ಗೋಲಪಲ್ಲಿ ಬಳಿ ಬಸ್ಸಿಗೆ ಕಲ್ಲು ತೂರಿ ದರೊಡೆಗೆ ಯತ್ನ
ಕಲ್ಯಾಣ ಕರ್ನಾಟಕ ವಾರ್ತೆ
ಹಟ್ಟಿ ಚಿನ್ನದ ಗಣಿ: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಗುರುಗುಂಟಾ ಸಮೀಒದ ಗೊಲಪಲ್ಲಿ ಬಳಿ ಡಕಾಯಿತರು ಬಸ್ಸುಗಳಿಗೆ ಕಲ್ಲು ತೂರಿ ದರೊಡೆಗೆ ಯತ್ನ ಮಾಡಿದ ಘಟನೆ ಜರಿಗಿದೆ.
ಮಂಗಳವಾರ ಬೆಳಿಗ್ಗೆ 2 ಘಂಟೆ ಸಮಯದಲ್ಲಿ . ಬೀದರ್, ಕಲಬುರಗಿ, ಔರದ್ ಕಡೆಯಿಂದ ಬಳ್ಳಾರಿಗೆ ತೆರಳಬೇಕಿದ್ದ ಸುಮಾರು 30 ಅಧಿಕ ಬಸ್ಸಿಗೆ ಡಕಾಯಿತರು ಕಲ್ಲು ತೂರಿದ್ದಾರೆ, ಒಬ್ಬ ಮಹಿಳೆ ಗಾಯಗೊಂಡಿದ್ದು ಲಿಂಗಸುಗೂರು ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ.
30ಕ್ಕೂ ಬಸ್ಸಿನ ಗಾಜು.ಕಿಡಕಿಗಳು ಕಲ್ಲಿನ ಹೊಡೆತ್ತಕ್ಕೆ ಪುಡಿಯಾಗಿವೆ, ಸ್ಧಳಕ್ಕೆ ಲಿಂಗಸುಗೂರು ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡಕಾಯಿತರು ಬಸ್ಸಿನ ಮೇಲೆ ದಾಳಿ ನಡೆಸಿದ ಬಗ್ಗೆ ದೂರು ಸಲ್ಲಿಸಲಾಗುವುದು ಎಂದು ಬಸ್ಸಿನ ಚಾಲಕರು ಮಾಹಿತಿ ನೀಡಿದರು.