ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರಿಂದ ಕ್ರಮಕ್ಕೆ ಒತ್ತಾಯ

Laxman Bariker
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರಿಂದ ಕ್ರಮಕ್ಕೆ ಒತ್ತಾಯ
WhatsApp Group Join Now
Telegram Group Join Now

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರಿಂದ ಕ್ರಮಕ್ಕೆ ಒತ್ತಾಯ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದೇಶದಲ್ಲಿ ಹಲವಾರು ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಖಾಯಂಗೊಳಿಸಬೇಕೆAದು ಒತ್ತಾಯಿಸಿ ಕೇಂದ್ರ ಸಚಿವರಿಗೆ ಬರೆದ ಮನವಿಯನ್ನು ಸಿಡಿಪಿಓ ರವರ ಮೂಲಕ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು
ದೇಶದಲ್ಲಿ ಸುಮಾರು ೧೪ ಲಕ್ಷ ಅಂಗನವಾಡಿಗಳಿದ್ದು ಸುಮಾರು ೨೫ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದಾರೆ ದೇಶದ ಅಭಿವೃದ್ದಿಯಲ್ಲಿ ಇವರ ಪಾತ್ರ ಅಗಾಧವಾಗಿದೆ ಆದರೆ ಕಡಿಮೆ ವೇತನಕ್ಕೆ ಕೆಲಸ ಮಾಡುವುದು ಕೆಲಸ ಖಾಯಂ ಇಲ್ಲದಿರುವುದು ಸಾಕಷ್ಟು ತೊಂದರೆಯಾಗಿದೆ
ದೇಶದಲ್ಲಿ ಕಳೆದ ೫ದಶಕಗಳಿಂದ ಕೆಲಸ ಮಾಡುತ್ತಿದ್ದು ಹಲವಾರು ತೊಂದರೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚೂರಿ ಕುರಿತಂತೆ ಗುಜರಾತ ಹೈಕೋರ್ಟ ಆದೇಶ ಮತ್ತು ಸುಪ್ರಿಂಕೋರ್ಟ ಆದೇಶ ತಕ್ಷಣವೇ ಜಾರಿಗೊಳಿಸಬೇಕು ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರದ ಗುಣಮಟ್ಟವನ್ನು ಸುಧಾರಿಸಬೇಕು ಹೆಚ್ಚಿನ ಮೊತ್ತದೊಂದಿಗೆ ಎಲ್ಲಾ ಹೆರಿಗೆಗಳಿಗೆ ಎಲ್ಲಾ ಮಹಿಳೆಯರಿಗೆ ಹೆರಿಗೆ ಪ್ರಯೋಜನದ ಹಕ್ಕನ್ನು ಖಚಿತಪಡಿಸುವುದು ಖಾಲಿ ಹುದ್ದೆಗಳನ್ನು ಭರ್ತಿಮಾಡುವುದು ೪೫ ಮತ್ತು ೪೬ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳ ಶಿಫಾರಸ್ಸುಗಳನ್ನು ಜಾರಿಗೆ ತರಲು ಕ್ರಮವಹಿಸುವುದು ತಿಂಗಳಿಗೆ ಕನಿಷ್ಟ ವೇತನ ೨೬೦೦೦ ಹಾಗೂ ಸಾಮಾಜಿಕ ಭದ್ರತೆಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕಾ ಸಮಿತಿವತಿಯಿಂದ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು
ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷೆ ಸರಸ್ವತಿ ಈಚನಾಳ ಗೌರವಾಧ್ಯಕ್ಷೆ ಲಕ್ಷಿö್ಮÃ ನಗನೂರು, ಕಾಯದರ್ಶಿ ಮಹೇಶ್ವರಿ ಹಟ್ಟಿ ಸುಮಿತ್ರಾ ಗುರುಗುಂಟಾ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article