಪಾಟೀಲ್ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಮÀಲ್ಲಣ್ಣ ವಾರದ ಗುಂಡಪ್ಪನಾಯಕ,ಸೋಮಶೇಖರ ಐದನಾಳ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article