ರಾಯಚೂರು ವಿವಿ ಸುಧಾರಣೆಗೆ ಯತ್ನಿಸುತ್ತಿರುವ ವಿಸಿಗಳ ಮೇಲೆ ದೂರು ಸೂಕ್ತವಲ್ಲ-ಬಯ್ಯಾಪುರ

Laxman Bariker
ರಾಯಚೂರು ವಿವಿ ಸುಧಾರಣೆಗೆ ಯತ್ನಿಸುತ್ತಿರುವ ವಿಸಿಗಳ ಮೇಲೆ ದೂರು ಸೂಕ್ತವಲ್ಲ-ಬಯ್ಯಾಪುರ
WhatsApp Group Join Now
Telegram Group Join Now

ರಾಯಚೂರು ವಿವಿ ಸುಧಾರಣೆಗೆ ಯತ್ನಿಸುತ್ತಿರುವ ವಿಸಿಗಳ ಮೇಲೆ ದೂರು ಸೂಕ್ತವಲ್ಲ-ಬಯ್ಯಾಪುರ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ರಾಯಚುರು ವಿಶ್ವವಿದ್ಯಾಲಯದ ವ್ಯಾಪ್ತಿಯ ರಆಯಚೂರು ಹಾಗೂ ಯಾದಗಿರಿ ಜಿಲ್ಲೆಯ ಪದವಿ ಕಾಲೇಜುಗಳ ಸುಧಾರಣೆಗಾಗಿ ವಿಸಿಗಳ ಮೇತೃತ್ವದಲ್ಲಿ ವಿವಿಧ ಕಾಲೇಜುಗಳ ಹಂತಗಳಿಗೆ ಭೇಟಿ ನೀಡಿ ಸುಧಾರಣೆಗೆ ಯತ್ನಿಸುತ್ತಿದ್ದು ಕಾಲೇಜು ಒಕ್ಕೂಟ ದೂರುತ್ತಿರುವುದು ಸೂಕ್ತವಲ್ಲವೆಂದು ಮಾಜಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು

ಅವರು ಪಟ್ಟಣದ ವಿವಿ ಸಂಘದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇದುವರೆಗಿನ ವಿಸಿಗಳು ಕೇವಲ ವಿವಿಯಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದರು ಆದರೆ ನೂತನ ವಿಸಿಯವರು ಆಯಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವವತೆ ಹಾಗೂ ನ್ಯೂನತೆಗಳನ್ನು ಅರಿತು ಅವುಗಳ ಸುಧಾರಣೆಗೆ ಯತ್ನಿಸುತ್ತಿದ್ದಾರೆ ಹಲವಾರು ಕಡೆಯಲ್ಲಿ ಕಾಲೇಜುಗಳು ನಾಮಾಕಾವಸ್ಥೆಕ್ಕೆ ಎನ್ನುವಂತಿವೆ ಕೆಲವೊಂದುಕಡೆ ವಿದ್ಯಾರ್ಥಿಗಳಿಲ್ಲ, ಮೂಲಸೌಕರ್ಯವಿಲ್ಲ ದಾಖಲಾತಿಗಳು ಸರಿಯಾಗಿಲ್ಲ ಸೇರಿದಂತೆ ಹಲವಾರು ಕುಂದು ಕೊರತೆಯಲ್ಲಿವೆ ಅದನ್ನು ಸರಿಪಡಿಸಿ ಕಾಲೇಜುಗಳ ಸುಧಾರಣೆಗೆ ಈಗಿನ ವಿಸಿಯವರು ಯತ್ನಿಸುತ್ತಿದ್ದಾರೆ ಹಿಂದುಳಿದ ಪ್ರದೇಶದಲ್ಲಿರುವ ಇಲ್ಲಿಯ ಕಾಲೇಜುಗಳು ಸುಧಾರಣೆಯಾಗಬೇಕಾಗಿರುವುದು ಅಗತ್ಯವಾಗಿದೆ ಆದರೆ ಕಾಲೇಜುಗಳ ಒಕ್ಕೂಟದವರು ವಿಸಿಗಳ ವಿರುದ್ದವೇ ದೂರುವುದು ಸರಿಯಾದ ಕ್ರಮವಲ್ಲ
ವಿವಿಗಳು ವಿದ್ಯಾರ್ಥಿಗಳ ದಾಖಲೆಗಳನ್ನು ಸರಿಯಾಗಿ ನಿಡುವಲ್ಲಿ ವಿಫಲವಾಗಿವೆ ಹಲವಾರು ವಿದ್ಯಾರ್ಥಿಗಳ ಅಂಕಪಟ್ಟಿಗಳು ಬಂದಿರುವುದಿಲ್ಲ ಅಂತಹ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಅಲ್ಲದೆ ರಾಜ್ಯದ ಹಲವಾರು ವಿವಿಗಳಲ್ಲಿಯು ಸಮಸ್ಯೆಗಳಿವೆ ಅವುಗಳ ಸುಧಾರಣೆಗಾಗಿ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕಾಗಿದೆ ಅಲ್ಲದೆ ನಮ್ಮ ಭಾಗದ ಕಾಲೇಜುಗಳ ಸಮಸ್ಯೆಗಳ ಸರಿಪಡಿಸಲು ಜನಪ್ರತಿನಿಧಿಗಳು ಸಹಿತ ಶ್ರಮಿಸಬೇಕಾಗಿದೆ ಎಂದರು
ರಾಯಚೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿರುವ ನಡೆಯುತ್ತಿರುವ ಈ ಗೊಂದಲ ಸರಿಪಡಿಸಿಲು ಸರಕಾರದ ಒಂದು ಉನ್ನತ ಮಟ್ಟದ ಸಮಿತಿ ರಚಿಸಿ ಸದರಿ ಕಾಲೇಜುಗಳನ್ನು ಪರಿಶೀಲನೆ ಮಾಡುವುದರ ಮೂಲಕ ಸುಸೂತ್ರವಾಗಿ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು ನಡೆಯುವಂತೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು

WhatsApp Group Join Now
Telegram Group Join Now
Share This Article