ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ವಕ್ಫ ಬೋರ್ಡ್ಯಿಂದ ರೈತರಿಗೆ ಅನ್ಯಾಯ ತನಿಖೆ ಆಗಬೇಕು:ವಜ್ಜಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ :ರಾಜ್ಯದಲ್ಲಿ ರೈತರ ಭೂಮಿ ದಾಖಲೆಗಳಲ್ಲಿ ವಕ್ಫ ಬೋರ್ಡ ಎಂದು ನಮೂದಿಸಿದ್ದು ಸರಕಾರದಿಂದ ಅನ್ಯಾಯವಾಗಿದ್ದು ಸಮಗ್ರ ತನಿಖೆ ಆಗಬೇಕು ಹಾಗೂ ರೈತರಿಗೆ ನ್ಯಾಯ ಸಿಗಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಅವರು ಪಟ್ಟಣದ ನಮ್ಮ ಕರ್ನಾಟಕ ಸೇನೆ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಧ್ವಜಾರೋಹಣ ಮಾಡಿ ಮಾತನಾಡಿ ರೈತರಿಗೆ ತೊಂದರೆಯಾದರೆ ನಾವು ಸುಮ್ನೆಯಿರುವುದಿಲ್ಲ ವಕ್ಫ ಬೋರ್ಡ ಲಿಂಗಸುಗೂರು ತಾಲೂಕಿನಲ್ಲಿ ಅವರಿಸಿದ್ದು ನನ್ನ ಮಗನ ಪಹಣಿಯಲ್ಲಿವು ನಮೂದಿಸಿದ್ದು ಯಾವುದೆ ಅಧಿಕಾರಿ ರಾಜಕರಣಿಗಳ ಕೈವಾಡವಾಗಿರಬಹುದು ನಮ್ಮಂತವರಿಗೆ ಈ ರೀತಿಯಾದರೆ ಸಾಮಾನ್ಯ ರೈತರ ಗÀತಿ ಏನು ಕೂಡಲೆ ಸರಕಾರ ಮಧ್ಯ ಪ್ರವೇಶಿಸಿ ರೈತರಿಗೆ ಆಗಿರುವÀ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.
ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದರು ಕ್ಷೇತ್ರದ ಅಭಿವೃದ್ಧಿ ಮುಖ್ಯ ಆರೋಗ್ಯ ಶಿಕ್ಷಣ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವದು ನಾನು ಎಂದು ಜಾತಿ ರಾಜಕಾರಣ ಮಾಡಿಲ್ಲ ಚುನಾವಣೆಯಲ್ಲಿ ಮಾತ್ರ ಜಾತಿ ರಾಜಕಾರಣ ನಂತರ ಅಭಿವೃದ್ದಿಯಲ್ಲಿ ಇರಬಾರದು ದಕ್ಷ ಆಡಳಿತಗಾರ ಪ್ರಧಾನಿ ನರೇಂದ್ರ ಮೋದಿಯಿಂದ ಕೋವಿಡ್ ಸಮಯದಲ್ಲಿ ಹಾಗೂ ಬಾಹ್ಯ ರಾಷ್ಟçಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ದೇಶದ ರಕ್ಷಣೆಯಾಗಿದೆ ನಮ್ಮ ರಾಜ್ಯಕ್ಕೆ ಪಕ್ಕದ ಗೋವಾ, ತಮಿಳುನಾಡಿನಿಂದ, ಯಾವಾಗಲೂ ಕಿರಿಕಿರಿ ಇರುತ್ತದೆ ರಾಜ್ಯದ ಕನ್ನಡ ಪರ ಸಂಘಟಣೆಗಳು ನೆಲ ಜಲ ಭಾಷೆ ವಿಷಯ ಬಂದಾಗ ಸೈನಿಕರಂತೆ ಹೂರಾಡುವಲ್ಲಿ ಮೊದಲಿಗರು ಇದರಲ್ಲಿ ನಮ್ಮ ಕರ್ನಾಟಕ ಸೇನೆ ಮುಂಚೂಣಿಯಲ್ಲಿ ಇರುತ್ತದೆ ಬೆಂಗಳೂರು ಹಾಗೂ ಬೆಳಾಗವಿಯಲ್ಲಿ ಹಾಗೂ ಇತರೆ ಭಾಗದಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಪರ ಸಂಘಟಣೆಗಳು ಹೋರಾಟದಲ್ಲಿ ಮುಖ್ಯ ಪಾತ್ರವಹಿಸುತ್ತೆವೆ ಎಂದು ಹೇಳಿದರು.
ಆಡಳಿತ ಕಾಂಗ್ರೆಸ್ಸ ಪಕ್ಷ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಲತಾಯಿ ಧೋರಣೆ ತೋರಿಸುತ್ತಿದ್ದು ನೀರಾವರಿ ಯೋಜನೆಗಳ ಜಾರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಯರಡೋಣ ಮುರುಘೇಂದ್ರ ಶಿವಾಚಾರ್ಯರು ವಹಿಸಿದರು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಕೆ ಕೊಂಡಪ್ಪ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಿವಾರಜ ನಾಯ್ಕ, ಬಿಜೆಪಿ ಮುಖಂಡರಾದ ವೀರಣಗೌಡ ಲೆಕ್ಕಿಹಾಲ, ಆಯ್ಯಪ್ಪ ಮಾಳೂರು, ಲಿಂಗನದೇವಿಕೇರಿ, ಶ್ರೀನಿವಾಸ ಅಮ್ಮಾಪೂರ, ವೆಂಕಟೇಶ ಕೋಪಲ್,ಶೇಕರಪ್ಪ ಸುರುಪುರ, ಬದ್ರಿ, ಬಸವರಾಜ ನಾಯಕ, ನಿರುಪಾಧಿ ಹಿರೇಮಠ, ಮಹಾಂತಯ್ಯ, ವೆಂಕಟೇಶ ಗುಡದನಾಳ ಚಂದ್ರಕಾAತ, ರಮೇಶ ಭೋವಿ ಹಾಗೂ ಇತರರು ಇದ್ದರು.
ಕಾರ್ಯಕ್ರಮದ ನಂತರ ನಮ್ಮ,ಕರ್ನಾಟಕ ಸೇನೆ ಕರ್ಯಕರ್ತರಿಂದ ಕನ್ನಡಾಂಬೆ ಭಾವಚಿತ್ರ ಮೇರವಣೆಗೆ ಪಟ್ಟಣÀದಲ್ಲಿ ನಡೆಯಿತ್ತು