ಸರ್ಜಾಪುರ ಗ್ರಾ,ಪಂ ಪಿಡಿಓ ಹಣ ದುರ್ಬಳಕೆ ಕ್ರಮಕ್ಕೆ ಸಚಿವರಿಗೆ ಮನವಿ

Laxman Bariker
ಸರ್ಜಾಪುರ ಗ್ರಾ,ಪಂ ಪಿಡಿಓ ಹಣ ದುರ್ಬಳಕೆ ಕ್ರಮಕ್ಕೆ ಸಚಿವರಿಗೆ ಮನವಿ
WhatsApp Group Join Now
Telegram Group Join Now

ಸರ್ಜಾಪುರ ಗ್ರಾ,ಪಂ ಪಿಡಿಓ ಹಣ ದುರ್ಬಳಕೆ ಕ್ರಮಕ್ಕೆ ಸಚಿವರಿಗೆ ಮನವಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಸರ್ಜಾಪೂರ ಗ್ರಾಮಪಂಚಾಯ್ತಿಯ ಪಿಡಿಓ ಶೋಭಾರಾಣಿಯವರು ಸ್ವಂತ ಗಂಡನ ಹೆಸರಿನಲ್ಲಿ ಕೃಷಿಹೊಂಡ ನಿರ್ಮಾಣಮಾಡಿ ಹಣ ದುರ್ಬಳಕೆ ಆರೋಪದ ಬಗೆಗೆ ಪಂಚಾಯತ್ ರಾಜ್ಯ ಸಚಿವರಿಗೆ ಹಾಗೂ ಆಯುಕ್ತರಿಗೆ ಕುಬೇರಪ್ಪ ಎನ್ನುವವರು ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ
sಸರ್ಜಾಪೂರ ಗ್ರಾಮಪಂಚಾಯ್ತಿಯ ಅಭಿವೃದ್ದಿ ಅಧಿಕಾರಿ ಶೋಭಾರಾಣಿಯವರು ತಮ್ಮ ಗಂಡನಾದ ಮಹಾಬಲೇಶ್ವರ ಸ್ವಂತ ಜಮೀನಿನ ಸರ್ವೇ ನಂ೯೭/*/೩ರಲ್ಲಿ ನಿಯಮಬಾಹಿರವಾಗಿ ಕೃಷಿಹೊಂಡವನ್ನು ಮನರೇಗಾ ಯೋಜನೆಯಡಿಯಲ್ಲಿ ನಿರ್ಮಿಇಸಿಕೊಂಡಿರುತ್ತಾರೆ ಅದರ ಬಗೆಗೆ ತನಿಖೆ ನಡೆದು ಆರೋಪವು ಸಾಬಿತಾಗಿದೆ ಆದರೆ ಮೇಲಾಧಿಕಾರಿಗಳು ಸದರಿ ಪಿಡಿಓರವರನ್ನು ಅಮಾನತ್ ಗೊಳಿಸಿರುವುದಿಲ್ಲ
ಅಲ್ಲದೆ ಸದರಿ ಅಭಿವೃದ್ದಿ ಅಧಿಕಾರಿಗಳು ತಮ್ಮ ಸ್ವಂತ ಜಮೀನಿಲ್ಲಿ ಕೃಷಿಹೊಂಡ ನಿರ್ಮಿಇಸಿಕೊಂಡು ಕೆಲಸ ಮಾಡಿದ ಕೂಲಿಕಾರ್ಮೀಕರಿಗೆ ಹಣಪಾವತಿಸಿ ಪ್ರಕರಣ ಹೊರಬರುತ್ತಿರುವಂತೆ ಮುಗ್ದ ಕೂಲಿಕಾರ್ಮಿಕರಿಗೆ ನೋಟೀಸ್ ನೀಡಿ ಹಣಮರಳಿಸುವಂತೆ ಒತ್ತಾಐಇಸಿ ಹಣಪಡೆದು ಪುನಃ ಹಣವನ್ನು ಸರಕಾರಕ್ಕೆ ಮರುಪಾವತಿಸಿದ್ದಾರೆ ಕೂಲಿಕಾರ್ಮಿಕರು ಶ್ರಮವಹಿಸಿ ನಿರ್ಮಿಇಸಿದ ಕಾರ್ಯಕ್ಕೆ ಪ್ರತಿಫಲವಾಗಿ ಕೂಲಿ ಪಡೆದಿರುತ್ತಾರೆ ಆದರೆ ಕಾರ್ಮಿಕರ ಶ್ರಮಕ್ಕೆ ದೊರೆತ ಕೂಲಿಹಣವನ್ನು ವಾಪಸ್ ಕಸಿದುಕೊಂಡು ಸರಕಾರಕ್ಕೆ ಜಮಾ ಮಾಡಿಇರುವ ಪಿಡಿಓ ರವರು ಸ್ಥಳಿಯರಾಗಿದ್ದು ದರ್ಪತೋರಿಸಿದ್ದಾರೆ ಸ್ವಂತ ಗ್ರಾಮದವರೆಂದು ಬಂಡವಾಳ ಮಾಡಿಕೊಂಡು ಕೂಲಿಕಾರ್ಮಿಕರಿಂದ ಹಣ ವಾಪಸ್ ಪಡೆದು ಮರಳಿಸಿದ್ದಾರೆ
ಸ್ಥಳಿಯರಾದ ಪಿಡಿಓ ಶೋಭಾರಾಣಿ ಬಲಾಡ್ಯ ರಾಜಕೀಯ ಬೆಂಬಲ ಹೊಂದಿದ್ದು ಪತಿ ಮಹಾಬಲೇಶ್ವರ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು ಬಡವರಿಗಾಗಿ ಇರುವ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ಇವರ ಮೇಲೆ ಸೂಕ್ತಕ್ರಮ ಜರುಗಿಸಬೇಕು ಹಾಗೂ ಸಹಕರಿಸುತ್ತಿರುವ ಅಧಿಕಾರಿಯ ಮೇಲೆಯು ಕ್ರಮ ಜರುಗಿಸಬೇಕೆಂದು ಸಚಿವರಿಗೆ ಬರೆದು ಒತ್ತಾಯಿಸಿದ್ದಾರೆ

WhatsApp Group Join Now
Telegram Group Join Now
Share This Article