ದಾಸಶ್ರೇಷ್ಠ ಕನಕದಾಸರ ಜಯಂತಿ ಅದ್ದೂರಿ ಆಚರಣೆ
ಸಮಸಮಾಜ ನಿರ್ಮಾಣದಲಿ ಕನಕದಾಸರ ಕೊಡುಗೆ ಅಪಾರ-ಎಸಿ ಬಸವಣೆಪ್ಪ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಸಂತಕವಿ ಕನಕದಾಸರು ಸಮಸಮಾಜ ನಿರ್ಮಾಣದ ಕನಸು ತಮ್ಮ ಸಾಹಿತ್ಯದಲ್ಲಿ ಕಾಣುತ್ತಿದ್ದು ಸಮಾನತೆಯ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶಟ್ಟಿ ಹೇಳಿದರು
ಪಟ್ಟಣದ ಸರಕಾರಿ ಪಿಯು ಕಾಲೇಜು ಆವರಣದಲ್ಲಿ ತಾಲೂಕಾಡಳಿತದಿಂದ ಏರ್ಪಡಿಸಿದ ಕನಕ ಜಯಂತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡುತ್ತಾ ಮೇಲು ಕೀಳು ಭಾವನೆ ಸಮಾಜದಲ್ಲಿರುವ ಸ್ಥರಗಳನ್ನು ರಾಗಿ ಮತ್ತು ಭತ್ತ ಧಾನ್ಯಗಳನ್ನು ದ್ಯೋತಕವಾಗಿಟ್ಟುಕೊಂಡು ರಾಗಿ ಬಡವರ ಪರವಾದರೆ ಭತ್ತ ಶ್ರೀಮಂತರ ಪರ ಇವುಗಳ ಸಂಭಾಷಣೆಯ ಮೂಲಕ ರಾಮಧಾನ್ಯ ಚರಿತೆಯಲ್ಲಿ ಸಮಾಜದ ಮೇಲು ಕೀಳು ಭಾವನೆಯನ್ನು ಹೊರಹಾಕಿ ಎಲ್ಲರೂ ಇಲ್ಲಿ ಸಮಾನರು ಎನ್ನುವ ಸಮಾನತೆ ಸಾರುವ ಸಾಹಿತ್ಯ ಅವರದಾಗಿತ್ತು ಅವರು ಪ್ರಮುಖವಾಗಿ ಯದು ಕೃತಿಗಳು ಹಾಗೂ ಕೀರ್ತನೆಗಳ ಮೂಲಕ ಸಮಾಜದ ಕಳಕಳಿಯನ್ನು ವ್ಯಕ್ತಪಡಿಸಿದ್ದು ಅಂತಹ ಮಹನಿಯರ ವಿಚಾರಗಳನ್ನು ಅರಿಯುವುದರ ಮೂಲಕ ಸಮಾಜ ಮುನ್ನಡೆಯಬೇಕಾಗಿದೆ ಎಂದರು
ನAತರ ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತಸಹಾಯಕ ಫಕೀರಪ್ಪ ಕುರಿಯವರ ಶಾಸಕ ಮಾನಪ್ಪ ವಜ್ಜಲರ ಸಂದೇಶವನ್ನು ಓದುತ್ತಾ ನೆರೆಯ ಮಹಾರಾಷ್ಟçದ ಚುನಾವಣೆಯ ನಿಮಿತ್ಯವಾಗಿ ಪಕ್ಷವು ಉಸ್ತುವಾರಿಯಾಗಿ ಹಾಕಿರುವುದರಿಂದ ಸದರಿ ಕಾರ್ಯಕ್ರಮ್ಕಕೆ ಹಾಜರಾಗಲು ಆಗಿಲ್ಲ ಭಕ್ತ ಕನಕದಾಸರು ಶ್ರೇಷ್ಟ ವಿಚಾರಗಳನ್ನು ನಾಡಿಗೆ ನೀಡಿದ್ದಾರೆ ಅವರ ವಿಚಾರ ನಾಡಿಗೆ ದೊರೆಯಲಿ ಎಂದು ಆಶಯ ವ್ಯಕ್ತಪಡಿಸಿದರು
ನಂತರ ಶರಣಪ್ಪ ತೆಮ್ಮಿನಾಳ ಕನಕದಾಸರ ಜೀವನ ಕುರಿತು ಸುಧೀರ್ಘವಾದ ಉಪನ್ಯಾಸವನ್ನು ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಬಾಬುರೆಡ್ಡಿ ಮುನ್ನೂರವರು ತಮ್ಮ ಅಧ್ಯಕ್ಷಿಯ ನುಡಿಗಳನ್ನು ನುಡಿದರು
ಕಾರ್ಯಕ್ರಮದ ಮೊದಲಿಗೆ ಸರಕಾರಿ ಪಿಯು ಕಾಲೇಜು ಆವರಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು ಮೆರವಣಿಗೆಯು ಪಟ್ಟಣದ ಅಂಚೆಕಛೇರಿ ಪುರಸಭೆ ಮಾರ್ಗವಾಗಿ ಗಡಿಯಾರ ಚೌಕ, ಶಾಸಕರ ಶಾಲೆ ಮಾರ್ಗವಾಗಿ ಬಸ್ ನಿಲ್ದಾಣ ವೃತ್ತ ಮೂಲಕ ಸಾಗಿಬಂದಿತು
ಈ ಸಂದರ್ಭದಲ್ಲಿ ತಹಸೀಲ್ದಾರ ಶಂಶಾಲಂ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಪಿಐ ಪುಂಡಲಿಕ್ ಪಟತ್ತರ್, ಹಾಲುಮತ ಸಮಾಜದ ಅಧ್ಯಕ್ಷ ಕುಪ್ಪಣ್ಣ ಕೊಡ್ಲಿ ಕಸಬಾಲಿಂಗಸಗೂರು,ತಾಲೂಕಾ ಆರೋಗ್ಯಾಧಿಕಾರಿ ಅಮರೇಶ ಪಾಟೀಲ್, ಸಿಡಿಪಿಓ ಎಂ ಡಿ ಗೋಕುಲ್ ಸೇರಿದಂತೆ ಇದ್ದರು