ಯುವತಿಯರೇ..ಹುಷಾರು!!
ಲಿಂಗಸಗೂರು:ಫೈನಾನ್ಸನಲ್ಲಿ ಲೈಂಗಿಕ ಕಿರುಕುಳ ಯುವತಿ ರಾಜೀನಾಮೆ ಪತ್ರ..!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಫೈನಾನ್ಸ ಒಂದರಲ್ಲಿ ಅಲ್ಲಿಯ ಕ್ಯಾಸಿಯರ್ ಹಾಗೂ ಮೆನೇಜರ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಪತ್ರ ವೈರಲ್ ಆಗಿದೆ
ಪಟ್ಟಣದಲಿ ನಿತ್ಯವು ಹಲವಾರು ಫೈನಾನ್ಸ ಗಳು ಹುಟ್ಟಿಕೊಳ್ಳುತ್ತಿವೆ ಅದರಲ್ಲಿ ಮಹಿಳೆಯರು ಪುರುಷರು ಸರ್ವೇಸಾಮಾನ್ಯವಾಗಿ ಕೆಲಸ ಮಾಡುವುದು ಸಹಜವಾಗಿದೆ ಆದರೆ ಅಲ್ಲಿ ಮಹಿಳೆಯರೆ ಯುವತಿಯರೆ ನಿವೇಷ್ಟು ಸುರಕ್ಷಿತ ಎನ್ನುವ ಮಾತುಗಳು ಈ ಘಟನೆಯಿಂದ ಸಂಶಯಕ್ಕೆ ಎಡೆಮಾಡುತ್ತವೆ ಹಾಗಂತ ಎಲ್ಲವು ಹಾಗೆನಲ್ಲ ಆದರೆ ಇಲ್ಲಿ ಘಟನೆ ಮಾತ್ರ ಅಂತಹ ಚಿಂತನೆಗೆ ಹಚ್ಚಿರುವುದಂತು ಸತ್ಯವಾಗಿದೆ
ಪಟ್ಟಣದ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿರುವ ಯುವಕರು ಅಪರೂಪಕ್ಕೆ ಭೇಟಿಯಾದ ತಮ್ಮ ಕ್ಲಾಸ್ ಮೆಟ್ ರೊಬ್ಬರಿಗೆ ಆಕಸ್ಮಿಕವಾಗಿ ಭೇಟಿಯಾದ ಸಂದರ್ಭದಲ್ಲಿ ಯುವತಿ ಖಾಲಿ ಇರುವುದು ಮಾತನಾಡಿದ್ದಾಳೆ ಕೂಡಲೆ ಯುವಕ ನಮ್ಮ ಫೈನಾನ್ಸನಲ್ಲಿ ಕೆಲಸ ಮಾಡಬಹುದು ಎಂದು ಸೂಚಿಸಿದ್ದಾರೆ ಕೆಲದಿನಗಳ ಕಾಲ ಯುವತಿ ಕೆಲಸ ಮಾಡಿದ್ದಾಳೆ ಹಾಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಯುವತಿಗೆ ಸದರಿ ಫೈನಾನ್ಸದಲ್ಲಿ ಲೈಂಗಿಕ ಕಿರುಕುಳವಾಗಿದೆ ಎಂದು ಯುವತಿ ರಾಜೀನಾಮೆ ಪತ್ರದಲ್ಲಿ ಬರೆದುಕೊಂಡಿದ್ದಾಳೆ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ಬರುತ್ತಲೆ ಒಬ್ಬ ಯುವಕನನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಫೈನಾನ್ಸ್ ನವರು ಹೇಳುತ್ತಾರೆ ಆದರೆ ಮತ್ತೊಬ್ಬ ಯುವಕನ ಬಗೆಗೂ ಆರೋಪಗಳು ಕೇಳಿಬಂದಿವೆ ಆತನ ಬಗೆಗೂ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದು ಸದರಿ ಫೈನಾನ್ಸ್ ನ ಹ್ಯೂಮನ್ ರೈಟ್ಸ್ ವಿಭಾಗಕ್ಕೆ ಕಳುಹಿಸಲಾಗಿದ್ದು ಅವರು ಬಂದು ತನಿಖೆ ಮಾಡುವರು ಎನ್ನುವ ಮಾಹಿತಿಯನ್ನು ಫೈನಾನ್ಸ್ ಅಧಿಕಾರಿಗಳಿಂದ ತಿಳಿದು ಬಂದಿದೆ ಯುವಕರ ಬಗೆಗೆ ಆರೋಪಗಳು ಕೇಳಿಬಂದ ತಕ್ಷಣ ಕೆಲಸದಿಂದ ತೆಗೆಯುತ್ತಿರುವ ಒಂದೆಡೆಯಾದರೆ ಇದರಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಯಾವಾಗ ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿದೆ
ಯುವತಿಯ ಪತ್ರದ ಸಾರಾಂಶ ನಾನು ತಮ್ಮ ಫೈನಾನ್ಸ ದಲ್ಲಿ ಕೆಲಸಕ್ಕೆ ಸೇರಿದೆ ಅದರಲ್ಲಿ ಇಬ್ಬರು ಯುವಕರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ದೈಹಿಕ ಹಾಗೂ ಮಾನಸಿಕ ಕಿರುಕುಳವಾಗಿದೆ ನನಗೆ ಇಲ್ಲಿ ಸುರಕ್ಷತೆ ಇರುವುದಿಲ್ಲ ಅದಕ್ಕಾಗಿ ನಾನು ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸದರಿ ಫೈನಾನ್ಸ್ ನ ಮೇಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಬರೆದಿದ್ದಾಳೆ
ಹೀಗೆ ವಿವಿದೆಡೆ ಕೆಲಸ ಮಾಡುವಾಗ ಸ್ವಲ್ಪ ಎಚ್ಚರವಹಿಸುವುದು ಅಗತ್ಯ ತಾನೆ ಮಹಿಳೆಯರೆ ಹುಷಾರು!! ಎನ್ನುವುದು ಪತ್ರಿಕೆಯ ಆಶಯವಾಗಿದೆ