ಲಿಂಗಸಗೂರು:ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಖಾಸಗಿ ಸೆಂಟರಗೆ ರವಾನೆ,ಆಕ್ರೋಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರು ಚಿಕಿತ್ಸೆಗೆ ಬಂದರೆ ಹೆರಿಗೆ ತಜ್ಞೆ ಉಮಾಮಹೇಶ್ವರಿ ಖಾಸಗಿ ಸ್ಕಾö್ಯನಿಂಗ್ ಸೆಂಟರ್ ಗೆ ಕಳುಹಿಸುತ್ತಿದ್ದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಲೂಕು ಹಾಗೂ ಹೊರ ತಆಲೂಕಿನಿಂದಲೂ ಸಾಕಷ್ಟು ಪ್ರಮಾಣದಲ್ಲಿ ಚಿಕಿತ್ಸೆಗೆ ಬರುತ್ತಾರೆ ಅದರಲ್ಲಿಯು ಗರ್ಭಿಣಿ ಮಹಿಳೆಯರು ಬರುತ್ತಾರೆ ಸದರಿ ಆಸ್ಪತ್ರೆಯಲಿ ಹೆರಿಗೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ ಉಮಾಮಹೇಶ್ವರಿಯವರು ತಮ್ಮ ಕಡೆಗೆ ಚಿಕಿತ್ಸೆಗೆ ಬರುವ ಗರ್ಭಿಣಿ ಮಹಿಳೆಯರಿಗೆ ಸ್ಯಾ÷್ಕನಿಂಗ್ ಮಾಡಿಸಿಕೊಂಡು ಬರಲು ಸೂಚಿಸುತ್ತಾಳೆ ಸರಕಾರಿ ಆಸ್ಪತ್ರೆಯಲ್ಲಿ ಸ್ಕಾö್ಯನಿಂಗ್ ವ್ಯವಸ್ಥೆ ಇದೆ ಆದರೆ ಡಾ ಉಮಾಮಹೇಶ್ವರಿ ಮಾತ್ರ ಸ್ಕಾö್ಯನಿಂಗ್ ಮಾಡಿಸಲು ಖಾಸಗಿ ಕೇಂದ್ರಕ್ಕೆ ಕಳುಹಿಸುತ್ತಿದ್ದು ಅದು ಡಾ ಉಮಾಮಹೇಶ್ವರಿಯ ಗಂಡ ಡಾ ವೆಂಕಟೇಶ ನಡೆಸುತ್ತಿರುವ ಸಾಯಿ ಶ್ರೀನಿವಾಸ ಸ್ಕಾö್ಯನ್ ಕೇಂದ್ರಕ್ಕೆ ಕಳುಸುತ್ತಾಳೆ ಎಂದು ಆರೋಪಿಸಲಾಗುತ್ತಿದೆ
ಘಟನೆ ವಿವರ:ಡಿಸೆಂಬರ ೧೨ರಂದು ಅನಿತಾ ಗಂ ಬಸವರಾಜ ಎನ್ನುವ ಗರ್ಭೀಣಿ ಮಹಿಳೆ ಚಿಕಿತ್ಸೆಗೆ ಬಂದಿದ್ದಾಳೆ ಆಕೆಗೆ ಪರೀಕ್ಷಿಸಿ ಸ್ಕಾö್ಯನಿಂಗ್ ಖಾಸಗಿ ಕೇಂದ್ರಕ್ಕೆ ಬರೆದಿದ್ದಾಳೆ ಮೆಡಂ ಸರಕಾರಿ ಆಸ್ಪತ್ರೆಯಲ್ಲಿ ಸ್ಕಾö್ಯನಿಂಗ್ ಇದೆಯಲ್ಲ ಹೊರಗೆ ಯಾಕೆ ಬರೆದಿದ್ದೀರಿ ಎಂದು ಪ್ರಶ್ನಿಸಿದರೆ ಸರಕಾರಿ ಆಸ್ಪತ್ರೆಯಲ್ಲಿ ಸ್ಕಾö್ಯನಿಂಗ್ ಇರುವುದಿಲ್ಲ ಹೊರಗಡೆ ಮಾಡಿಸಿಕೊಂಡು ಬನ್ನಿ ಎಂದು ಖಾಸಗಿ ಸ್ಕಾö್ಯನಿಂಗ್ ಕಳುಹಿಸುತ್ತಾರೆಂದು ಆರೋಪಿಸುತ್ತಾರೆ
ಆದರು ಅನಿತಾ ಗಂ ಬಸವರಾಜರವರು ಸರಕಾರಿ ಆಸ್ಪತ್ರೆಯಲ್ಲಿಯೆ ಸ್ಕಾö್ಯನಿಂಗ್ ಇದೆಯೆ ಎಂದು ವಿಚಾರಿಸಿದ್ದಾರೆ ವೈದ್ಯರು ಬರೆದ ಸ್ಕಾö್ಯನಿಂಗ್ ನಮ್ಮಲ್ಲಿ ಲಭ್ಯವಿದೆ ಎಂದು ಸರಕಾರಿ ಆಸ್ಪತ್ರೆಯಲ್ಲೆ ಸ್ಕಾö್ಯನ್ ಮಾಡಿಸಿ ರಿಪೋರ್ಟ ತಂದಿದ್ದಾರೆ ಅದನ್ನು ಕಂಡ ಡಾ ಉಮಾಮಹೇಶ್ವರಿಯವರು ಸರಿಯಾಗಿ ಸ್ಪಂದಿಸದೆ ನಿರ್ಲಕ್ಷವಾಗಿ ವರ್ತಿಸಿ ನೀವು ಮೊದಲು ಬೇರೆ ವೈದ್ಯರ ಹತ್ತಿರ ತೋರಿಸಿದ್ದೀರಿ ಅಲ್ಲೆ ತೋರಿಸಿ ಎಂದು ಹೇಳುವುದಲ್ಲದೆ ಭಯಪಡುವ ರೀತಿಯಲ್ಲಿ ಮಾತನಾಡಿದರು ಅಲ್ಲದೆ ತಾವು ಬರೆದುಕೊಟ್ಟ ಸಾಯಿ ಶ್ರೀನಿವಾಸ ಕೇಂದ್ರದಲ್ಲಿಯೆ ಸ್ಕಾö್ಯನಿಂಗ್ ಮಾಡಿಸಲು ಒತ್ತಾಯಿಸದರು ಎಂದು ಆರೋಪಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಾಲೂಕಾ ಆರೋಗ್ಯಾಧಿಕಾರಿಗಳ ಮೂಲಕ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ