ರೈತರ ಸಮಸ್ಯೆಗಳಿಗೆ ಸ್ಪಂದಿಸುತಿದ್ದು ಬೀಜ ಗೊಬ್ಬರದ ಸಮಸ್ಯೆ ಇಲ್ಲ-ಚಲುವರಾಯಸ್ವಾಮಿ

Laxman Bariker
ರೈತರ ಸಮಸ್ಯೆಗಳಿಗೆ ಸ್ಪಂದಿಸುತಿದ್ದು ಬೀಜ ಗೊಬ್ಬರದ ಸಮಸ್ಯೆ ಇಲ್ಲ-ಚಲುವರಾಯಸ್ವಾಮಿ
WhatsApp Group Join Now
Telegram Group Join Now

ರೈತರ ಸಮಸ್ಯೆಗಳಿಗೆ ಸ್ಪಂದಿಸುತಿದ್ದು ಬೀಜ ಗೊಬ್ಬರದ ಸಮಸ್ಯೆ ಇಲ್ಲ-ಚಲುವರಾಯಸ್ವಾಮಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು ಎಡಿಯವರ ಬಗೆಗೆ ದೂರು ಬಂದಿದ್ದು ಕ್ರಮ ಜರುಗಿಸಲಾಗುವುದು

ಲಿಂಗಸುಗೂರ;ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಇಲಾಖೆಯಲ್ಲಿ ಯಾವುದೆ ಕೊರತೆ ಇಲ್ಲ ರೈತರಿಗೆ ಬೀಜ ಗೊಬ್ಬರದ ತೊಂದರೆಯಾಗದAತೆ ಗಮನಹರಿಸಲಾಗುತ್ತಿದೆ ಎಂದು ಖೃಷಿ ಸಚಿವ ಎನ್ ಚಲುವನಾರಾಯಣಸ್ವಾಮಿ ಹೇಳಿದರು

ಅವರು ಇಂದು ಪಟ್ಟಣದ ಎಂ.ಎಲ.ಸಿ ಶರಣಗೌಡ ಪಾಟೀಲ್ ಬಯ್ಯಾಪುರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಕೇಂದ್ರ ಸರಕಾರ ರೈತ ವಿರೋಧಿ ಆಗಿದೆ.ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರುವ ಅರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು ಭಾರತೀಯ ಜನತ ಪಕ್ಷ ಹಾಗೂ ಜೆಡಿಎಸ ಪಕ್ಷ ಕೇಂದ್ರ ಸರಕಾರದ ವಿರುದ್ಧ ಮಾತನಾಡುತ್ತಿಲ್ಲ ಎಂದು ರಾಜ್ಯ ಕೃಷಿ ಸಚಿವರಾದ ಎನ ಚಲುವರಾಯ ಸ್ವಾಮಿ ಹೇಳಿದರು
ರಾಜ್ಯದ ಕೃಷಿ ಇಲಾಖೆಯಲ್ಲಿ ಯಾವದೆ ಹಣದ ಕೊರತೆ ಇಲ್ಲ ರೈತರಿಗೆ ಬಿತ್ತನೆ ಸಮಯಕ್ಕೆ ಸರಿಯಾಗಿ ಬೀಜ, ಗೂಬ್ಬರ, ರಾಸಯಾನಿಕ , ಕ್ರೀಮಿನಾಶಕಗಳನ್ನು ಶೇ ೯೦% ಒದಗಿಸಲಾಗಿದೆ ಆಯ್ದ ರೈತರಿಂದ ಬಿತ್ತನೆ ಬೀಜ ಖರೀದಿಸುವಾಗ ದರ ಹೆಚ್ಚಾಗಿರುತ್ತದೆ ರಾಜ್ಯದಲ್ಲಿ ಕೃಷಿಹೊಂಡಕ್ಕೆ ಮಹತ್ವ ನೀಡಲಾಗಿದ್ದು ಇನ್ನೂ ಹೆಚ್ಚಿನ ಅನುದಾನ ನೀಡಲಾಗುವದು ಕಾಲುವೆಯ ಕೊನೆ ಭಾಗದ ಭತ್ತ ಬೆಳೆಯವು ರೈತರಿಗೆ ಕೃಷಿ ಹೊಂಡದಿAದ ಅನುಕೂಲವಾಗಿದೆ ೫ ಗ್ಯಾರಂಟಿಗಳು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗಿದ್ದು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದಿದ್ದೆ.
ಲಿಂಗಸುಗೂರ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳ ವಿರುದ್ಧ ಅವ್ಯವಹಾರ ದೂರು ಬಂದಿದ್ದು ಎರಡು ಮೂರು ದಿವಸದಲ್ಲಿ ಸೂಕ್ತ ಕ್ರಮ ಜರಗಿಸಲಾಗುವದು, ಬಿತ್ತನೆ ಬೀಜ ಹಾನಿಯಾದ ಕೆಲ ಜಿಲ್ಲೆಗಳಲ್ಲಿ ಎರಡನೇ ಭಾರಿ ಬೀಜಗಳನ್ನು ವಿತ್ತರಿಸಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ, ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಪಾಮಯ್ಯ ಮುರಾರಿ, ಮಲ್ಲಣ್ಣ ವಾರದ, ಗುಂಡಪ್ಪ ನಾಯಕ, ಶಶಿಧರ ಪಾಟೀಲ ಆಶಿಹಾಳ, ಚನ್ನಾರೆಡ್ಡಿ ಬಿರಾದರ ಆದನಗೌಡ ಪಾಟೀಲ್ ಇದ್ದರು.

WhatsApp Group Join Now
Telegram Group Join Now
Share This Article