ಲಿಂಗಸಗೂರ: ಮುಸುಕುಧಾರಿ ಕಳ್ಳರಿಂದ ಕಳ್ಳತನಕ್ಕೆ ಯತ್ನ, ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ : ಗಸ್ತು ಹೆಚ್ಚಳ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು, ನ. 10:ಪಟ್ಟಣದ ಗುಡದನಾಳ ರಸ್ತೆಗೆ ಹೊಂದಿಕೊಂಡಿರುವ ಹೊರವಲಯದ ಓಣಿಯಲ್ಲಿನ ಎಕ್ಸ್ಪರ್ಟ್ ಶಾಲೆ ಹಿಂಬದಿ ಮನೆಯೊಂದಕ್ಕೆ ಶುಕ್ರವಾರ ತಡರಾತ್ರಿ ಆಗಮಿಸಿದ ಮುಸುಕುಧಾರಿ ನಾಲ್ಕೆದು ಜನರ ಕಳ್ಳರ ತಂಡವೊಂದು ಆಗಮಿಸಿ ಮೇಲ್ಬಾಗದ ಮನೆಯೊಂದಕ್ಕೆ ಪ್ರವೇಶಿಸಿಸಲು ಯತ್ನಿಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಪಟ್ಟಣದ ಅಮರೇಶ ಪಾಕರಡ್ಡಿ ಮನೆಗೆ ಮಾರಕಾಸ್ತçಗಳನ್ನು ಹೊಂದಿದ ಮುಸುಕುಧಾರಿ ನಾಲ್ಕೆöÊದು ಜನ ವ್ಯಕ್ತಿಗಳು ಕಳ್ಳತನಕ್ಕೆ ಆಗಮಿಸಿದ್ದಾರೆ. ಮನೆಯ ಮೇಲ್ಭಾಗಕ್ಕೆ ಬಂದು ಸುತ್ತಮುತ್ತ ಸಿಸಿ ಟಿವಿ ಅಳವಡಿಸಿರುವುದನ್ನು ಗಮನಿಸಿದ ಕಳ್ಳರು ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದ ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಅಲ್ಲಿಂದ ತೆರಳಿದ ಕಳ್ಳರ ತಂಡ ನಿವೃತ್ತ ಎಎಸ್‌ಐ ಭೀಮಾಶಂಕರ ಅವರ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ ಮನೆ ಜಾಲಾಡಿದ ಕಳ್ಳರು ಯಾವುದೇ ಸಾಮಗ್ರಿ ಸಿಗದ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬೆಳಗ್ಗೆ ಸಿಸಿ ಟಿವಿ ಗಮನಿಸಿದ ಅಮರೇಶ ಪಾಕರಡ್ಡಿ ಪೊಲೀಸರಿಗೆ ಮಾಹಿತಿ ನೀಡಿದಾಕ್ಷಣ ತಕ್ಷಣ ಕಾರ್ಯಪ್ರವೃತ್ತರಾದ ಸಿಪಿಐ ನೇತೃತ್ವದಲ್ಲಿ ಪೊಲೀಸರು ತಂಡ ಸಿಸಿ ಟಿವಿ ದೃಶ್ಯ ಪರಿಶೀಲಿಸಿ ಸುತ್ತಮುತ್ತಲ ಹಾಗೂ ಪಟ್ಟಣದ ಹೊರವಲಯದಲ್ಲಿ ಪರಿಶೀಲನೆ ನಡೆಸಿದರು. ಪಿಐ ಪುಂಡಲೀಕ ಪಟಾತ್ತಾರ್ ಕಳ್ಳತನಕ್ಕೆ ಯತ್ನಿಸಿದ ಭೀಮಾಶಂಕರ ಅವರ ಮನೆಗೆ ಬೆರಳಚ್ಚು ತಜ್ಞರನ್ನು ಕರೆಯಿಸಿ ಕಳ್ಳರ ಮಾಹಿತಿ ಸಂಗ್ರಹಕ್ಕೆ ಮುಂದಾದರು.
ಇತ್ತಿಚಿಗೆ ಪಟ್ಟಣದಲ್ಲಿ ಮನೆಗಳ ಮತ್ತು ಬೈಕ್‌ಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ನಾನಾ ವಾರ್ಡುಗಳಲ್ಲಿ ಮನೆಗಳ ಮತ್ತು ಬೈಕ್‌ಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತಿಚಿಗೆ ಅಮರ್ ನರ್ಸಿಂಗ್ ಹೋಮ್ ಬಳಿಯ ಸಹಕಾರಿ ಸಂಘ ಸೇರಿ ಇತರೆ ವಾಣಿಜ್ಯ ಮಳಿಗೆಗಳ ಬೀಗ ಮುರಿದು ಸಿಸಿ ಕ್ಯಾಮರಾ ಬೇರೆಡೆ ತಿರುಗಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಮರೆ ಮಾಚುವ ಮುನ್ನವೇ ಮುಸುಕುಧಾರಿ ಕಳ್ಳರ ಆಗಮನ ಜನರ ನಿದ್ದೆಗೆಡಿಸಿದೆ. ಇತ್ತಿಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಕಳ್ಳತನದಂತಹ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಸೂಚಿಸಿದ್ದರು.
ಹೇಳಿಕೆ: ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಕಂಡು ಬರುತ್ತಿರುವ ಕಾರಣ ಕಳೆದ ಎರಡು ದಿನಗಳಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಾಲ್ಕು ತಂಡಗಳನ್ನು ರಚಿಸಿ ರಾತ್ರಿ ಗಸ್ತು ಹಾಕಲಾಗುತ್ತಿದೆ. ಸಿಸಿ ಟಿವಿ ಗಮನಿಸಿದಾಗ ಉತ್ತರ ಭಾರತದ ನಟೋರಿಯಸ್ ಕಳ್ಳರಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಾಕ್ಷಣ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮಾಹಿತಿ ನೀಡಲಾಗಿದ್ದು ಜಿಲ್ಲೆಯ ಯಾವುದೇ ಭಾಗದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಚಲನವಲನ ಕಂಡು ಬಂದರೆ ಕೂಡಲೇ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು: —– ಪುಂಡಲೀಕ ಪಟಾತ್ತಾರ್, ಸಿಪಿಐ ಲಿಂಗಸುಗೂರು.